Thursday, July 23, 2026
Homeರಾಜಕೀಯಬೆಂಗಳೂರು : ವಿಧಾನಸಭೆಯ ಹೊರಗೆ 'ಪಾಕಿಸ್ತಾನ ಪರ' ಘೋಷಣೆ ಕೂಗಿದ ಕಾಂಗ್ರೆಸ್ ಸಂಸದ ಸೈಯದ್ ನಾಸೀರ್...

ಬೆಂಗಳೂರು : ವಿಧಾನಸಭೆಯ ಹೊರಗೆ ‘ಪಾಕಿಸ್ತಾನ ಪರ’ ಘೋಷಣೆ ಕೂಗಿದ ಕಾಂಗ್ರೆಸ್ ಸಂಸದ ಸೈಯದ್ ನಾಸೀರ್ ಹುಸೇನ್ ಬೆಂಬಲಿಗನ ಬಂಧನ.

ಬೆಂಗಳೂರು : ಶತ್ರು ರಾಷ್ಟ್ರ ಪಾಕಿಸ್ತಾನದ ಪರ ಜಿಂದಾಬಾದ್ ಎಂದು ಘೋಷಣೆ ಕೂಗಿದೆ ಕಾಂಗ್ರೆಸ್ ಸಂಸದ ಸಯ್ಯದ್ ನಸೀರ್ ಹುಸೇನ್ ಅವರ ಬೆಂಬಲಿಗನನ್ನು ಬ್ಯಾಡಗಿ ಪಟ್ಟಣ ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ವ್ಯಾಪಾರಿ ಮೊಹಮ್ಮದ್ ಶಾಫಿ ನಾಶಿಪುಡಿ ಎಂದು ಗುರುತಿಸಲಾಗಿದ್ದು ರಾಜ್ಯಸಭಾ ಚುನಾವಣೆಯಲ್ಲಿ ಹುಸೇನ್ ಜಯಗಳಿಸಿದ ನಂತರ ಅವರ ಬೆಂಬಲಿಗರು ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಿದ್ದ ವಿಡಿಯೋ ಸಾಮಾಜಿಕಜಾಲತಾಣದಲ್ಲಿ ವೈರಲ್ ಆಗಿದ್ದು ಜನಸಾಮಾನ್ಯರು ಕೂಡ ಆಕ್ರೋಶ ಹೊರಹಾಕಿದ್ದರು.

ಪಾಕಿಸ್ತಾನ ಪರ ಘೋಷಣೆಯ ವಿಡಿಯೋದಲ್ಲಿನ ಧ್ವನಿಯನ್ನು ಪರಿಶೀಲಿಸಲು ಶಫಿ ಅವರ ಧ್ವನಿ ಮಾದರಿಯನ್ನು ತೆಗೆದುಕೊಳ್ಳಲಾಗಿದ್ದು,ಘಟನೆ ನಡೆದ ಸಂದರ್ಭದಲ್ಲಿ ಮೊಹಮ್ಮದ್ ಶಫಿ ಸೈಯದ್ ನಾಸರ್ ಹುಸೇನ್ ಅವರೊಂದಿಗೆ ವಿಧಾನಸೌಧದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

24 ಗಂಟೆ ಕಳೆದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ, ಅವರಿಂದ ನಾವು ಏನನ್ನು ನಿರೀಕ್ಷಿಸಬಹುದು ಎಂದುವಿರೋಧ ಪಕ್ಷದ ನಾಯಕ ಆರ್ ಅಶೋಕ್ ವಿಧಾನಸಭೆಯಲ್ಲಿ ಹೇಳಿದ್ದು ಆಡಳಿತ ಪಕ್ಷ ಕಾಂಗ್ರೆಸ್ ಗೆ ತಲೆತಗ್ಗಿಸುವಂತಾಗಿದೆ . ಪಾಕಿಸ್ತಾನ ಪರ ಘೋಷಣೆಯ ವಿಡಿಯೋದಲ್ಲಿನ ಧ್ವನಿಯನ್ನು ಪರಿಶೀಲಿಸಲು ಶಫಿ ಅವರ ಧ್ವನಿ ಮಾದರಿಯನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.ಈದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular