Thursday, July 23, 2026
Homeರಾಜ್ಯಬೆಂಗಳೂರು : ರಸ್ತೆಮಧ್ಯೆ ವೀಲಿಂಗ್ ಮಾಡ್ತಿದ್ದ ಪುಂಡರ ಬೈಕ್​​ಗಳನ್ನು ​ ಫ್ಲೈಓವರ್​​ನಿಂದ ಎಸೆದ ಸ್ಥಳೀಯರು ..!

ಬೆಂಗಳೂರು : ರಸ್ತೆಮಧ್ಯೆ ವೀಲಿಂಗ್ ಮಾಡ್ತಿದ್ದ ಪುಂಡರ ಬೈಕ್​​ಗಳನ್ನು ​ ಫ್ಲೈಓವರ್​​ನಿಂದ ಎಸೆದ ಸ್ಥಳೀಯರು ..!

ಬೆಂಗಳೂರು : ಅಲ್ಲೇ ಡ್ರಾ ಅಲ್ಲೇ ಬಹುಮಾನ ಎಂಬ ಮಾತಿನಂತೆ ರಸ್ತೆಮಧ್ಯೆ ಭಯಾನಕ ವೀಲಿಂಗ್ ಮಾಡುತ್ತಿದ್ದ ಬೈಕ್ ಸವಾರರ ಬೈಕನ್ನು ಫ್ಲೈಓವರ್ ಮೇಲಿನಿಂದ ಸ್ಥಳೀಯ ಎಸೆದ ಘಟನೆ ತುಮಕೂರು ರಸ್ತೆಯ ಅಡಕಮಾರನಹಳ್ಳಿ ಬಳಿಯ ಫ್ಲೈಓವರ್ ಬಳಿ ನಡೆದಿದೆ .

ಹೆದ್ದಾರಿಯಲ್ಲಿ ವಾಹನ ಸವಾರರಿಗೆ ಭಯ ಹುಟ್ಟಿಸೋ ರೀತಿ ವೀಲಿಂಗ್ ಮಾಡ್ತಿದ್ರು. ಅಷ್ಟೇ ಅಲ್ಲದೇ ಒಂದು ವಾಹನಕ್ಕೆ ಡಿಕ್ಕಿ ಕೂಡ ಹೊಡೆದಿದ್ದಾರೆ. ಈ ವೇಳೆ ಬೈಕ್ ತಡೆದು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡು ಬೈಕ್​ಗೆ ಒಂದು ಗತೀ ಕಾಣಿಸಿದ್ದಾರೆ. ಇನ್ನು ವ್ಹೀಲಿಂಗ್ ಮಾಡಿದ ಪುಂಡನ ಬೈಕ್​ಅನ್ನು ಫ್ಲೈಓವರ್​​ ಮೇಲಿಂದ ಬಿಸಾಡಿರುವ ವಿಡಿಯೋ ವೈರಲ್ ಆಗಿದೆ.

ವೀಲಿಂಗ್ ಮಾಡಬೇಡಿ ಅಂದರೆ ಕೇಳೋ ಮಾತೇ ಇಲ್ಲ. ರಸ್ತೆ ಮಧ್ಯೆ ವೀಲಿಂಗ್ ಮಾಡಿ ವಾಹನ ಸವಾರರನ್ನು ಅಪಾಯಕ್ಕೆ ಸಿಲುಕಿಸುತ್ತಿದ್ದ ಪುಢಾರಿಗಳಿಗೆ ಸಾರ್ವಜನಿಕವಾಗಿ ತಕ್ಕ ಶಿಕ್ಷೆ ನೀಡಲಾಗಿದೆ. ಅನೇಕ ನೆಟಿಜನ್‌ಗಳು ದಾರಿಹೋಕರರ ಕ್ರಮವನ್ನು ಶ್ಲಾಘಿಸುತ್ತಿದ್ದಾರೆ ಮತ್ತು ಪೊಲೀಸರು ತಮ್ಮ ಅಂತಹ ಸ್ಟಂಟ್‌ಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ನೆಲಮಂಗಲ ಸಂಚಾರಿ ಪೊಲೀಸ್‌ ಠಾಣಾ ವ್ಯಾಪ್ತಿಯ ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಹಿಂಬದಿ ಸವಾರರು ಸೇರಿದಂತೆ ಇಬ್ಬರು ಯುವಕರು ತಮ್ಮ ಸ್ಕೂಟರ್‌ಗಳಲ್ಲಿ ವ್ಹೀಲಿಂಗ್‌ ಮಾಡುತ್ತಿದ್ದರು. ನ್ಯಾಷನಲ್ ಹೈವೆಯಲ್ಲಿ ವೀಲಿಂಗ್ ಮಾಡ್ತಿದ್ದ ಪುಂಡನ ಸ್ಕೂಟರ್​ ಅನ್ನು ಫ್ಲೈಓವರ್ ಮೇಲಿಂದ ಸಾರ್ವಜನಿಕರು ಎತ್ತಿ ಬೀಸಾಡಿದ್ದಾರೆ. ತುಮಕೂರು ರಸ್ತೆಯ ಅಡಕಮಾರನಹಳ್ಳಿ ಬಳಿಯ ಫ್ಲೈಓವರ್ ಮೇಲಿಂದ ಸರ್ವಿಸ್ ರಸ್ತೆಗೆ ಡಿಯೋ ಸ್ಕೂಟರ್​ಗಳನ್ನ ಎಸೆಯಲಾಗಿದೆ. ಎರಡು ಸ್ಕೂಟರ್​ಗಳನ್ನು ಎಸೆಯಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular