ಬೆಂಗಳೂರು : ದರೋಡೆಕೋರ ಡಿಸಿಎಂ ಡಿ.ಕೆ ಶಿವಕುಮಾರ್. ಅವರ ಕೈವಾಡದಲ್ಲೇ ಇದೆಲ್ಲ ಎಂದು ವಕೀಲ ದೇವರಾಜೇಗೌಡ ಆರೋಪಿಸಿದ್ದು ನನ್ನ ಮೇಲೆ ಲೈಂಗಿಕ ಕಿರುಕುಳ ಕೇಸ್ ಹಾಕಿಸಿದರು,ಅದರಲ್ಲಿ ಸಾಕ್ಷಿಗಳು ಸಿಗಲಿಲ್ಲ,ರೇಪ್ ಕೇಸ್ ಹಾಕಿಸಿದರು. ಆದ್ರೂ ಅದರಲ್ಲೂ ಸಾಕ್ಷಿಗಳು ಸಿಗಲಿಲ್ಲ ಮುಂದೆ ಕಾನೂನು ಹೋರಾಟ ಮಾಡಿ ಡಿ.ಕೆ.ಶಿವಕುಮಾರ್ನನ್ನ ಜೈಲಿಗೆ ಕಳಿಸುತ್ತೇನೆ ಎಂದು ದೇವರಾಜೇಗೌಡ ಕಿಡಿ ಕಾರಿದ್ದಾರೆ.
ಏನಾದರೂ ಮಾಡಿ ನನ್ನ ಮಟ್ಟಹಾಕಬೇಕೆಂದು ಈಗ ಪೆನ್ಡ್ರೈವ್ ಕೇಸ್ನಲ್ಲಿ ಲಾಕ್ ಮಾಡಿಸಿದ್ದಾರೆ. ಇದೆಲ್ಲ ಮಾಡಿಸಿದ್ದು ಡಿಸಿಎಂ ಡಿ.ಕೆ ಶಿವಕುಮಾರ್. ಅವರ ಕೈವಾಡದಲ್ಲೇ ಇದೆಲ್ಲ ಆಗಿದೆ. ಮುಂದೆ ಕಾನೂನು ಹೋರಾಟ ಮಾಡಿ ಡಿ.ಕೆ.ಶಿವಕುಮಾರ್ನನ್ನ ಜೈಲಿಗೆ ಕಳಿಸುತ್ತೇನೆ ಎಂದು ಆಕ್ರೋಶ ಹೊರಹಾಕಿದ್ದಾರೆ.ನನ್ನ ಬಂಧನಕ್ಕೆ ಡಿ.ಕೆ ಶಿವಕುಮಾರ್ ನೇರ ಹೊಣೆಯಾಗಿದ್ದಾರೆ. ಅವರಿಗೆ ನನ್ನ ಹತ್ತಿರ ಸಿಕ್ಕಿರೋ ಪೆನ್ ಡ್ರೈವ್ನಲ್ಲಿ ಕಾರ್ತಿಕ್ ಪತ್ನಿ ಕಿಡ್ನಾಪ್ ಪ್ರಕರಣದ ವಿಡಿಯೋ ಇದೆ. ಡಿ.ಕೆ ಶಿವಕುಮಾರ್ ನನ್ನೊಂದಿಗೆ ಮಾತಾಡಿರೋ ಆಡಿಯೋ ಇದೆ. ಅದು ಸದ್ಯದಲ್ಲೇ ಬಿಡುಗಡೆಯಾಗಲಿದೆ. ನಾನು ಹೊರಗಡೆ ಬಂದ ದಿನ ಸರ್ಕಾರದ ಪತನವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೋರಿಂಗ್ ಕ್ಲಬ್ ರೂಮ್ ನಂ- 110ಕ್ಕೆ ಚನ್ನರಾಯಪಟ್ಟಣದ ಗೋಪಾಲಸ್ವಾಮಿಗೆ 5 ಕೋಟಿ ಕೊಟ್ಟು ಸಂಧಾನಕ್ಕಾಗಿ ಕಳುಹಿಸಿದ್ದ ವಿಡಿಯೋ ನನ್ನ ಬಳಿ ಇದೆ .ನನ್ನನ್ನು ರಿಲೀಸ್ ಮಾಡಲಿ ಡಿ .ಕೆ ಶಿವಕುಮಾರನ ಅಣೆಬರಹ ಬಿಚ್ಚಿ ಇಡುತ್ತೆನೆಂದು ವಕೀಲ ದೇವರಾಜೇಗೌಡ ಎಲ್ಲಾ ಬಯಲಿಗೆ ಎಳೆಯದಿದ್ದರೆ ಎಂದು ಕಡ ಖಂಡಿತವಾಗಿ ತಿಳಿಸಿದ್ದಾರೆ.


