Friday, November 22, 2024
Flats for sale
Homeರಾಜಕೀಯಬೆಂಗಳೂರು : ಸಿದ್ದರಾಮಯ್ಯ ಸರಕಾರದ ಮೂಡ ಹಗರಣವನ್ನು ಬಯಲಿಗೆಳೆದ ನಿಷ್ಠಾವಂತ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ವರ್ಗಾವಣೆ.

ಬೆಂಗಳೂರು : ಸಿದ್ದರಾಮಯ್ಯ ಸರಕಾರದ ಮೂಡ ಹಗರಣವನ್ನು ಬಯಲಿಗೆಳೆದ ನಿಷ್ಠಾವಂತ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ವರ್ಗಾವಣೆ.

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ನಾಡಿನಲ್ಲಂತೂ ಹಗರಣ ಹೆಚ್ಚಾಗಿದೆ ,ಚಾಮರಾಜನಗರದಲ್ಲಿ ಸುನಿಲ್ ಬೋಸು ,ಮೈಸೂರಲ್ಲಿ ಸಿ.ಎಂ ಸಿದ್ದರಾಮಯ್ಯ ಮಗ ಯತೀದ್ರ ಸಿದ್ದರಾಮಯ್ಯ ಅಂತೂ ಲೂಟಿ ಹೊಡೆಯುದರಲ್ಲಿ ನಿಸ್ಸಿಮನಾಗಿದ್ದಾನೆ.ಆದರೆ ಹಗರಣ ಬಯಲಿಗೆಳೆದ ನಿಷ್ಠಾವಂತ ಜಿಲ್ಲಾಧಿಕಾರಿಯನ್ನು ಈಗಾಗಲೇ ವರ್ಗಾವಣೆ ಮಾಡಲಾಗಿದೆ.

ಮುಡಾ ಹಗರಣದ ಬಗ್ಗೆ ಪತ್ರ ಬರೆದಿದ್ದ ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ನೂತನ‌ ಜಿಲ್ಲಾಧಿಕಾರಿಯಾಗಿ ಲಕ್ಷ್ಮಿಕಾಂತ ರೆಡ್ಡಿಯನ್ನು ನೇಮಕ ಮಾಡಿದೆ.

ಈ ಹಿಂದೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಲಕ್ಷ್ಮಿ ಕಾಂತರೆಡ್ಡಿ ಈಗ ಮೈಸೂರು ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿದೆ. ಬೆಂಗಳೂರಿನ ಕೆಯುಐಡಿಎಫ್​ಸಿಯಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದ ಲಕ್ಷ್ಮಿಕಾಂತ್​ ರೆಡ್ಡಿಯನ್ನು ಮೈಸೂರಿಗೆ ವರ್ಗಾವಣೆ ಮಾಡಲಾಗಿದೆ. ಡಾ.ಕೆ.ವಿ.ರಾಜೇಂದ್ರ ಅವರನ್ನು ಪ್ರವಾಸೋದ್ಯಮ ನಿರ್ದೇಶಕರಾಗಿ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ.

ಮೈಸೂರು ಅಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ವಿಚಾರದಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ. 50:50 ಅನುಪಾತದಡಿ ಸರಿಯಾಗಿ ಹಂಚಿಕೆ ಮಾಡದೇ ಬೇಕಾಬಿಟ್ಟಿ ಹಂಚಿಕೆ ಮಾಡಲಾಗಿದ್ದು, ಅಂದಾಜು 5 ಸಾವಿರ ಕೋಟಿಯಷ್ಟು ಭಾರೀ ಅಕ್ರಮ ನಡೆದಿದೆ ಎಂಬ ಆರೋಪಗಳು ಇವೆ.ಆದರೆ ಹಗರಣ ಅಗಿದಂತೂ ನಿಜ ಇದು ಮೈಸೂರಿನ ಜನತೆಗೆ ತಿಳಿದ ವಿಚಾರ ಎಂದು ಹಳ್ಳಿ ಹಕ್ಕಿ ಮಾಜಿ ಸಂಸದ ವಿಶ್ವನಾಥ್ ತಿಳಿಸಿದ್ದಾರೆ.

ಮುಡಾದ 50:50 ಸೈಟು ವಿಷಯದಲ್ಲಿ ಈ ಹಿಂದೆ ಡಿಸಿ ಕೆ.ವಿ ರಾಜೇಂದ್ರರವರು ಸರ್ಕಾರದ ಕಾರ್ಯದರ್ಶಿಗೆ ಸರ್ಕಾರಕ್ಕೆ ಸುದೀರ್ಘ ಪತ್ರ ಬರೆದಿದ್ದರು. ಆದರೆ ಆಡಳಿತದಲ್ಲಿರುವ ಸರಕಾರ ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂದು ವಿಶ್ವನಾಥ್ ತಿಳಿಸಿದ್ದಾರೆ ಒಟ್ಟಿನಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಜನಸಾಮನ್ಯರಿಗೆ ನೆಮ್ಮದಿ ಇಲ್ಲದಂತಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular