ಬೆಂಗಳೂರು : ಉಗ್ರರ ಉಪಟಳ ಜಾಸ್ತಿಯಾಗಿದ್ದು ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲೇ ಕುಳಿತು ಸಂಚಿತ ಕೃತ್ಯ ನಡೆಸಲು ತಯಾರಿಮಾಡುತಿರುವ ಉಗ್ರರು ಬೆಂಗಳೂರು ಸೇರಿ ಇನ್ನಿತರ ಕಡೆ ನೆಲೆಯೂರಿದ್ದಾರೆ ಎಂಬ ಮಾಹಿತಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು (ಎನ್‌ಐಎ) ಗೆ ದೊರೆತಿದೆ ಇದರಿಂದ ನಗರದ ೬ ಕಡೆಗಳಲ್ಲಿ ಬುಧವಾರ ದಾಳಿ ನಡೆಸಿದೆ. ಭಯೋತ್ಪಾದನೆ ಸಂಚಿನ ಪ್ರಕರಣದ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಆರ್.ಟಿ.ನಗರ, ಹೆಬ್ಬಾಳ ಸೇರಿದಂತೆ ೬ ಕಡೆಗಳಲ್ಲಿ ಎನ್‌ಐಎ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ.ದಾಳಿಯ ಸಂದರ್ಭದಲ್ಲಿ ಕೆಲವು ದಾಖಲೆಗಳನ್ನು ಎನ್‌ಐಎ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕಳೆದವಾರ ಕೂಡ ಅಧಿಕಾರಿಗಳು ಮಹಾರಾಷ್ಟç ಮತ್ತು ಬೆಂಗಳೂರು ನಗರದಲ್ಲಿ ದಾಳಿ ನಡೆಸಿದ್ದರು.
ಇಸ್ಲಾಮಿಕ್ ಸ್ಟೇಟ್ (ಐಎಸ್)ನೊಂದಿಗೆ ಸಂಪರ್ಕ ಹೊAದಿದ ಹಿನ್ನೆಲೆಯಲ್ಲಿ ಕಳೆದ ವಾರ ಎನ್‌ಐಎ ಅಧಿಕಾರಿಗಳು ನಗರದಲ್ಲಿ ಉದ್ಯಮಿಯೊಬ್ಬರನ್ನು ಬಂಧಿಸಿತ್ತು. ನಂತರ ಅವರನ್ನು ವಿಚಾರಣೆ ನಡೆಸಿದ ವೇಳೆ ಲಭ್ಯವಾದ ಮಾಹಿತಿ ಮೇರೆಗೆ ಬುಧವಾರ ಕೂಡ ಹಲವು ಕಡೆ ದಾಳಿ ನಡೆಸಿ ಮಾಹಿತಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
2008 ರ ಬೆಂಗಳೂರು ಸರಣಿ ಸ್ಫೋಟದ ಪ್ರಮುಖ ಸಂಚುಕೋರ ಎಂದು ಗುರುತಿಸಲಾದ ಟಿ.ನಾಸಿರ್ ಜೈಲಿನಲ್ಲಿದ್ದ ವೇಳೆ ಐದಾರು ಮಂದಿ ವಿಚಾರಣಾ ಖೈದಿಗಳ ಮನಪರಿವರ್ತನೆ ಮಾಡಿದ್ದಾನೆ ಎಂಬ ಶAಕೆ ಎನ್‌ಐ ಅಧಿಕಾರಗಳಿಗೆ ಲಭ್ಯವಾಗಿತ್ತು. ಅಲ್ಲದೆ ಕಳೆದ ವಾರ ಬಂಧಿತನಾಗಿದ್ದ ಉದ್ಯಮಿ ನೀಡಿದ್ದ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.


