ಬೆಂಗಳೂರು : ಅದೃಷ್ಟ ಯಾವಾಗ ಬದಲಾಗೋತ್ತೋ ಆ ದೇವರೇ ಬಲ್ಲಾ ಎಂಬ ಮಾತು ನೂರಕ್ಕೆ ನೂರು ಸತ್ಯ . ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ಚಿಕ್ಕಪೇಟೆ ಸುದ್ದಿಮಾಡಿದೆ. ಚಿಕ್ಕಪೇಟೆಯ ಬಟ್ಟೆ ವ್ಯಾಪಾರಿಯೊಬ್ಬರು ಬಿಜೆಪಿ ಅಭ್ಯರ್ಥಿಯಾಗಿ ಕಾಂಗ್ರೆಸ್ ವಿರುದ್ಧ ಜಯಗಳಿಸಿ ವಿಧಾನಸಭೆ ಪ್ರವೇಶಿಸಿದ್ದಾರೆ ಬೆಂಗಳೂರಿನಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡು ರಾಜಸ್ಥಾನದಲ್ಲಿ ಶಾಸಕರಾಗಿದ್ದಾರೆ.
ಚಿಕ್ಕಪೇಟೆಯ ಬಟ್ಟೆ ವ್ಯಾಪಾರಿ ಲಾಡುಲಾಲ ಪಿಟ್ಲಿಯಾ ಅವರು ರಾಜಸ್ಥಾನದ ಸಹಾರಾ ಕ್ಷೇತ್ರದ ಬಿಜೆಪಿ ಶಾಸಕರಾಗಿ ಹೊರಹೊಮ್ಮಿದ್ದಾರೆ. 1.17 ಲಕ್ಷ ಮತ ಗಳಿಸಿ ಜಯಭೇರಿ ಬಾರಿಸಿದ್ದಾರೆ. ಇನ್ನು ಇವರ ಎದುರಾಳಿಯಾಗಿ ಕಾಂಗ್ರೆಸ್ ಅಭ್ಯರ್ಥಿ ರಾಜೇಂದ್ರ ತ್ರಿವೇದಿ 54,684 ಮತಗಳನ್ನು ಪಡೆದಿದ್ದು,ಪಿಟ್ಲಿಯಾ ಮುಂದೆ ಸೋಲೊಪ್ಪಿಕೊAಡಿದ್ದಾರೆ. ಲಾಡುಲಾಲ ಪಿಟ್ಲಿಯಾ ಅವರು ರಾಜಾಜಿನಗರದ ಜುಗನಹಳ್ಳಿಯಲ್ಲಿ ವಾಸಿಸುತ್ತಿದ್ದು, ಚಿಕ್ಕಪೇಟೆಯಲ್ಲಿ ಬಟ್ಟೆ ವ್ಯಾಪಾರ ನಡೆಸುತ್ತಿದ್ದರು ,ತಮಗೆ ಶಾಸಕ ಸ್ಥಾನ ಸಿಕ್ಕ ನಂತರ ಮುಂದೆ ಅವರು ತಮ್ಮ ಊರಿನಲ್ಲೇ ಕೆಲಸಕಾರ್ಯದಲ್ಲಿ ನಿರತರಾಗಿರುತ್ತಾರೆ ಎಂಬುದು ಅವರ ಗೆಳೆಯರ ಮಾತು.


