Friday, March 13, 2026
Flats for sale
Homeರಾಜ್ಯಬೆಂಗಳೂರು ; ಮದ್ಯಪ್ರಿಯರಿಗೆ ಬಿಗ್ ಶಾಕ್ : ಉಚಿತ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ರಾಜ್ಯದಲ್ಲಿ...

ಬೆಂಗಳೂರು ; ಮದ್ಯಪ್ರಿಯರಿಗೆ ಬಿಗ್ ಶಾಕ್ : ಉಚಿತ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ರಾಜ್ಯದಲ್ಲಿ ಲೋಕಸಭಾ ಚುನಾವಣೆ ಫಲಿತಾಂಶ ಬಳಿಕ ಮದ್ಯದ ದರ ಏರಿಕೆ ಸಾಧ್ಯತೆ !

ಬೆಂಗಳೂರು ; ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲು ಕಾರಣವಾದ ಪಂಚ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಹರಸಾಹಸ ಪಡುತ್ತಿದ್ದು ಸರಕಾರದ ಖಜಾನೆ ಬರಿದಾಗಿದೆ ಎಂದು ತಿಳಿದುಬಂದಿದೆ.ಉಚಿತ ಗ್ಯಾರಂಟಿ ಯೋಜನೆಗಳಿಗೆ ಆರ್ಥಿಕ ಸಂಪನ್ಮೂಲಗಳ ಸಂಗ್ರಹಕ್ಕಾಗಿ ತೀವ್ರ ಕಸರತ್ತು ಸರ್ಕಾರ ನಡೆಸುತ್ತಿದ್ದು ಬೇರೆ ದಾರಿನೇ ಇಲ್ಲದೆ ಸರ್ಕಾರ ಮದ್ಯದ ಬೆಲೆ ಹೆಚ್ಚಿಸಲು ಚಿಂತನೆ ನಡೆಸಿದೆ.

ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಕೇರಳ ಸೇರಿದಂತೆ ಹೊರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಲವು ಸ್ಪ್ಯಾಬ್‌ಗಳ ಅಗ್ಗದ ಮದ್ಯಗಳ ಬೆಲೆ ತುಂಬಾ ಕಡಿಮೆಯಿದೆ.ರಾಜ್ಯದಲ್ಲಿ ಸೆಮಿ ಪ್ರೀಮಿಯಂ ಹಾಗೂ ಪ್ರೀಮಿಯಂ ವಿದೇಶಿ ಮದ್ಯಕ್ಕೆ ಹೋಲಿಸಿದರೆ ಅಗ್ಗದ ಬೆಲೆಯ ಮದ್ಯಗಳ ಮಾರಾಟ ಹೆಚ್ಚಿದೆ ಹೀಗಾಗಿ ಸರ್ಕಾರ ಮದ್ಯದ ಬೆಲೆ ಹೆಚ್ಚಿಸಲು ಚಿಂತನೆ ನಡೆಸಿದೆ.

ಸರಕಾರ ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ಬಿಯರ್ ಬೆಲೆ ಮೂರು ಬಾರಿ ಹೆಚ್ಚಿಸಿದ್ದು ,ವಿಸ್ಕಿ ಬೆಲೆ ಒಂದು ಬಾರಿ ಹೆಚ್ಚಿಸಿದೆ ಈ ನಡುವೆ ಬಿಸಿಲ ಬೇಗೆಗೆ ಮದ್ಯಪ್ರಿಯರು ಅತಿಹೆಚ್ಚು ಸೇವಿಸಿದ್ದು ಸರಕಾರದ ಬೊಕ್ಕಸಕ್ಕೆ ಅಧಿಕ ಲಾಭ ದೊರೆತಿದೆ,ಇದರಿಂದ ಮದ್ಯಪ್ರಿಯರು ದರ ಎಷ್ಟು ಬೇಕಾದರೂ ಜಾಸ್ತಿಯಾದರೂ ಕುಡಿತ್ತಾರೆಂಬುದು ಸರಕಾರಕ್ಕೆ ತಿಳಿದಿದೆ ಇದರಿಂದ ಕಳೆದ ಒಂದು ವರ್ಷದಲ್ಲಿ ಸರಕಾರ ಮದ್ಯಪ್ರಿಯರಿಗೆ ಬೆಲೆ ಹೆಚ್ಚಿಸಿ ಚಾಟಿ ಏಟು ನೀಡಿದರು ಅಬಕಾರಿ ಇಲಾಖೆಯ ಆದಾಯದಲ್ಲಿ ಕಡಿಮೆಯಾಗಲಿಲ್ಲ ಎಂಬುದು ನಿಜವಾದ ಮಾಹಿತಿ.

ಅಬಕಾರಿ ಇಲಾಖೆಯಿಂದ ಸರ್ಕಾರದ ಬೊಕ್ಕಸಕ್ಕೆ ಹರಿದು ಬರುವ ಆದಾಯದಲ್ಲೂ ಅಗ್ಗದ ಮದ್ಯಗಳು ಸಿಂಹಪಾಲು ಹೊಂದಿವೆ. ಈಗ ರಾಜ್ಯದಲ್ಲಿ 2023ರ ಜುಲೈನಲ್ಲಿ ದೇಶೀಯ ಮದ್ಯಗಳ ಬೆಲೆ ಹೆಚ್ಚಿಸಲಾಗಿತ್ತು. ಈ ಮದ್ಯಗಳ ಮಾರಾಟ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಇವುಗಳ ಬೆಲೆ ಇಳಿಕೆ ಮಾಡಲಿದೆ. 6-12ನೇ ಸ್ಪ್ಯಾಬ್‌ವರೆಗಿನ ಸೆಮಿ ಪ್ರೀಮಿಯಂ ಮದ್ಯಗಳ ಬೆಲೆಯಲ್ಲಿ ಶೇ10ರಷ್ಟು, 12-18ನೇ ಸ್ಪ್ಯಾಬ್‌ವರೆಗಿನ ವಿದೇಶಿ ಅಥವಾ ಪ್ರೀಮಿಯಂ ಬ್ರಾಂಡ್‌ಗಳ ಮದ್ಯದ ಬೆಲೆಯಲ್ಲಿ ಶೇ12-15ರಷ್ಟು ಇಳಿಕೆ ಮಾಡುವ ಸಾಧ್ಯತೆಯಿದೆ.

ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಬಿಯರ್‌ ಮೇಲೆ ಶೇ20 ರಷ್ಟು ಹೆಚ್ಚುವರಿ ಸುಂಕ ವಿಧಿಸಿತ್ತು. ನಂತರ ಬಿಯರ್‌ ಉತ್ಪಾದನಾ ಕಂಪನಿಗಳು ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ಸರಿದೂಗಿಸಿಕೊಳ್ಳಲು ಬಾಟಲ್‌ ಮೇಲೆ ಕನಿಷ್ಠ 10 ರೂ. ವರೆಗೆ ದರ ಹೆಚ್ಚಿಸಿದ್ದವು. ಇದರ ಬೆನ್ನಲ್ಲೇ ಸರಕಾರ ಫೆ.1ರಿಂದ ಜಾರಿಗೆ ಬರುವಂತೆ ಬಿಯರ್‌ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಶೇ 185 ರಿಂದ 195ಕ್ಕೆ ಹೆಚ್ಚಳ ಮಾಡಿತ್ತು. ಇದರೊಂದಿಗೆ ಎಇಡಿ ಶೇ 10ರಷ್ಟು ಹೆಚ್ಚಳವಾಗಿತ್ತು. ಇದೀಗ ಮತ್ತೆ ದರ ಏರಿಕೆ ಆಗಲಿದೆ. ಇದಕ್ಕೆ ಮದ್ಯಪ್ರಿಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪದೇ ಪದೇ ಮದ್ಯದ ದರ ಹೆಚ್ಚಳಮಾಡಿದರೆ ದಿನನಿತ್ಯ ಕುಡಿಯುವ ಪ್ರಿಯರಿಗೆ ದಿಗಿಲುಬಡಿದಂತೆ ಆಗಬಹುದು , ಸರಕಾರ ನಾವು ಕುಡಿಯುವ ಮದ್ಯದ ಆದಾಯದಿಂದ ಭಾಗ್ಯಗಳನ್ನು ಕೊಟ್ಟಿದೆ ಸರಕಾರ ಇದೆ ರೀತಿ ದರ ಜಾಸ್ತಿ ಮಾಡಿದರೆ ನಾವು ಕುಡಿಯುವುದನ್ನು ಬಿಡಬೇಕಾಗುತ್ತದೆಯೆಂದು ಮದ್ಯಪ್ರಿಯ ಸಿದ್ದ ಆಕ್ರೋಶ ಹೊರಹಾಕಿದ್ದಾರೆ.ಇಲ್ಲಿ ಸರಕಾರ ಅಧಿಕಾರಕ್ಕೆ ಬರಲು ನೀಡಿದ ಆಸ್ವಾಸನೆಗೋಸ್ಕರ ಈ ರೀತಿ ಜನರ ತಲೆಕಡಿಯುವುದು ಕೆದಕರ ಎಂದು ಇನ್ನೋರ್ವ ಮದ್ಯಪ್ರಿಯ ನಾಗರಾಜ್ ಹೇಳಿದ್ದಾರೆ.ಮಧ್ಯಮ ವರ್ಗದವರು ಕುಡಿಯುವ ಮದ್ಯವನ್ನ ಎಷ್ಟು ಬಾರಿ ಏರಿಕೆ ‌ಮಾಡುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಒಟ್ಟಿನಲ್ಲಿ ಸರಕಾರ ನೀಡಿದ ಭಾಗ್ಯಗಳಿಗೆ ಹಣಹೊಂದಿಸುವುದು ಗಾದೆಯ ಮಾತಿನ ತರಹ ಮಾಡು ಇಲ್ಲವೇ ಮಡಿಯಂತಾಗಿದೆ ಎಂಬುದು ಸತ್ಯ .

.

RELATED ARTICLES

LEAVE A REPLY

Please enter your comment!
Please enter your name here

Most Popular