Saturday, March 14, 2026
Flats for sale
Homeದೇಶಬೆಂಗಳೂರು : ಬೆಂಗಳೂರು ಸ್ಪೋಟಕ್ಕೆ ಮಂಗಳೂರು ಕುಕ್ಕರ್ ಬಾಂಬ್ ನಂಟು,ತನಿಖೆ ಸಿಸಿಬಿಗೆ ವರ್ಗಾವಣೆ ,ನಾಲ್ವರು ವಶಕ್ಕೆ.

ಬೆಂಗಳೂರು : ಬೆಂಗಳೂರು ಸ್ಪೋಟಕ್ಕೆ ಮಂಗಳೂರು ಕುಕ್ಕರ್ ಬಾಂಬ್ ನಂಟು,ತನಿಖೆ ಸಿಸಿಬಿಗೆ ವರ್ಗಾವಣೆ ,ನಾಲ್ವರು ವಶಕ್ಕೆ.

ಬೆಂಗಳೂರು : ವೈಟ್ ಫೀಲ್ಡ್ ನ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟ ಸಂಬಂಧ ರಾಜ್ಯದಲ್ಲಿ ಈ ಹಿಂದೆ ನಡೆದಿದ್ದ ಸ್ಫೋಟಗಳಿಗೆ ಇರುವ ಸಾಮ್ಯತೆಯನ್ನು, ಅದರಲ್ಲೂ ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟಕ್ಕೆ ಇರುವ ಸಂಬAಧವನ್ನು ಪೊಲೀಸರು ಪರಿಶೀಲನೆ ನಡೆಸಲಾಗಿದೆ.

ಪರಿಶೀಲನೆ ವೇಳೆ ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲಿ ಬಳಸಿದ್ದ ಸ್ಫೋಟಕ ಸಾಮಗ್ರಿಗಳು ಹಾಗೂ ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಾಮ್ಯತೆ ಕಂಡುಬAದಿರುವ ಹಿನ್ನೆಲೆಯಲ್ಲಿ ತನಿಖೆಯನ್ನು ಈ ದಿಸೆಯಲ್ಲೂ ನಡೆಸಲಾಯಿತು. ಎರಡೂ ಕಡೆ ಬ್ಲಾಸ್ಟ್ ನಡೆದ ಸಂದರ್ಭದಲ್ಲಿ ಹೊರಸೂಸಿರುವ ಹೊಗೆ ಒಂದೇ ಮಾದರಿಯಲ್ಲಿದೆ. ಎರಡೂ ಕಡೆ ಬ್ಯಾಟರಿ, ಡಿಟೋನೇಟರ್‌ಗಳು, ನಟ್ಟು, ಬೋಲ್ಟ್ಗಳನ್ನು ಸ್ಫೋಟಕ್ಕೆ ಬಳಸಲಾಗಿದೆ. ಈ ಹಿನ್ನೆಲೆಯನ್ನು ಪರಿಶೀಲನೆ ಮಾಡಲು ಮುಂದಾಗಿರುವ ಪೊಲೀಸ್ ಅಧಿಕಾರಿಗಳು ಮಂಗಳೂರು ಸ್ಫೋಟದ ರೂವಾರಿ ಶಾರಿಕ್ ಹಾಗೂ ಸಂಗಡಿಗರನ್ನು ವಿಚಾರಣೆಗೆ ಮುಂದಾಗಿದ್ದಾರೆ.ಸದ್ಯಕ್ಕೆ ಶಾರಿಕ್ ಗ್ಯಾಂಗ್ ಪರಪ್ಪನ ಅಗ್ರಹಾರದಲ್ಲಿದೆ.

ಸಿಸಿಟಿವಿಯಲ್ಲಿ ಚಲನವಲನ ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಆರೋಪಿಯ ಜಾಡು ಹಿಡಿದು ಹೊರಟ ರಾಜ್ಯ ಮತ್ತು ರಾಷ್ಟಿçÃಯ ತನಿಖೆ ಸಂಸ್ಥೆಗಳು ಸಿಸಿಟಿವಿ ಜಾಡು ಹಿಡಿದಿವೆ. ಆರೋಪಿ ಕೆಫೆಯ ಒಳ ಪ್ರವೇಶ ಮಾಡಿ ಸುಮಾರು ಒಂದು ಗಂಟೆ ಕಾಲ ಒಳಗೆ ಓಡಾಡಿದ್ದಾನೆ. 11:15 ಗಂಟೆಗೆ ಒಳ ಪ್ರವೇಶ ಮಾಡಿ 12:10ರ ತನಕ ಒಳಗಿದ್ದ. ಸೈಡ್ ಬ್ಯಾಗ್ ಹಾಕಿಕೊಂಡು ಬ್ಯಾಗ್ ಒಳಗೆ ಮತ್ತೊಂದು ಬ್ಯಾಗ್‌ನಲ್ಲಿ ಸ್ಫೋಟಕ ತಂದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.ಜನರ ಕಣ್ಣಿಗೆ ಮತ್ತು ಸಿಸಿ ಕ್ಯಾಮರದಲ್ಲಿ ಸೆರೆಯಾಗದ ಜಾಗಕ್ಕೆ ಈತ ಹುಡುಕಾಟ ನಡೆಸಿದ್ದು, ಕೊನೆಗೆ ಕೈ ತೊಳೆಯುವ ಜಾಗದಲ್ಲಿದ್ದ ಡಸ್ಟ್ ಬಿನ್‌ನಲ್ಲಿ ಬ್ಯಾಗ್ ಬಿಸಾಡಿ ಪರಾರಿಯಾಗಿದ್ದಾನೆ. ಹೋಗುವಾಗ ಮೊಬೈಲ್ ಕೈಯಲ್ಲಿ ಹಿಡಿದು ಪರಾರಿಯಾಗಿದ್ದಾನೆ.ಆರೋಪಿ ಬಳಿ ಮೊಬೈಲ್ ಇರುವುದು ಸಿಸಿಕ್ಯಾಮರದಲ್ಲಿ ಸೆರೆಯಾಗಿದೆ.

ಸದ್ಯ ಆರೋಪಿ ಬಳಿ ಇರುವ ಮೊಬೈಲ್ ಜಾಡು ಹಿಡಿದು ಹೊರಟಿರುವ ಪೊಲೀಸರು ಟವರ್ ಡಂಪ್ ಮಾಡಿ ಮೊಬೈಲ್ ಡಿಟೈಲ್ಸ್ ಕಲೆ ಹಾಕಿ ಆರೋಪಿಗೆ ಬಲೆ ಬೀಸಿದ್ದಾರೆ. ಸ್ಪೋಟದ ಹಿಂದೆ ಒಂದು ತAಡವೇ ಇರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಸ್ಪೋಟಕ ತಯಾರು ಮಾಡುವುದು ಹಾಗೂ ಅದಕ್ಕೆ ಬೇಕಾಗಿರುವ ವಸ್ತುಗಳನ್ನು ಪಡೆಯಲು ವ್ಯವಸ್ಥಿತ ಸಂಚು ನಡೆದಿದ್ದು, ಮೇಲ್ನೋಟಕ್ಕೇ ಈ ತಂಡದಲ್ಲಿ ವೆಲ್ ಟ್ರೈನ್ಡ್ ಆರೋಪಿಗಳು ಭಾಗಿಯಾಗಿರುವ ಶಂಕೆ ಮೂಡಿದೆ. ಸುಧಾರಿತ ಸ್ಫೋಟಕ, ಸ್ಥಳೀಯ ಸಾಮಗ್ರಿ ಸ್ಫೋಟದಲ್ಲಿ ಐಇಡಿ ಇಂಪ್ರೂವೈಸ್ ಎಕ್ಸಪೋಸೀವ್ ಡಿವೈಸ್ ಬಳಕೆ ಮಾಡಲಾಗಿದೆ.

ಈ ಬಾಂಬನ್ನು ಸ್ಥಳೀಯವಾಗಿ ಸಿಗುವ ಕಚ್ಚಾ ವಸ್ತುಗಳನ್ನ ಬಳಸಿ ಸಿದ್ಧಪಡಿಸಲಾಗುತ್ತದೆ. ಮೊಳೆಗಳು, ಗಾಜಿನ ಚೂರು, ಗನ್ ಪೌಡರ್ ಅಥವಾ ಬೆಂಕಿ ಕಡ್ಡಿಯ ಮದ್ದುಗಳನ್ನೂ ಬಳಸಿ ಇವನ್ನು ತಯಾರಿಸಬಹುದು.

ಪ್ರೆಷರ್ ಆಗುವಂತೆ ಡಿವೈಸ್‌ನ್ನು ಸೃಷ್ಟಿಸಿ ಸ್ಫೋಟಿಸಬಹುದು.ಇದು ಎಷ್ಟು ಕಚ್ಚಾ ವಸ್ತುಗಳನ್ನು ಹಾಕಬಹುದೋ ಅಷ್ಟೂ ತೀವ್ರತೆಯನ್ನು ಪಡೆದುಕೊಳ್ಳುತ್ತದೆ.ಪ್ಲಾಸ್ಟಿಕ್ ಸ್ಪೋಟಕ ಕೂಡ ಬಳಸಿರುವ ಸಾಧ್ಯತೆ ಇದೆ. ಇದನ್ನ ಪುಟ್ಟಿ ಸ್ಫೋಟಕ ಎಂದು ಕರೆಯಲಾಗುತ್ತದೆ. ಜಿಲೇಟಿನ್‌ಗಳನ್ನು ಬಳಸಿ ಈ ಪ್ಲಾಸ್ಟಿಕ್ ಎಕ್ಸ್ಪ್ಲೋಸಿವ್ ತಯಾರಿಕೆ ಮಾಡಲಾಗುತ್ತದೆ. ಈ ಸಾಧನವನ್ನು ಯಾವುದೇ ಮೆಟಲ್ ಡಿಟೆಕ್ಟರ್ ಕಂಡು ಹಿಡಿಯುವುದಿಲ್ಲ.

ಇದನ್ನ ಎಲ್ಲಿ ಬೇಕಾದರೂ ಭದ್ರತಾ ಸಿಬ್ಬಂದಿಗಳ ಕಣ್ಣು ತಪ್ಪಿಸಿ ತೆಗೆದುಕೊಂಡು ಹೋಗಬಹುದು ಎನ್ನಲಾಗಿದೆ. ಆದರೆ ಸ್ಲೀಪರ್ ಸೆಲ್‌ಗಳಿಲ್ಲದೆ ಬಾಂಬ್ ತಯಾರು ಸುಲಭವಲ್ಲ. ಕಚ್ಚಾ ವಸ್ತುಗಳಿಗೆ ಸ್ಲೀಪರ್ ಸೆಲ್‌ಗಳ ಅವಶ್ಯಕತೆ ಇದೆ. ಸ್ಲೀಪರ್ ಸೆಲ್‌ಗಳು ಸಪ್ಲೈ ಮಾಡುವ ಬಿಡಿ ಬಿಡಿ ವಸ್ತುಗಳಿಂದಲೇ ಬಾಂಬ್ ತಯಾರಿಕೆ ನಡೆದಿದ್ದು, ರಾಮೇಶ್ವರಂ ಬಾಂಬ್ ಬ್ಲಾಸ್ಟ್ ಕೇಸಲ್ಲಿ ಸಾಕಷ್ಟು ದೊಡ್ಡ ಕ್ರಿಮಿನಲ್ ಸಂಚು ಇರಲೇಬೇಕಿದೆ. ಏಕಾಏಕಿ ಬಾಂಬ್ ಇಟ್ಟು ಉಡಾಯಿಸಲು ಸಾಧ್ಯವಿಲ್ಲ. ಸಾಕಷ್ಟು ದಿನಗಳಿಂದ ಪ್ಲಾನಿAಗ್ ಮಾಡಿರಬೇಕು. ಯಾವ ಸಮಯದಲ್ಲಿ ಜನ ಇರ್ತಾರೆ, ಯಾವ ಸ್ಥಳದಲ್ಲಿ ಹೆಚ್ಚಿನ ಗುಂಪು ಇರುತ್ತದೆ, ಎಂಬುದನ್ನು ಪರಿಶೀಲಿಸಿ ಉಗ್ರ ಕೃತ್ಯ ಎಸಗಲಾಗಿದೆ. ಜನಜಂಗುಳಿ ಇರುವ ಸ್ಥಳದಲ್ಲಿ ಬಾಂಬ್ ಇಡಲು ಪೂರ್ವ ತಯಾರಿ ಮಾಡಿಕೊಂಡಿರುವುದು ಗೊತ್ತಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular