Thursday, March 12, 2026
Flats for sale
Homeಕ್ರೀಡೆಬೆಂಗಳೂರು : ರಿಂಕು ಸಿಂಗ್ ಗೆ ಬ್ಯಾಟ್ ಗಿಫ್ಟ್ ಕೊಟ್ಟ ವಿರಾಟ್ ಕೊಹ್ಲಿ.

ಬೆಂಗಳೂರು : ರಿಂಕು ಸಿಂಗ್ ಗೆ ಬ್ಯಾಟ್ ಗಿಫ್ಟ್ ಕೊಟ್ಟ ವಿರಾಟ್ ಕೊಹ್ಲಿ.

ಬೆಂಗಳೂರು : ಮಾರ್ಚ್ 29 ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್‌ಸಿಬಿ-ಕೆಕೆಆರ್ ಪಂದ್ಯದ ಬಳಿಕ ವಿಶೇಷ ಘಟನೆಯೊಂದು ನಡೆದಿದೆ. ಕೆಕೆಆರ್ ತಂಡದ ಡ್ರೆಸ್ಸಿಂಗ್ ರೂಮ್‌ಗೆ ತೆರಳಿರುವ ಆರ್‌ಸಿಬಿ ಆಟಗಾರ ವಿರಾಟ್ ಕೊಹ್ಲಿ ತಮ್ಮ ಬ್ಯಾಟನ್ನು ಕೆಕೆಆರ್ ಆಟಗಾರ ರಿಂಕು ಸಿಂಗ್‌ಗೆ ಉಡುಗೊರೆಯಾಗಿ ನೀಡಿದ್ದಾರೆ.

ಉತ್ತರ ಪ್ರದೇಶ ಮೂಲದ ಕ್ರಿಕೆಟರ್ ಆಗಿರುವ ರಿಂಕು ಸಿಂಗ್ 16 ನೇ ಆವೃತ್ತಿ ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದ ಕೊನೆ ಓವರ್‌ನಲ್ಲಿ ಅಮೋಘ 5 ಸಿಕ್ಸರ್‌ಗಳನ್ನು ಬಾರಿಸಿ ಭಾರಿ ಪ್ರಶಂಸೆಗೆ ಪಾತ್ರರಾಗಿದ್ದರು. ಈ ಹಿನ್ನೆಲೆಯಲ್ಲಿ ಕೆಕೆಆರ್-ಆರ್‌ಸಿಬಿ ಪಂದ್ಯದ ಬಳಿಕ ವಿರಾಟ್ ನೇರವಾಗಿ ಹೋಗಿ ರಿಂಕು ಸಿಂಗ್‌ರನ್ನು ಭೇಟಿ ಮಾಡಿ ಬ್ಯಾಟ್ ನೀಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವಿರಾಟ್‌ರ ಈ ಉಡುಗೊರೆಗೆ ಸಂತಸ ವ್ಯಕ್ತಪಡಿಸಿರುವ ರಿಂಕು ಸಿಂಗ್ ವಿರಾಟ್‌ರನ್ನು ತಬ್ಬಿಕೊಂಡಿರುವ ಫೋಟೋವನ್ನು ತಮ್ಮ ಸಾಮಾಜಿಕ ತಾಣದಲ್ಲಿ ಹಂಚಿಕೊAಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular