ಬೆಂಗಳೂರು : ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವ, ಆಕರ್ಷಕ ಕಸರತ್ತು, ವಿವಿಧ ಚಿತ್ತಾರಗಳು ಏರೋ ಇಂಡಿಯಾ ಪ್ರದರ್ಶನದಲ್ಲಿ ನೋಡುಗರ ಮನಸೂರೆಗೊಂಡವು. ಹೃದಯ ಬಡಿತ ಹೆಚ್ಚಿಸುವ ವಿಮಾನಗಳ ಚಮತ್ಕಾರ ನಿಜಕ್ಕೂ ಎಲ್ಲರನ್ನೂ ನಿಬ್ಬೆರಗಾಗಿಸಿ ತುದಿಗಾಲಿನಲ್ಲಿನಿಲ್ಲುವಂತೆ ಮಾಡಿತು. ಬೆಂಗಳೂರಿನ ಹೊರವಲಯದ ಯಲಹಂಕ ವಾಯುನೆಲೆಯಲ್ಲಿ ಇಂದು ದೇಶ-ವಿದೇಶಗಳ ವಿಮಾನಗಳ ಹಾರಾಟ ಮತ್ತು ಪ್ರದರ್ಶನ ನಿಜಕ್ಕೂ ನೆರೆದಿದ್ದವರ ಮನಗೆದ್ದು ಭಾರೀ ಕರತಾಡನಕ್ಕೂ ಕಾರಣವಾಯಿತು.
ಬಾನಂಗಳದಿAದ ನೆಲಕ್ಕೆ ವಿಮಾನ ಅಪ್ಪಳಿಸಿಯೇ ಬಿಟ್ಟಿತು ಎಂದುಕೊಳ್ಳುವಾಗಲೇ ಮತ್ತೆ ನಭದತ್ತ ಜಿಗಿಯುವ ವಿಮಾನಗಳ ಸಾಹಸಮಯ ಕಸರತ್ತು ನೋಡುಗರ ಮೈನವಿರೇಳಿಸಿತು. ಆಗಸದಲ್ಲಿ ಹಕ್ಕಿಗಳ ಗುಂಪಿನಂತೆ ಸಾಗುತ್ತಿದ್ದವಿಮಾನಗಳು ಒಮ್ಮೆಗೆ ಕೆಳಗೆ ಕುಸಿಯುವಂತೆ ಭಾವಿಸಿ ಕಣ್ಣು ಮಿಟಿಕಿಸುವಷ್ಟರಲ್ಲಿ ಮತ್ತೆ ದಿಕ್ಕು ಬದಲಿಸಿ ಆಕಾಶದತ್ತ ಚಿಮ್ಮುತ್ತಾ ಸಾಗಿದವು. ಭಾರತೀಯ ವಾಯುಪಡೆಯ ಸೂರ್ಯಕಿರಣ್ ಏರೋಬಾಟಿಂಕ್ಸ್ನ 9 ವಿಮಾನಗಳು ನಡೆಸಿದ ಕಸರತ್ತು, ಸೃಷ್ಠಿಸಿದ ವಿನ್ಯಾಸಗಳು ಮೈನವಿರೇಳಿಸಿದಂತೂ ಸತ್ಯ. ವಿಶ್ವದ ಅತ್ಯಂತ ವೇಗದ ಯುದ್ಧ ವಿಮಾನದಲ್ಲಿ ಒಂದೆನಿಸಿರುವ ಸುಖೋಯ್ ಎಂ.ಕೆ. 30 ಐನ ಪ್ರದರ್ಶನವೂ ನೋಡುಗರ ಮನಸೂರೆಗೊಂಡಿತು.
ಸೂರ್ಯಕಿರಣ್ ತಂಡದ ಕಸರತ್ತುಗಳು ಹೆಚ್ಚು ಆಕರ್ಷಕವಾಗಿದ್ದವು. 3 ವಿಮಾನಗಳು,5 ವಿಮಾನಗಳು, 6 ವಿಮಾನಗಳು, ಕಡೆಗೆ 9 ವಿಮಾನಗಳನ್ನು ಒಟ್ಟಿಗೆ ಹಾರಿಸಿ ವಿವಿಧ ಕಸರತ್ತುಗಳನ್ನು ಸೂರ್ಯಕಿರಣ್ ಪೈಲೆಟ್‌ಗಳು ನಡೆಸಿದರು.
ಈ ಬಾರಿಯ ವೈಮಾನಿಕ ಪ್ರದರ್ಶನ ಕಳೆದ ಬಾರಿ ಗಿಂತ ದೊಡ್ಡ ವೈಮಾನಿಕ ಪ್ರದರ್ಶನವಾಗಿದ್ದು, ಸುಮಾರು 42 ಸಾವಿರ ಚದರ ಮೀಟರ್ ಪ್ರದೇಶದಲ್ಲಿ ಈ ವೈಮಾನಿಕ ಪ್ರದರ್ಶನ ನಡೆದಿದೆ. 90 ದೇಶಗಳ ಯುದ್ದ ವಿಮಾನಗಳು ಈ ವೈಮಾನಿಕ ಪ್ರದರ್ಶನದಲ್ಲಿ ಭಾಗಿಯಾಗಿದ್ದು, 26 ದೇಶಗಳ ರಕ್ಷಣಾ ಸಚಿವರುಗಳು ಈ ವೈಮಾನಿಕ ಪ್ರದರ್ಶನಕ್ಕೆ ಸಾಕ್ಷಿಯಾದರು.
ಸುಮಾರು 70 ವೈಮಾನಿಕ ಕಸರತ್ತುಗಳನ್ನು ಯುದ್ಧ ವಿಮಾನಗಳು ಬಾನಂಗಳದಲ್ಲಿ ಪ್ರದರ್ಶಿಸಿದವು. ಸೂರ್ಯಕಿರಣ್, ಎಲ್‌ಸಿಎ ತೇಜಸ್ ಎಂ.ಕೆ.1 ಎ, ಹೆಚ್.ಎ.ಎಲ್. ನಿರ್ಮಿತ ಹೆಚ್‌ಟಿಟಿ ತರಬೇತಿ ವಿಮಾನ, ಅಮೆರಿಕಾದ ಎಫ್-35, ಬಿ-1ಬಿ, ಲ್ಯಾನ್ಸರ್ ಬಾಂಬರ್ ಡಾರ್ನಿಯರ್ ವಿಮಾನ, ರಷ್ಯಾದ ಸುಖೋಯ್ -57 ವಿಮಾನಗಳು ಪ್ರದರ್ಶನದ ಆಕರ್ಷಣೆಗಳಾಗಿದ್ದವು.
ಏರೋ ಇಂಡಿಯಾ ಶೋನಲ್ಲಿ ವೈಮಾನಿಕ ಪ್ರದರ್ಶನದ ಜತೆಗೆ ವೈಮಾನಿಕ ಕ್ಷೇತ್ರಕ್ಕೆ ಸಂಬAಧಿಸಿದ ದೊಡ್ಡ ಪ್ರದರ್ಶನವೇ ನಡೆದಿದ್ದು, ದೇಶ-ವಿದೇಶಗಳ ಸುಮಾರು 100 ಕ್ಕೂ ಹೆಚ್ಚು ಕಂಪೆನಿಗಳು ಈ ಪ್ರದರ್ಶನದಲ್ಲಿ ಭಾಗಿಯಾಗಿದ್ದು, ಸುಮಾರು 900 ಪ್ರದರ್ಶನ ಮಳಿಗೆಗಳು ಏರೋ ಇಂಡಿಯಾ ಪ್ರದರ್ಶನದಲ್ಲಿ ಇದ್ದವು.