ಬೆಂಗಳೂರು : ಹೊಸ ವರ್ಷ 2026ರ ಸ್ವಾಗತದ ಅಬ್ಬರದಲ್ಲಿ ಕರ್ನಾಟಕದ ಮದ್ಯ ಪ್ರಿಯರು ಹಳೆಯ ಎಲ್ಲಾ ದಾಖಲೆಗಳನ್ನು ಅಳಿಸಿ ಹಾಕಿದ್ದಾರೆ. ಕಳೆದ ಮೂರು ವರ್ಷಗಳಲ್ಲೇ ಈ ಬಾರಿ ಅತಿ ಹೆಚ್ಚು ಮದ್ಯ ಮಾರಾಟವಾಗಿದ್ದು, ಮೂರು ದಿನಗಳಲ್ಲಿ ರಾಜ್ಯ ಅಬಕಾರಿ ಇಲಾಖೆಯ ಖಜಾನೆಗೆ ರೂ. 587.51 ಕೊಟಿ ಹರಿದುಬಂದಿದ್ದು, ಈ ವರ್ಷ ರೂ. 745.84 ಕೋಟಿ ಆದಾಯ ಗಳಿಸಿದೆ.
ಡಿಸೆಂಬರ್ 29 ರಿಂದ 31 ರವರೆಗಿನ ಕೇವಲ ಮೂರು ದಿನಗಳಲ್ಲಿ ರಾಜ್ಯಾದ್ಯಂತ ಮದ್ಯದ ಹೊಳೆ ಹರಿದಿದೆ. ಈ ಅವಧಿಯಲ್ಲಿ ಒಟ್ಟು 9.84 ಲಕ್ಷ ಬಾಕ್ಸ್ ಐಎಂಎಲ್ ಮತ್ತು 6.64 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗುವ ಮೂಲಕ ಇಲಾಖೆಯ ನಿರೀಕ್ಷೆಯನ್ನು ಮೀರಿಸಿದೆ. ಕಳೆದ 2024ನೇ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಐಎಂಎಲ್ ಮಾರಾಟದಲ್ಲಿ 1.59ಲಕ್ಷ ಬಾಕ್ಸ್ ಮತ್ತು ಬಿಯರ್ ಮಾರಾಟದಲ್ಲಿ 1.61 ಲಕ್ಷ ಬಾಕ್ಸ್ ಏರಿಕೆಯಾಗಿದೆ. ವಿಶೇಷವೆಂದರೆ, ಹೊಸ ವರ್ಷದ ಹಿಂದಿನ ದಿನವಾದ ಡಿಸೆಂಬರ್ 31ಕ್ಕಿAತಲೂ, ಡಿಸೆಂಬರ್ 30ರಂದು ಅತಿ ಹೆಚ್ಚು ಮಾರಾಟ ದಾಖಲಾಗಿದೆ. ಅಂದು ಒAದೇ ದಿನ ರೂ. 261.೦9 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ. ಮದ್ಯ ಮಾರಾಟವು ಈ ಭಾರೀ ಏರಿಕೆಯು ರಾಜ್ಯದ ಆರ್ಥಿಕತೆಗೆ ದೊಡ್ಡ ಮಟ್ಟದ ಶಕ್ತಿ ನೀಡಿದೆಯಾದರೂ, ಸಾರ್ವಜನಿಕ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತವಾಗಿದೆ.
ಮೂರು ದಿನಗಳ ಮದ್ಯ
ಮಾರಾಟದ ಅಂಕಿ-ಅAಶ:
ಡಿ.29:ರೂ. 122.32 ಕೋಟಿ
ಡಿ.30: ರೂ. 261.09 ಕೋಟಿ
ಡಿ.31: ರೂ. 204.10 ಕೋಟಿ
ಒಟ್ಟು:ರೂ. 587.51 ಕೋಟಿ


