ಬೆಂಗಳೂರು ; ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧ ನಡೆಯುತ್ತಿರುವ 2ನೇ ಪಂದ್ಯದಲ್ಲಿ ಬಿರುಸಿನ ಆಟಗಾರ ರಚಿನ್‌ರವೀಂದ್ರ ಭರ್ಜರಿ ಶತಕದ ನೆರವಿನಿಂದ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ 402 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ.
ಮೊದಲ ಇನ್ನಿಂಗ್ಸ್ನಲ್ಲಿ ನ್ಯೂಜಿಲೆಂಡ್ 356 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ. ಮೊದಲ ಇನ್ನಿಂಗ್ಸ್ನಲ್ಲಿ ತೀರಾ ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದ ಕೇವಲ 46 ರನ್‌ಗಳಿಗೆ ಸರ್ವ ಪತನ ಕಂಡಿರುವ ರೋಹಿತ್ ಪಡೆ, ಸೋಲಿನ ದವಡೆಗೆ ಸಿಲುಕಿದೆ. ೩ನೇದಿನದ ಆಟದಲ್ಲಿ ಇಂದು ನ್ಯೂಜಿಲ್ಯಾಂಡ್ ೯೯ ರನ್ ಗಳಿಸುವಷ್ಟರಲ್ಲಿ 4 ವಿಕೇಟ್ ಕಳೆದಗೊಂಡಿತ್ತು. ಈ ಹಂತದಲ್ಲಿ ರಚಿನ್ ರವೀಂದ್ರ ಟಿಮ್ ಸೌಥಿ ಜೋಡಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಈ ಜೋಡಿ 132 ಎಸೆತಗಳಲ್ಲಿ 137 ರನ್ ಗಳಿಸಿತು. ರಚಿನ್ ರವೀಂದ್ರ 137 ರನ್ ಬಾರಿಸಿದರು. ಟಿಮ್ ಸೌಥಿ 65೫ ರನ್ ಗಳಿಸಿ ಔಟಾದರು.
2ನೇ ಇನ್ನಿಂಗ್ಸ್ ಬಾರಿಸುವ ಭಾರತ 213 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡಿದೆ.