ಬೆಂಗಳೂರು : ಯುಪಿಐ ಮೂಲಕ ವಹಿವಾಟು ನಡೆಸಿದ ಹಿನ್ನೆಲೆಯಲ್ಲಿ ತೆರಿಗೆ ಪಾವತಿಸುವಂತೆ ವಾಣಿಜ್ಯ ತೆರಿಗೆ ಇಲಾಖೆ ಅಂಗಡಿಗಳಿಗೆ ನೋಟಿಸ್ ನೀಡಿದ ಬೆನ್ನಲ್ಲೇ ಹಲವಾರು ಅಂಗಡಿ ಮಾಲೀಕರು ಗೂಗಲ್ ಪೇ ಹಾಗೂ ಫೋನ್ ಪೇ ವ್ಯವಸ್ಥೆಯಿಂದ ಹಣ ಪಡೆಯುವುದರಿಂದ ಹಿಂದೆ ಸರಿದಿದ್ದಾರೆ.
ಯುಪಿಐ ವ್ಯವಸ್ಥೆ ಬಂದ ನಂತರ ಬಹುತೇಕರು ಜೇಬಿನಲ್ಲಿ ನಗದು ಇಟ್ಟುಕೊಳ್ಳುವುದನ್ನು ಕಡಿಮೆ ಮಾಡಿದ್ದರು. ಆದರೆ, ಅಂಗಡಿ ಮಾಲೀಕರಿಗೆ ನೋಟಿಸ್ ನೀಡಿದ ನಂತರ ಮಾಲೀಕರು ಗೂಗಲ್ ಅಥವಾ ಪೋನ್ ಪೇ ಸೇವೆಗಳನ್ನು ರದ್ದು ಮಾಡುವುದಕ್ಕೆ ಮುಂದಾಗುತ್ತಿದ್ದು, ಈಗ ಗ್ರಾಹಕರಿಂದ ನಗದು ಕೇಳುತ್ತಿದ್ದಾರೆ. ಇದರಿಂದ ಗ್ರಾಹಕರು ಕಕ್ಕಾಬಿಕ್ಕಿಯಾಗುವಂತಾಗಿದೆ.
ಯುಪಿಐ ವ್ಯವಸ್ಥೆಯಿಂದ ಇಷ್ಟು ದಿನಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ವಹಿವಾಟು ಸುಗಮವಾಗಿತ್ತು. ಚಿಲ್ಲರೆ ಸಮಸ್ಯೆ ಸಹ ಕಡಿಮೆ ಆಗಿತ್ತು. ಬಹುತೇಕ ಅಂಗಡಿಗಳಲ್ಲಿ ಈ ಸೇವೆಯನ್ನೇ ಬಳಸಲಾಗುತ್ತಿತ್ತು. ಆದರೆ, ಇದೀಗ ಕೇಂದ್ರ ಸರ್ಕಾರ ಹಾಗೂ ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆ ತೆರಿಗೆ ಸಂಗ್ರಹ ವಿಚಾರದಲ್ಲಿ ಎದುರಾಗಿರುವ ಗೊಂದಲದಿAದ ಬೆಂಗಳೂರಿನ ಸಣ್ಣ ಅಂಗಡಿಗಳು ಹಾಗೂ ವಾಣಿಜ್ಯ ಮಳಿಗೆಗಳಲ್ಲಿ ಯುಪಿಎ, ಗೂಗಲ್ ಹಾಗೂ ಪೋನ್ ಪೇ ಸೇವೆಯನ್ನು ತೆಗೆಯಲಾಗುತ್ತಿದೆ.
ಬೆಂಗಳೂರಿನಲ್ಲಿ ತೆರಿಗೆ ತಪ್ಪಿಸುವ ಉದ್ದೇಶದಿಂದ ಬೆಂಗಳೂರಿನ ಅಂಗಡಿಗಳ ಮಾಲೀಕರು ಯುಪಿಐ ಮಿಷನ್ ಹಾಗೂ ಕ್ಯೂ ಆರ್‌ಕೋಡ್ (ಸ್ಕ್ಯಾನರ್ ) ಗಳನ್ನು ತೆರವು ಮಾಡತೊಡಗಿದ್ದಾರೆ. ತೆರಿಗೆ ಸಂಗ್ರಹವನ್ನು ಹೆಚ್ಚಿಸುವ ಮಹತ್ವದ ಕ್ರಮದಲ್ಲಿ ಕೇಂದ್ರ ಸರ್ಕಾರವು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ನೋಂದಣಿಯನ್ನು ತಪ್ಪಿಸಿಕೊಂಡಿರುವ ವ್ಯಾಪಾರಿಗಳನ್ನು, ವಿಶೇಷವಾಗಿ ಕ್ಯೂಆರ್ ಕೋಡ್‌ಗಳ ಮೂಲಕ ಪಾವತಿಗಳನ್ನು ಸ್ವೀಕರಿಸುವವರನ್ನು ಗುರುತಿಸಲು ಸರ್ಕಾರವು ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ಡೇಟಾವನ್ನು ಬಳಸಲು ಮುಂದಾಗಿದೆ.
ಈ ವಿಚಾರದಲ್ಲಿ ಗೊಂದಲವೂ ಸೃಷ್ಟಿಯಾಗಿರುವುದರಿಂದ ಫೋನ್ ಪೇ ಹಾಗೂ ಗೂಗಲ್ ಪೇ ಸೇವೆಯನ್ನು ಅಂಗಡಿಗಳಿAದ ತೆಗೆಯುವುದಕ್ಕೆ
ಅಂಗಡಿಗಳ ಮಾಲೀಕರು ಮುಂದಾಗಿದ್ದಾರೆ.


