Thursday, July 23, 2026
Homeರಾಜ್ಯಬೆಂಗಳೂರು ; ಸಿಸಿಬಿ ಪೊಲೀಸರಿಂದ ಬೃಹತ್ ಕಾರ್ಯಾಚರಣೆ : ಆ್ಯಕ್ಸಿಸ್​ ಬ್ಯಾಂಕ್​ ನೌಕರ ಸೇರಿ ಒಟ್ಟು...

ಬೆಂಗಳೂರು ; ಸಿಸಿಬಿ ಪೊಲೀಸರಿಂದ ಬೃಹತ್ ಕಾರ್ಯಾಚರಣೆ : ಆ್ಯಕ್ಸಿಸ್​ ಬ್ಯಾಂಕ್​ ನೌಕರ ಸೇರಿ ಒಟ್ಟು 8 ಜನರ ಬಂಧನ..!

ಬೆಂಗಳೂರು ; ವಿಐಪಿ ಷೇರು ಟ್ರೇಡಿಂಗ್ ಹೆಸರಿನಲ್ಲಿ ಹಣ ಹೂಡಿಕೆ ಮಾಡುವಂತೆ ಹೇಳಿ ವಂಚನೆ ಮಾಡುತಿದ್ದಆ್ಯಕ್ಸಿಸ್​ ಬ್ಯಾಂಕ್​ ಮ್ಯಾನೇಜರ್ ಸೇರಿ ೮ ಜನರ ಬಂದಿಸಿದ ಘಟನೆ ನಡೆದಿದೆ.ಬೆಂಗಳೂರಿನ ನಾಗರಭಾವಿ ಆ್ಯಕ್ಸಿಸ್​ ಬ್ಯಾಂಕ್​ನಲ್ಲಿ ಇಂತಹದೊಂದು ಘಟನೆ ನಡೆದಿದ್ದು ಇದೇ ಮೊದಲ ಬಾರಿ ಇಂತಹ ಆರೋಪದಲ್ಲಿ ಬ್ಯಾಂಕ್​ ಮ್ಯಾನೆಜರೊಬ್ಬರು ಬಂಧನಕ್ಕೆ ಒಳಗಾಗಿದ್ದಾರೆ.

ಷೇರ್​ ಟ್ರೇಡಿಂಗ್​ನಲ್ಲಿ ಹಣ ಹೂಡಿಕೆ ಮಾಡುವಂತೆ ಹೇಳಿ. ಅವರನ್ನು ನಂಬಿಸಿ ವಂಚಿಸಲಾಗಿದೆ ಎಂಬ ಆರೋಪ ಬ್ಯಾಂಕ್ ಸಿಬ್ಬಂದಿಗಳ ವಿರುದ್ಧ ಕೇಳಿ ಬಂದಿದೆ. ಅವರ ಮಾತನ್ನು ಕೇಳಿ 1.5 ಕೋಟಿ ರೂಪಾಯಿ ಹಣ ಹೂಡಿಕೆ ಮಾಡಿದ್ದರು ಜನರು ನಂತರ ಷೇರು ಮಾರುಕಟ್ಟೆಯಲ್ಲಿ 28 ಕೋಟಿ ರೂಪಾಯಿ ಲಾಭ ಬಂದಿರುವುದು ಗೊತ್ತಾಗಿ, ಹಣವನ್ನು ವಾಪಸ್ ಪಡೆಯಲು ಹೋಗಿದ್ದಾರೆ. ಈ ವೇಳೆ 75 ಲಕ್ಷ ರೂಪಾಯಿ ಕೊಡುವಂತೆ ಆರೋಪಿಗಳು ಡಿಮ್ಯಾಂಡ್ ಇಟ್ಟಾಗ, ತಾವು ವಂಚನೆಗೆ ಒಳಗಾಗಿದ್ದೇವೆ ಎಂಬುದು ಜನರಿಗೆ ಗೊತ್ತಾಗಿದೆ. ಇದೇ ವಿಚಾರವಾಗಿ ಸೈಬರ್ ಠಾಣೆಯಲ್ಲಿ ಸುಮಾರು 245 ದೂರುಗಳು ದಾಖಲಾಗಿವೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಬ್ಯಾಂಕ್ ಮ್ಯಾನೇಜರ್ ಕಿಶೋರ್, ಸೇಲ್ಸ್​ಮೆನ್ ಮನೋಹರ್, ರಾಕೇಶ್ ಕಾರ್ತಿಕ್ ಸೇರಿದಂತೆ ಅಕೌಂಟ್ ಹೋಲ್ಡರ್ ಕೆಂಚೇಗೌಡ, ರಘು, ಲಕ್ಷ್ಮೀಕಾಂತ್, ಮಾಲ ಎಂಬುವವರನ್ನು ಬಂಧಿಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

Most Popular