ಬೆಂಗಳೂರು : ಮಧ್ಯಪ್ರಾಚ್ಯ ರಾಷ್ಟçಗಳಲ್ಲಿ ಉಂಟಾಗಿರುವ ಯುದ್ಧ ಭೀತಿಯ ಪರಿಣಾಮದಿಂದಾಗಿ ರಾಜ್ಯದಲ್ಲಿ ಆಹಾರ ಡೆಲಿವರಿ ಸೇವೆ ನೀಡುವ `ಜೊಮಾಟೋ’ ತನ್ನ ಪ್ಲಾಟ್ಫಾರ್ಮ್ ಶುಲ್ಕವನ್ನು ಶೇ.19ರಷ್ಟು ಏರಿಕೆಗೊಳಿಸಿದೆ.
ಈ ಹಿಂದೆ 12.5೦ ರೂ.ಗಳಷ್ಟು ಇದ್ದ ಪ್ಲಾಟ್ಫಾರ್ಮ್ ಶುಲ್ಕ ಇದೀಗ 14.90 ರೂ.ಗಳಿಗೆ ಏರಿಕೆ ಆಗಿದೆ. ಒಂದು ವರ್ಷದೊಳಗೆ 2 ಬಾರಿ ಪ್ಲಾಟ್ಫಾರ್ಮ್ ಶುಲ್ಕ ಹೆಚ್ಚಳ ಮಾಡಲಾಗಿದ್ದು ಪ್ರತಿ ಆರ್ಡರ್ಗೂ ಈ ಶುಲ್ಕ ಅನ್ವಯವಾಗುತ್ತದೆ. ಪ್ರತಿ ಆರ್ಡರ್ಗೆ 2.80 ರೂ. ಹೆಚ್ಚುವರಿ ಶುಲ್ಕ ಗ್ರಾಹಕರ ಮೇಲೆ ಬೀಳಲಿದೆ. ಈ ಹೆಚ್ಚಳದಿಂದ ಈಗಾಗಲೇ ದುಬಾರಿಯಾಗಿರುವ ಆನ್ಲೈನ್ ಆಹಾರ ಸೇವೆಗಳು ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ. ಇಂಧನ ಬೆಲೆ, ಡೆಲಿವರಿ ವೆಚ್ಚ ಮತ್ತು ಸರಬರಾಜು ಸಮಸ್ಯೆಗಳು ಗ್ರಾಹಕರಿಗೆ ನೇರ ಹೊರೆ ಆಗುತ್ತಿದೆ. ಇದರ ಜೊತೆಗೆ ಡೆಲಿವರಿ ಪಾಲುದಾರರಿಗೂ ಆರ್ಡರ್ಗಳ ಪ್ರಮಾಣದಲ್ಲಿ ಸ್ವಲ್ಪ ಕುಸಿತ ಕಾಣಿಸಿಕೊಳ್ಳುತ್ತಿರುವ ವರದಿಗಳು ಬರುತ್ತಿವೆ. ಜಾಗತಿಕ ಅಶಾಂತಿಯ ಪರಿಣಾಮ ಸ್ಥಳೀಯ ಜೀವನ ಶೈಲಿಯ ಮೇಲೂ ಪರಿಣಾಮ ಬೀರುತ್ತಿದೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ.
ಸ್ವಿಗ್ಗಿ ಜೊತೆ ಜೊಮ್ಯಾಟೋ ಪೈಪೋಟಿ : ಜೊಮಾಟೋದ ಪ್ರತಿಸ್ಪರ್ಧಿ ಸಂಸ್ಥೆಯಾಗಿರುವ ಸ್ವಿಗ್ಗಿ ಈಗ ಪ್ರಸ್ತುತ ತೆರಿಗೆ ಸೇರಿದಂತೆ ಪ್ರತಿ ಆರ್ಡರ್ಗೆ ಸುಮಾರು 14.99 ರೂ. ಪ್ಲಾಟ್ಫಾರ್ಮ್ ಶುಲ್ಕವನ್ನು ವಿಧಿಸುತ್ತಿದೆ. ಸಾಮಾನ್ಯವಾಗಿ ಈ ಎರಡು ಕಂಪನಿಗಳು ಒAದೇ ರೀತಿಯ ಬೆಲೆ ಪ್ರವೃತ್ತಿಯನ್ನು ಅನುಸರಿಸುತ್ತಾ ಬಂದಿವೆ.


