ಬೆಂಗಳೂರು : ರಾಜ್ಯದಲ್ಲಿ ಈ ಬಾರಿ ಬಿಸಿಲಿನ ತಾಪಮಾನಕ್ಕೆ ಮದ್ಯಪ್ರಿಯರು ಚಿಲ್ಡ್ ಬಿಯರ್ ಮೊರೆ ಹೋಗಿದ್ದಾರೆ. ಮದ್ಯಪ್ರಿಯರ ಬಿಯರ್ ಬೇಡಿಕೆಗೆ ಅಬಕಾರಿ ಇಲಾಖೆಯ ಬೊಕ್ಕಸ ತುಂಬಿ ತುಳುಕಿದೆ. ಕೇವಲ 11 ದಿನಗಳಲ್ಲಿ 17 ಲಕ್ಷ ಲೀ ಕೋಲ್ಡ್ ಬಿಯರ್ ಮಾರಾಟವಾಗಿ ಹಿಂದಿನ 3 ವರ್ಷಗಳ ದಾಖಲೆ ಮುರಿದಿದೆ.
ಈ ಬಿಸಿಲಿನ ಬೇಗೆ ನೆತ್ತಿಗೆ ಏರುತ್ತಿದ್ದಂತೆ ತಂಪುಮಾಡಲು ಮದ್ಯಪ್ರಿಯರು ಹಾಟ್ ಡ್ರಿಂಕ್ಸ್ ಬಿಟ್ಟು ಕೋಲ್ಡ್ ಬಿಯರ್ನತ್ತ ವಾಲಿದ್ದಾರೆ,ಈ ವರ್ಷದಲ್ಲಿ 27 ಲಕ್ಷದ 18 ಸಾವಿರದ 461 ಬಾಟಲ್ಗಳು ಮಾರಾಟವಾಗಿದ್ದರೆ ಇದರಿಂದ ಅಂದಾಜು 46 ಕೋಟಿ 21 ಲಕ್ಷ 38 ಸಾವಿರ 461 ರುಪಾಯಿ ಸರ್ಕಾರಕ್ಕೆ ಆದಾಯ ಬಂದಿದೆ ಎಂದು ಮಾಹಿತಿ ದೊರೆತಿದೆ.ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಈ ವರ್ಷವೇ ಇಷ್ಟೊಂದು ಲೀಟರ್ ಬಿಯರ್ ಮಾರಾಟವಾಗಿರುವುದು. 2021ರಲ್ಲಿ ಬೇಸಿಗೆಯ ಅವಧಿಯಲ್ಲಿ 8.83 ಲಕ್ಷ ಲೀಟರ್ ಬಿಯರ್ ಮಾರಾಟವಾಗಿತ್ತು. 2022ರಲ್ಲಿ 9.20 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದ್ದರೇ, 2023 ರಲ್ಲಿ 13.16 ಲಕ್ಷ ಲೀಟರ್ ಬಿಯರ್ ಮಾರಾಟವಾಗಿತ್ತು. 2023ಕ್ಕೆ ಹೋಲಿಸಿದರೆ ಈ ವರ್ಷ ಬರೋಬ್ಬರಿ 4.51 ಲಕ್ಷ ಲೀಟರ್ ಬಿಯರ್ ಹೆಚ್ಚು ಮಾರಾಟ ಆಗಿದೆ.
ರಾಜ್ಯದಲ್ಲಿ ಜನಸಾಮನ್ಯರು ಫ್ರೂಟ್ ಜ್ಯೂಸುಗಳು ಹಾಗೂ ಇನ್ನಿತರ ದೇಹವನ್ನು ತಂಪು ಮಾಡುವ ಆಹಾರ ಪದಾರ್ಥ ಗಳಿಗೆ ಮೋದೆಹೋದದ್ದು ಇದೆ ಮೊದಲ ಬಾರಿ ಎಂದು ವರದಿಯಾಗಿದೆ.ಈ ಬಿಸಿಲಿಗೆ ಹಾಟ್ ಡ್ರಿಂಕ್ಸ್ ಕುಡಿದರೆ ದೇಹದ ಭಾಗಗಳಲ್ಲಿ ಉಷ್ಣಾಂಶ ಹೆಚ್ಚಾಗುತ್ತಿದ್ದು,ಪೈಲ್ಸ್ ಇನ್ನಿತರ ಕಾಯಿಲೆಗಳಿಗೆ ತುತ್ತಾಗುವುದರಿಂದ ಬಿಯರ್ ಕುಡಿಯುವುದು ಲೇಸು ಎಂದು ಮದ್ಯಪ್ರಿಯ ಯೋಗೀಶ್ ಕುಮಾರ್ ತಿಳಿಸಿದ್ದಾರೆ.ರಾತ್ರೆ ಕುಡಿದು ಬೆಳಗಿನಜಾವ ತಂಪುಮಾಡಲು ಎಳನೀರಿನ ಮೊರೆಹೋಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ ಎಂದು ತಿಳಿಸಿದ್ದಾರೆ.