ಬೆಂಗಳೂರು : ಅಧಿಕಾರದ ಚುಕ್ಕಾಣಿ ಹಿಡಿಯಲು ಇಲ್ಲಸಲ್ಲದ ಗ್ಯಾರಂಟಿ ಯೋಜನೆ ಜಾರಿಯಿಂದಾಗಿ ಸರಕಾರದ ಖಜಾನೆ ಬರಿದಾಗಿದೆ ನುಡಿದಂತೆ ನಡೆದ ಕಾಂಗ್ರೆಸ್ ಸರಕಾರ ಇದೀಗ ಕೇವಲ ಒಂದೂವರೆ ವರ್ಷದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಮೂರನೇ ಬಾರಿ ಮದ್ಯದ ದರ ಹೆಚ್ಚಳಕ್ಕೆ ಮುಂದಾಗಿದ್ದು ಮತ್ತೊಮ್ಮೆ ಬಿಯರ್ ಪ್ರಿಯರಿಗೆ ಬಿಗ್ ಶಾಕ್ ನೀಡಿದೆ.ಇದಾಗಲೇ ಕಳೆದ ಜನವರಿ ತಿಂಗಳಲ್ಲಿ ಎಲ್ಲ ಬಿಯರ್ ಬ್ರ್ಯಾಂಡ್‌ಗಳ ಬೆಲೆಯಲ್ಲಿ ಸರ್ಕಾರದಿಂದ ಶೇ.20ರವರೆಗೆ ದರ ಹೆಚ್ಚಳ ಮಾಡಲಾಗಿತ್ತು. ಆದರೆ, ಪುನಃ ಏಳು ತಿಂಗಳು ಕಳೆದ ನಂತರ ಪುನಃ ಮತ್ತೊಮ್ಮೆ ದರ ಏರಿಕೆಗೆ ಮುಂದಾಗಿದೆ.
ರಾಜ್ಯ ಸರ್ಕಾರದಿಂದ ಎಣ್ಣೆ ಪ್ರಿಯರಿಗೆ ಶಾಕ್ ಮೇಲೆ ಶಾಕ್ ನೀಡಲು ಮುಂದಾಗಿದ್ದು ಮದ್ಯ ಪ್ರಿಯರಿಗೆ ಮತ್ತೆ ಬೆಲೆ ಏರಿಕೆ ಭಾಗ್ಯ ನೀಡುವುದು ಫಿಕ್ಸ್ ಆಗಿದೆ. ಶೀಘ್ರದಲ್ಲೇ ರಾಜ್ಯದಲ್ಲಿ ದುಬಾರಿಯಾಗಲಿದೆ. ಬಿಯರ್ ಮಾರಾಟ ದರವನ್ನು ಹೆಚ್ಚಳ ಮಾಡುವುದಕ್ಕೆ ಮುಂದಾಗಿದೆ. ಇದಾಗಲೇ ಕಳೆದ ಜನವರಿ ತಿಂಗಳಲ್ಲಿ ಎಲ್ಲ ಬಿಯರ್ ಬ್ರ್ಯಾಂಡ್‌ಗಳ ಬೆಲೆಯಲ್ಲಿ ಸರ್ಕಾರದಿಂದ ಶೇ.20ರವರೆಗೆ ದರ ಹೆಚ್ಚಳ ಮಾಡಲಾಗಿತ್ತು. ಆದರೆ, ಪುನಃ ಏಳು ತಿಂಗಳು ಕಳೆದ ನಂತರ ಪುನಃ ಮತ್ತೊಮ್ಮೆ ದರ ಏರಿಕೆಗೆ ಮುಂದಾಗಿದೆ.ತಿ ಬಾಟಲ್ ಬಿಯರ್ ಮೇಲೆ ಬರೋಬ್ಬರಿ 10 ರೂ.ಗಳಿಂದ 12 ರೂ.ಗಳವರೆಗೆ ದರ ಹೆಚ್ಚಳ ಮಾಡಲು ತೀರ್ಮನಿಸಲಾಗಿದೆ. ಪ್ರತಿ ಬಿಯರ್ ಸ್ಲ್ಯಾಬ್ ಗಳ ಮೇಲೆ ದರ ಏರಿಕೆ ಮಾಡಲು ತಯಾರಿ ನಡೆಸಿದ್ದು ಬಿಯರ್ ಪ್ರಿಯರು ದರಹೆಚ್ಚಳದಿಂದ ಸರಕಾರಕ್ಕೆ ಹಿಡಿಶಾಪಹಾಕುವಂತಾಗಿದೆ.


