ಬೆಂಗಳೂರು : ಬಿಗ್ ಬಾಸ್ ಕನ್ನಡ ಸೀಸನ್ 11 ರ ಗ್ರ್ಯಾಂಡ್ ಓಪನಿಂಗ್ ಇದೇ ಸೆಪ್ಟೆಂಬರ್ 29 ರಂದು ನಡೆಯಲಿದೆ. ಬಿಗ್ ಬಾಸ್ ಆರಂಭಕ್ಕೆ ಕೇವಲ ಎರಡೇ ಎರಡು ದಿನ ಬಾಕಿಯಿರುವಾಗ ಸ್ಪರ್ಧಿಗಳ ಫೋಟೋ ಲೀಕ್ ಆಗಿದೆ. ಬಿಗ್ ಬಾಸ್ ಸರ್ಧಿಗಳ ಹೆಸರು ಅನೌನ್ಸ್ ಆಗುತ್ತಿದೆ. ರಾಜಾ ರಾಣಿ ಗ್ರ್ಯಾಂಡ್ ಫಿನಾಲೆಯಲ್ಲಿಯೇ ಸ್ಪರ್ಧಿಗಳ ಹೆಸರು ಅನೌನ್ಸ್ ಆಗುತ್ತಿದೆ. ಇಲ್ಲಿವರೆಗೂ ಬಿಗ್ ಬಾಸ್ ಸರಣಿಯಲ್ಲಿಯೇ ಇಷ್ಟು ಕ್ಲಿಯರ್ ಮಾಹಿತಿ ಹೊರ ಬಂದಿರಲಿಲ್ಲ. ಅಧಿಕೃತವಾಗಿಯೇ ಎಲ್ಲವೂ ಈಗಲೇ ಹೊರ ಬರುತ್ತಿದೆ. ಆದರೆ, ಸ್ಪರ್ಧಿಗಳು ಸ್ವರ್ಗಕ್ಕೆ ಹೋಗೋದಾ ಇಲ್ಲ ನರಕಕ್ಕೆ ಹೋಗ್ಬೇಕಾ ಅನ್ನೋದನ್ನ ಆಯ್ಕೆ ಮಾಡೋ ಜವಾಬ್ದಾರಿಯನ್ನ ಜನಕ್ಕೆ ಕೊಡಲಾಗಿದೆ. ಆ ಲೆಕ್ಕದಲ್ಲಿಯ ಗೌತಮಿ ಜಾದವ್ ಹೆಸರು ಅನೌನ್ ಆಗಿದೆ. ಎರಡನೇ ಸ್ಪರ್ಧಿ ಯಾರು ಗೊತ್ತಾ.? ಅದು ಇಲ್ಲಿದೆ ಓದಿ..
1. ‘ನಾಗಿಣಿ 2’ ಸೀರಿಯಲ್‌ನಲ್ಲಿ ವಿಲನ್ ಆಗಿದ್ದ ಐಶ್ವರ್ಯಾ ಸಿಂಧೋಗಿ ಈ ಬಾರಿ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಿದ್ದಾರೆ.
2. ಮುದ್ದು ಮುಖದ ಚೆಲುವೆ ಅನುಷಾ ರೈ ಅವರು ದೊಡ್ಮನೆಗೆ ಕಾಲಿಟ್ಟಿದ್ದಾರೆ. ಖಡಕ್, ದಮಂಯತಿ, ರೈಡರ್ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.
3. ಗೀತಾ’ ಸೀರಿಯಲ್ ಮೂಲಕ ಮನೆ ಮಾತಾಗಿದ್ದ ನಟಿ ಭವ್ಯಾ ಗೌಡ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಈ ಹಿಂದೆ ಮಿನಿ ಬಿಗ್ ಬಾಸ್‌ನಲ್ಲೂ ಇವರು ಒಂದು ವಾರಗಳ ಕಾಲ ಆಟ ಆಡಿದ್ದರು.
4. ಹಿಂದೂ ಫೈರ್ ಬ್ರಾಂಡ್ ಚೈತ್ರಾ ಕುಂದಾಪುರ.
5. ‘ಸತ್ಯ’ ಸೀರಿಯಲ್ ಮೂಲಕ ಮನೆ ಮಾತಾಗಿದ್ದ ಡೇರಿಂಗ್ ಲೇಡಿ ಗೌತಮಿ ಜಾದವ್ ‘ಬಿಗ್’ ಮನೆಗೆ ಕಾಲಿಟ್ಟಿದ್ದಾರೆ.
6. ‘ಅಶ್ವಿನಿ ನಕ್ಷತ್ರ’ ಸೀರಿಯಲ್‌ನಲ್ಲಿ ನಟಿ ಮಯೂರಿ ತಾಯಿಯಾಗಿ ನಟಿಸಿದ್ದ ಯಮುನಾ ಶ್ರೀನಿಧಿ
7.ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಧನರಾಜ್ ಆಚಾರ್ ಬಿಗ್ ಬಾಸ್ ಗೆ ಕಾಲಿಟ್ಟಿರೋದು ಪಕ್ಕಾ ಆಗಿದೆ.
8. ಖಳನಟ ಕೀರ್ತಿರಾಜ್ ಅವರ ಪುತ್ರ ಧರ್ಮ ಕೀರ್ತಿರಾಜ್ ಅವರು ಖಡಕ್, ನವಗ್ರಹ, ಸುಮನ್, ಓ ಮನಸೇ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.
9. ತುಕಾಲಿ ಸಂತೋಷ್ ಪತ್ನಿ ಮಾನಸಾ ತುಕಾಲಿ ಸಂತೋಷ್ ಬಿಗ್ ಬಾಸ್‌ಗೆ ಕಾಲಿಟ್ಟಿದ್ದಾರೆ.
10. ‘ಪಾರು’ ಸೀರಿಯಲ್ ಮೂಲಕ ಮನಗೆದ್ದ ನಟಿ ಮೋಕ್ಷಿತಾ ಪೈ.
11. ಕಿರುತೆರೆ ನಟ ಶಿಶಿರ್ ಶಾಸ್ತ್ರಿ ಅವರು ಸೊಸೆ ತಂದ ಸೌಭಾಗ್ಯ, ಕುಲವಧು, ಭಾರತಿ ಸೇರಿದಂತೆ ಹಲವು ಸೀರಿಯಲ್‌ನಲ್ಲಿ ನಟಿಸಿದ್ದಾರೆ.
12 .‘ಪದ್ಮಾವತಿ’ ಸೀರಿಯಲ್ ಮೂಲಕ ಟಿವಿ ಪ್ರೇಕ್ಷಕರ ಮನಗೆದ್ದ ನಟ ತ್ರಿವಿಕ್ರಮ್.


