Saturday, March 14, 2026
Flats for sale
Homeರಾಜಕೀಯಬೆಂಗಳೂರು : ವಿಧಾನಸೌಧದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಿದ್ದು ನಿಜ : ವಿಧಿವಿಜ್ಞಾನ ತಜ್ಞ .

ಬೆಂಗಳೂರು : ವಿಧಾನಸೌಧದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಿದ್ದು ನಿಜ : ವಿಧಿವಿಜ್ಞಾನ ತಜ್ಞ .

ಬೆಂಗಳೂರು : ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ನಂತರ ಹಿಂದೂಗಳ ವಿರುದ್ಧ ಅನೇಕ ದೌರ್ಜನ್ಯ ನಡೆಯುತ್ತಿದ್ದು ಕಳೆದ ವಾರ ಸಂತ ಜೆರೊಸಾ ಶಾಲೆಯಲ್ಲಿ ಕೂಡ ನಡೆದದ್ದು ನಿಜ ಎಂದು ಹಿಂದೂ ಮುಖಂಡ ಮಾಹಿತಿ ನೀಡಿದ್ದಾರೆ. ಆದರೆ ರಾಜಕೀಯ ನಾಯಕರು ಮುಂದೆ ಬಂದು ಶಿಕ್ಷಕಿಯ ವಿರುದ್ಧ ಕೇಸು ದಾಖಲಿಸದಂತೆ ಪ್ರಯತ್ನ ಪಟ್ಟದ್ದು ಎಲ್ಲರಿಗು ತಿಳಿದ ವಿಚಾರ ಎಂದು ಅವರು ತಿಳಿಸಿದ್ದಾರೆ . ವಿರೋಧ ಪಕ್ಷ ಬಿಜೆಪಿ ಕಾಂಗ್ರೆಸ್ ಸರಕಾರದ ವಿರುದ್ದ ಅನೇಕ ಹೋರಾಟ ನಡೆಸುತ್ತ ಬಂದದ್ದು ಎಲ್ಲರಿಗೆ ತಿಳಿದ ವಿಚಾರ ಇದೀಗ ಈ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿರುವುದು ಕಂಡುಬಂದಿದೆ.

ವಿಧಾನಸೌಧದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಿದ್ದು ನಿಜ” ಎಂಬುದಾಗಿ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞ ಡಾ.ಬಿ.ಎನ್‌.ಫಣೀಂದ್ರ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.“ ಈ ಬಗ್ಗೆ ಮಾತನಾಡಿದ ಅವರು ಎಫ್‌ಎಸ್‌ಎಲ್‌ ವರದಿಯಲ್ಲೂ ಇದನ್ನೇ ಉಲ್ಲೇಖಿಸಿರುವುದಾಗಿ ಫಣೀಂದ್ರ ತಿಳಿಸಿದ್ದಾರೆ.

ಕಾಂಗ್ರೆಸ್‌ನ ಮೂವರು ಸದಸ್ಯರ ಪೈಕಿ ನಾಸೀರ್‌ ಹುಸೇನ್ ಬೆಂಬಲಿಗರು ಪಾಕಿಸ್ತಾನ ಪರ ಜೈಕಾರ ಕೂಗಿದ್ದಾರೆ. ಈ ಪ್ರಕರಣದ ಕುರಿತು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಸಿದ್ಧಗೊಂಡಿದ್ದು ಗೃಹ ಇಲಾಖೆಗೆ ವರದಿ ಸಲ್ಲಿಕೆಯಾಗಿದೆ ಎಂದು ತಿಳಿಸಿದ್ದಾರೆ.ಸಿಎಂ ಸಿದ್ದರಾಮಯ್ಯ ಅವರು ಎರಡು ದಿನಗಳ ಎಫ್ಎಸ್ಎಲ್ ರಿಪೋರ್ಟ್ ಕೊಡುವಂತೆ ಸೂಚಿಸಿದ್ದರು. ಅಂತೆಯೇ ವರದಿ ಸಿದ್ದಗೊಂಡಿದ್ದು ಈಗ ವರದಿಯ ಸ್ಫೋಟಕ ಮಾಹಿತಿಯು ಲಭ್ಯವಾಗಿದೆ.ಆಡಳಿತಾರೂಢ ಕಾಂಗ್ರೆಸ್ ಸರಕಾರ ಈ ವಿಚಾರದ ಬಗ್ಗೆ ಮೃದು ದೋರಣೆ ಮಾಡುತ್ತಿದ್ದು,ಈ ವರದಿಯನ್ನು ಕೂಡ ಜನಸಾಮನ್ಯರಿಗೆ ತಿಳಿಸುವಲ್ಲಿ ವಿಫಲವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

ರಾಜ್ಯಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ವೇಳೆ ಘಟನೆ ನಡೆದ ಸಂದರ್ಭದಲ್ಲಿ ಸಂಭ್ರಮಾಚರಣೆ ವೇಳೆ ರೆಕಾರ್ಡ್‌ ಆದ ವಿಡಿಯೊ ಹಾಗೂ ಆಡಿಯೊಗಳನ್ನು ಎರಡು ಹಂತದಲ್ಲಿ ಪರಿಶೀಲನೆ ಮಾಡಲಾಗಿದೆ.ಘೋಷಣೆ ಕೂಗಿದವರ ಆಡಿಯೊ, ಬಾಯಿ, ತುಟಿಯ ಚಲನವಲನಗಳನ್ನು ಕೂಲಂಕಷವಾಗಿ ಗಮನಿಸಲಾಗಿದೆ.ಒಬ್ಬನು ನಾಸೀರ್‌ ಸಾಬ್‌ ಜಿಂದಾಬಾದ್‌ ಎಂದೂ, ಮತ್ತೊಬ್ಬನು ಪಾಕಿಸ್ತಾನ್‌ ಜಿಂದಾಬಾದ್‌ ಎಂಬುದಾಗಿ ಘೋಷಣೆ ಕೂಗಿದ್ದು ನಿಜ. ಹಾಗೊಂದು ವೇಳೆ, ಘೋಷಣೆ ಕೂಗಿದ ಆರೋಪಿಗಳನ್ನು ಕರೆದುಕೊಂಡು ಬಂದರೆ, ಅವರ ಧ್ವನಿ ತಪಾಸಣೆ ಮೂಲಕ ಇವರೇ ಘೋಷಣೆ ಕೂಗಿದ್ದಾರೆ ಎಂಬುದನ್ನು ಪತ್ತೆಹಚ್ಚಬಹುದು” ಎಂದು ಫಣೀಂದ್ರ ಅವರು ಮಾಹಿತಿ ನೀಡಿದ್ದಾರೆ.

ಜಯಗಳಿಸಿದ ಸಂದರ್ಭದಲ್ಲಿ ಹಾರವನ್ನು ಹಾಕಿ ಸಂಭ್ರಮಿಸಿದ್ದಾರೆ. ಇದೇ ವೇಳೆ, ಕೆಲವು ಪಾಪಿಗಳು “ಪಾಕಿಸ್ತಾನ್‌ ಜಿಂದಾಬಾದ್‌” ಎಂದು ಘೋಷಣೆ ಕೂಗಿದ್ದಾರೆ ಎನ್ನಲಾಗಿದೆ. ಅದರ ವಿಡಿಯೊ ಎಲ್ಲೆಡೆ ವೈರಲ್ ಆಗಿದ್ದವು. ಪ್ರಕರಣದ ಕುರಿತು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಲಂಕಷ ತನಿಖೆಗೂ ಆದೇಶಿಸಿದ್ದಾರೆ.ಆದರೆ ಈ ಬಗೆಗ್ ಸರಕಾರ ಈ ವರದಿಯನ್ನು ಮುಚ್ಚಿಹಾಕಲು ಯತ್ನಿಸುತ್ತದೋ ಎಂಬುದನ್ನು ಕಾದು ನೋಡಬೇಕಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular