ಬೆಂಗಳೂರು : ವಾಹನ ತಪಾಸಣಾ/ಪರಿಶೀಲನೆ ಸಮಯದಲ್ಲಿ ಸಿಬ್ಬಂದಿಗಳು ವಾಹನ ಚಾಲಕರಿಗೆ ಕಿರುಕುಳ, ಹಲ್ಲೆ, ಮತ್ತು ದುರ್ನಡತೆ ತೋರುತ್ತಿರುವ ಬಗ್ಗೆ. ಪೊಲೀಸ್ ಅಧಿಕಾರಿ ಆವಾಚ್ಯ ಶಬ್ದಗಳ ಬಳಕೆ ಮಾಡುತ್ತಿರುವ ದೂರು ಕೇಳಿಬಂದಿದ್ದು, ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಸAಚಾರ ಮತ್ತು ರಸ್ತೆ ಸುರಕ್ಷತೆ ಇಲಾಖೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಆರ್. ಹಿತೇಂದ್ರ ಅವರು ಆದೇಶ ಹೊರಡಿಸಿದ್ದಾರೆ.
ಈ ವಿಷಯಕ್ಕೆ ಸಂಬAಧಿಸಿದAತೆ, ಉಲ್ಲೇಖಿತ ದೂರುದಾರರ ಅರ್ಜಿಯಲ್ಲಿ ರಾಜ್ಯ ಪೊಲೀಸ್ ಇಲಾಖೆಯು ಶಿಸ್ತಿನ ಇಲಾಖೆಯಾಗಿದ್ದು, ಕೆಲವು ಅಧಿಕಾರಿ ಸಿಬ್ಬಂದಿಗಳು ತೋರುತ್ತಿರುವ ದುರ್ನಡತೆ, ಅಧಿಕಾರ ದುರ್ಬಳಕೆಯಿಂದ ಸAಪೂರ್ಣ ಪೊಲೀಸ್ ಇಲಾಖೆಯ ಗೌರವಕ್ಕೆ ಧಕ್ಕೆ ಉಂಟಾಗುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದಿದೆ. ಆದ್ದರಿಂದ ಪೊಲೀಸ್ ಸಿಬ್ಬಂದಿಗಳು ದAಡದ ಮೊತ್ತವನ್ನು ವಸೂಲಿ ಮಾಡುವಾಗ ಸಾರ್ವಜನಿಕರೊಂದಿಗೆ ಸೌಜನ್ಯದಿಂದ , ವಾಹನ ಚಾಲಕರೊಂದಿಗೆ ಗೌರವದಿಂದ ವರ್ತಿಸುವಂತೆ ಹಾಗೂ ಸಾವರ್ಜನಿಕರ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ, ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.


