ಬೆಂಗಳೂರು : ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ ಮಹೋನ್ನತ ಪಟ್ಟ ಮಂಗಳವಾರ(ಜ.6) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾಲಿಗೆ ಸಿಗಲಿದೆ. ಸಿಎಂ ಆಗಿ ಉಳುವವನೇ ಹೊಲದೊಡೆಯ ಎಂಬ ಕ್ರಾಂತಿಕಾರಿ ನಿರ್ಣಯ ಮಾಡಿದ್ದ ಡಿ.ದೇವರಾಜ ಅರಸು ಅವರ 5 ವರ್ಷ 286 ದಿನಗಳ ಸೇವಾವಧಿಯನ್ನು ಅಹಿಂದ ನಾಯಕ ಹಾಲಿ ಸಿಎಂ ಸಿದ್ದರಾಮಯ್ಯ ಸರಿಗಟ್ಟಲಿದ್ದಾರೆ. ಆ ಮೂಲಕ ರಾಜ್ಯ ಕಂಡ ದೀರ್ಘಾವಧಿ ಮುಖ್ಯಮಂತ್ರಿ ಎನಿಸಿಕೊಳ್ಳಲಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿ ಪೂರ್ಣ ಮುಖ್ಯಮಂತ್ರಿ ಆಗಿ ಮುಂದುವರಿದರೆ ಅದೂ ಐತಿಹಾಸಿಕ ದಾಖಲೆಯಾಗಲಿದೆ. ಅವಧಿ ಪೂರೈಸಿದ್ರೆ ದಾಖಲೆ ಇನ್ನಷ್ಟು ಗಟ್ಟಿ: ದೇವರಾಜ ಅರಸು ಅವರು 1972ರ ಮಾರ್ಚ್ 20 ರಿಂದ 1980ರ ಜನವರಿ 12 ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅವರು ಬರೋಬ್ಬರಿ 7 ವರ್ಷ 239 ದಿನಗಳ ಕಾಲ
ರಾಜ್ಯದ ಮುಖ್ಯಮಂತ್ರಿಯಾಗಿ ಆಳ್ವಿಕೆ ನಡೆಸಿದ್ದರು.
ಸಿಎಂ ಸಿದ್ದರಾಮಯ್ಯ ಅವರು 2 ಅವಧಿಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. 2013ರ ಮೇ, 13 ರಿಂದ 2018ರ ಮೇ,17 ರವರೆಗೆ ಭರ್ತಿ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಳ್ವಿಕೆ ನಡೆಸಿದ್ದರು. ಇದೀಗ ೨ನೇ ಅವಧಿಯಲ್ಲಿ 2023ರ ಮೇ ೨೦ರಿಂದ ಇಂದಿನವರೆಗೂ ಸಿದ್ದರಾಮಯ್ಯ ಆಡಳಿತ ನಡೆಸುತ್ತಿದ್ದು ಜ.6ಕ್ಕೆ 7ವರ್ಷ 239 ದಿನ(2793) ಪೂರೈಸಿದ್ದು 4 ದಶಕಗಳ ಬಳಿಕ ಅರಸು ದಾಖಲೆ ಸರಿಗಟ್ಟಲಿದ್ದಾರೆ. ಈ ಬಾರಿಯೂ ಪೂರ್ಣಾವಧಿ ಸಿಎಂ ಆದಲ್ಲಿ ಒಟ್ಟಾರೆ ೩೭೭೧ ದಿನಗಳ ಕಾಲ ಇರಲಿದ್ದು ದಾಖಲೆ ಇನ್ನಷ್ಟು ಗಟ್ಟಿಯಾಗಲಿದೆ.
ಇಬ್ಬರೂ ಮೈಸೂರಿನವರೇ: ಗಮನಾರ್ಹ ಸಂಗತಿ ಎAದರೆ ಅರಸು ಅವರ ಮೇಲೆ ಕಾರ್ಲ್ ಮಾರ್ಕ್ಸ್ ಸಿದ್ಧಾಂತದ ದಟ್ಟ ಪ್ರಭಾವ ಆವರಿಸಿದ್ದರೆ, ಸಿದ್ದರಾಮಯ್ಯ ಅವರನ್ನು ಆಕರ್ಷಿಸಿದ್ದು ರಾಮಮನೋಹರ ಲೋಹಿಯಾರ ಸಮಾಜವಾದಿ ಸಿದ್ಧಾಂತ. ಇಬ್ಬರೂ ಮೈಸೂರು ಜಿಲ್ಲೆಯವರೇ ಎನ್ನುವುದು ವಿಶೇಷ. ಅರಸು ಮೇಲ್ವರ್ಗದ ಚಿಕ್ಕ ಸಮುದಾಯದ ಸಿರಿತನದಿಂದ ಬAದು ಕೆಳಜಾತಿಗಳನ್ನು ಸಂಘಟಿಸಿದರೆ, ಸಿದ್ದರಾಮಯ್ಯ, ಹಿಂದುಳಿದ ಕುರುಬ ಸಮುದಾಯದಿಂದ ಬಂದು ಸ್ವಪ್ರಯತ್ನದಿಂದಲೇ ಪ್ರಭಾವಿಯಾಗಿ ಬೆಳೆದ ಅಹಿಂದ ನಾಯಕ. ಸಾಮಾಜಿಕ ನ್ಯಾಯದ ನೆಲೆಗಟ್ಟಿನಲ್ಲಿ ಇಬ್ಬರೂ ನಾಯಕರು ಸಮಕಾಲೀನ ಸಮಾಜಕ್ಕೆ ಪ್ರೇರಣೆಯಾದವರು.
ಇದೂ ಕೂಡಾ ದಾಖಲೆಯೇ: ಈವರೆಗೆ 16ಬಜೆಟ್ ಮಂಡಿಸುವ ಮುಖೇನ ದಾಖಲೆಯ ಅತಿಹೆಚ್ಚು ಬಜೆಟ್ ಮಂಡಿಸಿರುವ ಸಿಎಂ ಸಿದ್ದರಾಮಯ್ಯ ಈಗಾಗಲೇ ಸಿದ್ದತೆ ನಡೆಸಿದ್ದೇನೆ ಎಂದು ಹೇಳಿಕೊಂಡಿರುವAತೆ 17ನೇ ಬಜೆಟ್ ಮಂಡಿಸಿದರೆ ಅದೂ ಕೂಡಾ ಒಂದು ಐತಿಹಾಸಿಕ ದಾಖಲೆ. ಅಷ್ಟೇ ಅಲ್ಲ ಕಳೆದ ಸಾಲಿನಲ್ಲಿ 4.೦9 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದ ಸಿದ್ದು ಈ ಬಾರಿ ಅದರ ಗಾತ್ರವನ್ನು 4.5೦ ಲಕ್ಷ ಕೋಟಿ ರೂಗೆ ಏರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಹಾಗಾದಲ್ಲಿ ಸಿದ್ದು ಜೋಳಿಗೆಗೆ ಮಗದೊಂದು ದಾಖಲೆ ಸೇರಲಿದೆ.
ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜು : ಇತ್ತ ದಾಖಲೆ ಹೊತ್ತಿನಲ್ಲೇ ಸಿಎಂ ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನಕ್ಕೂ ಬೆಂಬಲಿಗರಿAದ ವೇದಿಕೆ ಸಜ್ಜಾಗಿದೆ. ಮೈಸೂರು, ವಿಜಯಪುರ, ಕಲಬುರಗಿ, ಹಾಸನ, ಹಾವೇರಿ, ಕೋಲಾರ ಸೇರಿದಂತೆ ಹಲವೆಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ ಕಾರ್ಯಕ್ರಮದ ಜೊತೆಗೆ ಸಿದ್ದು ಮೆಚ್ಚಿನ ನಾಟಿಕೋಳಿ ಊಟ ಆಯೋಜನೆಯಾಗಿದೆ. ಫೆಬ್ರುವರಿ ೧೩ರಂದು ದಾವಣಗೆರೆಯಲ್ಲಿ ಬೃಹತ್ ಸಮಾವೇಶವನ್ನೂ ಅಭಿಮಾನಿಗಳು ಹಮ್ಮಿಕೊಂಡಿದ್ದಾರೆ


