Thursday, March 12, 2026
Flats for sale
Homeವಾಣಿಜ್ಯಬೆಂಗಳೂರು : ರಾಜ್ಯದಲ್ಲಿ ಹೊಸ ವಾಹನ ಖರೀದಿ ಮಾಡುವವರಿಗೆ ಬಿಗ್ ಶಾಕ್,ಶೇ. 3ರಷ್ಟು ತೆರಿಗೆ ಹೆಚ್ಚಳ.

ಬೆಂಗಳೂರು : ರಾಜ್ಯದಲ್ಲಿ ಹೊಸ ವಾಹನ ಖರೀದಿ ಮಾಡುವವರಿಗೆ ಬಿಗ್ ಶಾಕ್,ಶೇ. 3ರಷ್ಟು ತೆರಿಗೆ ಹೆಚ್ಚಳ.

ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ಹೊಸ ವಾಹನ ಖರೀದಿ ಮಾಡುವವರಿಗೆ ತೆರಿಗೆ ಹೊರೆ ಬೀಳಲಿದೆ. ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ಅಧಿನಿಯಮ 2024 ಕ್ಕೆ ರಾಜ್ಯಪಾಲರ ಅನುಮೋದನೆ ಸಿಕ್ಕಿದೆ. ಈ ಕುರಿತು ವಿಶೇಷ ರಾಜ್ಯಪತ್ರದಲ್ಲಿ ಆದೇಶ ಹೊರಡಿಸಲಾಗಿದೆ.

ಹೊಸ ಕಾನೂನಿಯ ಅನ್ವಯ ಹೊಸದಾಗಿ ಖರೀದಿ ಮಾಡಿ ನೋಂದಣಿ ಮಾಡುವ ವಾಹನಗಳ ಮೇಲೆ ಕರ್ನಾಟಕ ಸರ್ಕಾರ ಶೇ. 3 ರಷ್ಟು ಹೆಚ್ಚುವರಿ ಸೆಸ್ ವಿಧಿಸಲಿದೆ. ಅಲ್ಲದೇ ಎಲೆಕ್ಟಿçಕ್ ವಾಹನಗಳ ಮೇಲೆ ಆಜೀವ ತೆರಿಗೆಯನ್ನು ಸಹ ಪಾವತಿ ಮಾಡಬೇಕಿದೆ.

ಮೋಟಾರು ಕಾರು, ಜೀಪು, ಓಮಿನಿ ಬಸ್, ಖಾಸಗಿ ಸೇವೆ ವಾಹನಗಳು ವಿದ್ಯುತ್ ಮೂಲಕ ಓಡುತ್ತಿದ್ದರೆ ಅದರ ದರ 25 ಲಕ್ಷಕ್ಕಿಂತ ಹೆಚ್ಚು ಇದ್ದರೆ ಶೇ. 10 ರಷ್ಟು ಲೈಫ್ ಟೈಮ್ ಟ್ಯಾಕ್ಸ್ ಪಾವತಿ ಮಾಡಬೇಕಿದೆ. ಕರ್ನಾಟಕ ಸರ್ಕಾರ 2016 ರಲ್ಲಿ ಎಲ್ಲಾ ಎಲೆಕ್ಟಿçಕ್ ವಾಹನಗಳು ತೆರಿಗೆ ಪಾವತಿ ಮಾಡುವುದರಿಂದ ವಿನಾಯಿತಿ ನೀಡಿತ್ತು. ರಸ್ತೆ ತೆರಿಗೆ ವಿನಾಯಿತಿ ಮತ್ತು ನೋಂದಣಿಗೆ ಸಹ ಶೂನ್ಯ ತೆರಿಗೆ ಘೋಷಣೆ ಮಾಡಿತ್ತು. ಸದ್ಯ ದೇಶದಲ್ಲಿಯೇ ಅತಿ ಹೆಚ್ಚು ಅಂದರೆ ಶೇ. 13 ರಿಂದ 20ರ ತನಕ ರಸ್ತೆ ತೆರಿಗೆ ಸಂಗ್ರಹ ಮಾಡುತ್ತಿರುವ ರಾಜ್ಯ ಕರ್ನಾಟಕವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular