Friday, March 13, 2026
Flats for sale
Homeರಾಜಕೀಯಬೆಂಗಳೂರು : ಬಿಜೆಪಿ ಎರಡನೇ ಪಟ್ಟಿಯಲ್ಲಿ ಕರ್ನಾಟಕದ ಯಾರಿಗೆಲ್ಲ ಟಿಕೆಟ್ ಸಿಗಲಿದೆ ? ಇಲ್ಲಿದೆ ಮಾಹಿತಿ...

ಬೆಂಗಳೂರು : ಬಿಜೆಪಿ ಎರಡನೇ ಪಟ್ಟಿಯಲ್ಲಿ ಕರ್ನಾಟಕದ ಯಾರಿಗೆಲ್ಲ ಟಿಕೆಟ್ ಸಿಗಲಿದೆ ? ಇಲ್ಲಿದೆ ಮಾಹಿತಿ ನೋಡಿ!

ಬೆಂಗಳೂರು : ಲೋಕಸಭೆ ಚುನಾವಣೆ ಇನ್ನೇನು ಕೆಲವೇ ತಿಂಗಳಲ್ಲಿ ನಡೆಯಲಿದ್ದು ಟಿಕೆಟ್ ಗಾಗಿ ಹಾಲಿ ಹಾಗೂ ಹೊಸ ಮುಖಗಳ ನಡುವೆ ಪೈಪೋಟಿ ನಡೆಯುತ್ತಿರುವುದು ಕಂಡುಬರುತ್ತಿದೆ. ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಪ್ರತಿಪಕ್ಷ ನಾಯಕ ಆರ್ ಅಶೋಕ್ ಸಭೆಯಲ್ಲಿ ಭಾಗವಹಿಸುವುದಕ್ಕಾಗಿ ಈಗಾಗಲೇ ದೆಹಲಿಗೆ ತೆರಳಿದ್ದು ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡುವುದಕ್ಕಾಗಿ ಇಂದು ದೆಹಲಿಯಲ್ಲಿ ಸಭೆ ನಡೆಯುತ್ತಿದೆ ಎಂಬ ಮಾಹಿತಿ ದೊರೆತಿದೆ.

ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಲಿದ್ದು ದೆಹಲಿಯಲ್ಲಿ ಕರ್ನಾಟಕದ ಪ್ರಮುಖ ನಾಯಕರು ಕೂಡ ಇಂದಿನ ಸಭೆಯಲ್ಲಿ ಭಾಗವಹಿಸುತ್ತಿರುವುದು ಕಂಡುಬಂದಿದೆ.

ಕರ್ನಾಟಕದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.

ಬೆಂಗಳೂರು ದಕ್ಷಿಣ : ತೇಜಸ್ವಿ ಸೂರ್ಯ
ಬೆಂಗಳೂರು ಉತ್ತರ : ಡಿ.ವಿ. ಸದಾನಂದ ಗೌಡ/ಸಿ.ಟಿ. ರವಿ/ ನಾರಾಯಣ್/ ವಿವೇಕ್ ರೆಡ್ಡಿ
ಬೆಂಗಳೂರು ಗ್ರಾಮಾಂತರ : ಡಾ. ಮಂಜುನಾಥ್/ಸಿ.ಪಿ. ಯೋಗೇಶ್ವರ್
ಚಾಮರಾಜನಗರ: ಡಾ. ಮೋಹನ್
ಬೆಂಗಳೂರು ಕೇಂದ್ರ : ಪಿ.ಸಿ. ಮೋಹನ್‌
ತುಮಕೂರು : ವಿ.ಸೋಮಣ್ಣ/ ಜೆ‌.ಸಿ. ಮಾಧುಸ್ವಾಮಿ
ಬಳ್ಳಾರಿ: ಬಿ. ಶ್ರೀರಾಮುಲು/ ದೇವೇಂದ್ರಪ್ಪ
ಕೊಪ್ಪಳ: ಕರಡಿ ಸಂಗಣ್ಣ
ವಿಜಯಪುರ: ರಮೇಶ್‌ ಜಿಗಜಿಣಗಿ
ಕಲ್ಬುರ್ಗಿ : ಉಮೇಶ್‌ ಜಾಧವ್‌
ಬೆಳಗಾವಿ : ಜಗದೀಶ್‌ ಶೆಟ್ಟರ್‌/ರಮೇಶ್ ಕತ್ತಿ/ ಮಂಗಳಾ ಅಂಗಡಿ
ಬೀದರ್ : ಭಗವಂತ್‌ ಖೂಬಾ
ಚಿಕ್ಕೋಡಿ : ಅಣ್ಣಾಸಾಹೇಬ್ ಜೊಲ್ಲೆ/ರಮೇಶ್‌ ಕತ್ತಿ
ರಾಯಚೂರು : ರಾಜಾ ಅಮರೇಶ್ವರ ನಾಯಕ್/ ರಾಜೂ ಗೌಡ
ಮೈಸೂರು: ಪ್ರತಾಪ್‌ ಸಿಂಹ
ಉಡುಪಿ-ಚಿಕ್ಕಮಗಳೂರು : ಶೋಭಾ ಕರಂದ್ಲಾಜೆ/ ಸಿ.ಟಿ. ರವಿ/ ಪ್ರಮೋದ್ ಮಧ್ವರಾಜ್
ದಾವಣಗೆರೆ: ಜಿ.ಎಂ. ಸಿದ್ದೇಶ್ವರ್‌/ಎಂ.ಪಿ. ರೇಣುಕಾಚಾರ್ಯ
ಶಿವಮೊಗ್ಗ : ಬಿ.ವೈ. ರಾಘವೇಂದ್ರ
ಹಾವೇರಿ: ಬಸವರಾಜ ಬೊಮ್ಮಾಯಿ/ಕೆ.ಇ. ಕಾಂತೇಶ್‌/ ಜಗದೀಶ್ ಶೆಟ್ಟರ್/ ಬಿ.ಸಿ. ಪಾಟೀಲ್
ಚಿಕ್ಕಬಳ್ಳಾಪುರ: ಡಾ. ಕೆ. ಸುಧಾಕರ್‌/ ಅಲೋಕ್‌ ವಿಶ್ವನಾಥ್‌
ಉತ್ತರ ಕನ್ನಡ : ಅನಂತ ಕುಮಾರ್‌ ಹೆಗಡೆ/ ವಿಶ್ವೇಶ್ವರ ಹೆಗಡೆ ಕಾಗೇರಿ
ದಕ್ಷಿಣ ಕನ್ನಡ: ನಳಿನ್‌ ಕುಮಾರ್‌ ಕಟೀಲ್‌/ಕ್ಯಾ. ಬ್ರಿಜೇಶ್ ಚೌಟ
ಹುಬ್ಬಳ್ಳಿ-ಧಾರವಾಡ : ಪ್ರಹ್ಲಾದ್ ಜೋಶಿ
ಚಿತ್ರದುರ್ಗ : ಎ. ನಾರಾಯಣ ಸ್ವಾಮಿ/ಮಾದಾರ ಚನ್ನಯ್ಯ ಸ್ವಾಮೀಜಿ
ಬಾಗಲಕೋಟೆ : ಪಿ.ಸಿ. ಗದ್ದಿಗೌಡರ್

RELATED ARTICLES

LEAVE A REPLY

Please enter your comment!
Please enter your name here

Most Popular