Thursday, December 12, 2024
Flats for sale
Homeಜಿಲ್ಲೆಬೆಂಗಳೂರು : ವಿದೇಶಕ್ಕೆ ಹೋಗುತ್ತೇನೆಂದು ಏರ್ ಪೋರ್ಟ್ ಒಳಗೆ ಹೋಗಿ ಪೋಷಕರನ್ನು ನಂಬಿಸಿದ ಮಗಳು, ಅನ್ಯಕೋಮಿನ...

ಬೆಂಗಳೂರು : ವಿದೇಶಕ್ಕೆ ಹೋಗುತ್ತೇನೆಂದು ಏರ್ ಪೋರ್ಟ್ ಒಳಗೆ ಹೋಗಿ ಪೋಷಕರನ್ನು ನಂಬಿಸಿದ ಮಗಳು, ಅನ್ಯಕೋಮಿನ ಯುವಕನ ಜೊತೆ ಪರಾರಿ,ದೂರು ದಾಖಲು..!

ಬೆಂಗಳೂರು : ಈ ಜೀವನದಲ್ಲಿ ಹೆತ್ತು ಹೊತ್ತ ಪೋಷಕರು ಇನ್ನೇನನ್ನು ನೋಡಬೇಕೋ ಆ ದೇವನೇ ಬಲ್ಲಾ…ವಿದೇಶದಲ್ಲಿ ನನಗೆ ಕೆಲಸ ಸಿಕ್ಕಿದೆ. ಅಲ್ಲಿಗೆ ಹೋಗಬೇಕು. ಪಾಸ್‌ಪೋರ್ಟ್‌ ಕೂಡ ರೆಡಿ ಮಾಡಿಕೊಂಡಿದ್ದೇನೆ. ವಿಮಾನದ ಟಿಕೆಟ್‌ ಕೂಡ ಬುಕ್‌ ಆಗಿದೆ ಎಂದು ಪೋಷಕರಿಗೆ ನಂಬಿಸಿದ್ದಳು. ಅದರಂತೆ ಪೋಷಕರು ಕೂಡ ಮಗಳಿಗೆ ಏನೋ ಒಳ್ಳೆಯದಾಗುತ್ತದೆ ಎಂದುಕೊಂಡು ಬೆಂಗಳೂರು ಏರ್‌ಪೋರ್ಟ್‌ಗೆ ಬಂದು ಆಕೆಯ ಏರ್‌ಪೋರ್ಟ್‌ನ ಒಳಹೋಗುವವರೆಗೂ ಕಾದು ಮನೆಗೆ ಹೊರಟಿದ್ದರು.ಇನ್ನೇನು ಮಗಳು ವಿದೇಶಕ್ಕೆ ಹೊರಟು ಕಷ್ಟಪರಿಹಾರವಾಗುತ್ತದೆಂದು ಕನಸು ಕಂಡ ಪೋಷಕರಿಗೆ ದಿಗಿಲು ಬಡಿದಂತಾಗಿದೆ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಳಹೋಗುವವರೆಗೂ ಕಾದು ಹೆತ್ತವರು ಮನೆಗೆ ಹೊರಟಿದ್ದರು. ಆದರೆ, ಅಪ್ಪ-ಅಮ್ಮ ಅಲ್ಲಿಂದ ಹೋಗುತ್ತಿರುವುದನ್ನೇ ಕಾಯುತ್ತಿದ್ದ ಯುವತಿ, ಅಲ್ಲಿಂದ ಅನ್ಯಕೋಮಿನ ಯುವಕನ ಜೊತೆ ಎಸ್ಕೇಪ್‌ ಆಗಿದ್ದಾಳೆ. ಹೆತ್ತ ಅಪ್ಪ-ಅಮ್ಮನಿಗೆ ಮಗಳು ನಿದರ್ಯವಾಗಿ ಮಾಡಿದ ಮೋಸದ ಕಥೆ. ಮಕ್ಕಳನ್ನು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಬೆಳೆಸಿದ ಹೆತ್ತವರು, ತಮ್ಮ ಕೊನೆಗಾಲದಲ್ಲಿ ಆಸರೆ ಆಗಬೇಕು ಎಂದು ಬಯಸುತ್ತಾರೆ. ಆದರೆ, ಇಲ್ಲೊಬ್ಬ ಯುವತಿ ತನ್ನ ಲವರ್‌ ಜೊತೆ ಎಸ್ಕೇಪ್‌ ಆಗುವ ಸಲುವಾಗಿ ಮಾಡಿದ್ದು ಮಹಾಮೋಸ ಮಾಡಿದ್ದು ಸಮಾಜವೇ ತಲೆತಗ್ಗಿಸುವಂತಾಗಿದೆ.

ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಕೊಲ್ಲಮೊಗ್ರದ ಯುವತಿ ಈ ವರ್ಷವಷ್ಟೇ ಪಿಯುಸಿ ತೇರ್ಗಡೆಹೊಂದಿದ್ದಳು ಬಡತನದಲ್ಲಿಯೇ ಇದ್ದ ಕುಟುಂಬಕ್ಕೆ ಮಗಳಿಗೆ ವಿದೇಶದಲ್ಲಿ ಕೆಲಸ ಸಿಕ್ಕ ಸುದ್ದಿಕೇಳಿ ಸಂಭ್ರಮ ಮುಗಿಲು ಮುಟ್ಟಿತ್ತು. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ವತಃ ಈಕೆಯನ್ನು ಬಿಟ್ಟು, ಒಳ್ಳೆಯದಾಗಲಿ ಎಂದು ಹರಸಿ ಬಂದಿದ್ದಾರೆ.ವಿಮಾನ ನಿಲ್ದಾಣದ ಒಳಹೊಕ್ಕು ದೂರದಿಂದಲೇ ಅಪ್ಪಅಪ್ಪನಿಗೆ ಟಾಟಾ ಮಾಡಿದ್ದಾರೆ. ಮಗಳನ್ನು ಏರ್‌ಪೋರ್ಟ್‌ಗೆ ಬಿಟ್ಟು ಮನೆಗೆ ಬಂದ ಕುಟುಂಬದವರು, ತಮ್ಮ ವಾಟ್ಸಾಪ್‌ ಸ್ಟೇಟಸ್‌ಗಳಲ್ಲಿ ಇದರ ಮಾಹಿತಿಗಳನ್ನೂ ಕೂಡ ಹಂಚಿಕೊಂಡಿದ್ದಾರೆ.

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇನ್ನೇನು ವಿಮಾನ ಹೊರಟಿರಬಹುದೆಂದು ಕರೆಮಾಡಿದ್ದಾಗ ಆಕೆಯ ಫೋನ್‌ ರಿಂಗ್‌ ಆಗಿದೆ. ಫೋನ್‌ ರಿಂಗ್‌ ಆಗಿದ್ದಿರಂದ ಮನೆಯವರಿಗೆ ಅನುಮಾನ ಶುರುವಾಗಿದೆ. ಈಗಾಗಲೇ ವಿಮಾನ ಹೊರಟ ಸಮಯವಾಗಿದೆ. ಹಾಗಿದ್ದರೂ ಆಕೆಯ ಮೊಬೈಲ್‌ ರಿಂಗ್‌ ಆಗೋದಕ್ಕೆ ಹೇಗೆ ಸಾಧ್ಯ ಎನ್ನುವ ಅನುಮಾನ ಬಂದಿದೆ. ಆ ಬಳಿಕ ಕೆಲ ದಿನಗಳ ಬಳಿಕ ಆಕೆಯನ್ನು ಧರ್ಮಸ್ಥಳ ಬಸ್‌ನಲ್ಲಿ ನೋಡಿರುವುದಾಗಿ ಕೆಲವರು ತಿಳಿಸಿದ್ದಾರೆ. ಇದು ಆಗಸ್ಟ್‌ 25 ರಂದು ನಡೆದ ಘಟನೆಯಾಗಿದೆ.

ವಿಮಾನ ನಿಲ್ದಾಣದ ಒಳಹೊಕ್ಕು ಡ್ರಾಮಾ ಮಾಡಿದ್ದ ಪುತ್ರಿ ಆ ಬಳಿಕ ಅಲ್ಲಿಂದ ಅನ್ಯಕೋಮಿನ ಯುವಕನ ಜೊತೆಗೆ ಎಸ್ಕೇಪ್‌ ಆಗಿದ್ದಾಳೆ. ಮಗಳು ಕಾಣೆ ಆಗಿರುವ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲು ಪೋಷಕರು ಬಂದರೆ, ಅವರನ್ನು ಬೆಂಗಳೂರಿನಲ್ಲೇ ದೂರು ನೀಡಬೇಕೆಂದು ಪೊಲೀಸರು ಕಳುಹಿಸಿಕೊಟ್ಟಿದ್ದಾರೆ. ಇನ್ನು ಹಿಂದೂ ಸಂಘಟನೆಗಳು ಕೂಡ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಯುವತಿಯ ಪೋಷಕರು ಬೆಂಗಳೂರಿನಲ್ಲಿ ಮಗಳು ನಾಪತ್ತೆಯಾಗಿರುವ ದೂರು ದಾಖಲು ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular