Saturday, July 18, 2026
Homeರಾಜ್ಯಬೆಂಗಳೂರು : ಫ್ರೀ ಅಂತಾ ಊರೂರು ಸುತ್ತುತ್ತೀರಾ ಎಂದು ಕಿರಿಕ್, ಮಹಿಳೆ ಮೇಲೆ ಕಂಡಕ್ಟರ್ ಕೆಂಡಾಮಂಡಲ.

ಬೆಂಗಳೂರು : ಫ್ರೀ ಅಂತಾ ಊರೂರು ಸುತ್ತುತ್ತೀರಾ ಎಂದು ಕಿರಿಕ್, ಮಹಿಳೆ ಮೇಲೆ ಕಂಡಕ್ಟರ್ ಕೆಂಡಾಮಂಡಲ.

ಬೆಂಗಳೂರು : ಕರ್ನಾಟಕ ಸರ್ಕಾರವು ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಸರ್ಕಾರಿ ಸಾರಿಗೆ ಬಸ್‌ನಲ್ಲಿ ಉಚಿತ ಪ್ರಯಾಣ ಆರಂಭಿಸಿದ ದಿನದಿಂದ ಬಸ್‌ನಲ್ಲಿ ಓಡಾಡುವವರ ಸಂಖ್ಯೆ ಹೆಚ್ಚಳವಾಗಿದೆ. ಆದರೆ, ಬಸ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪ್ರಯಾಣಿಕರ ಕಂಡು ಕಂಡಕ್ಟರ್ ಸಿಟ್ಟಿಗೆದ್ದು ಫ್ರೀ ಅಂತಾ ಊರೂರು ಸುತ್ತುತ್ತೀರಾ ಎಂದು ಕಿರಿಕ್ ಮಾಡಿಕೊಂಡಿದ್ದಾನೆ.

ಚನ್ನಪಟ್ಟಣದಿಂದ ಬೆಂಗಳೂರಿಗೆ ಬರುತ್ತಿದ್ದ ಬಿಎಂಟಿಸಿ ಬಸ್ ತುಂಬಾ ರಶ್ ಆಗಿತ್ತು. ಇದನ್ನು ಗಮನಿಸಿದ ಕಂಡಕ್ಟರ್ ನಿಮಗೆ ಮನೆಯಲ್ಲಿ ಮಾಡೋದಕ್ಕೆ ಕೆಲಸ ಇಲ್ವಾ? ಫ್ರೀ ಅಂತ ಊರು ಊರು ಸುತ್ತುತ್ತೀರಾ? ಎಂದು ಕಿರಿಕ್ ಮಾಡಿದ್ದಾನೆ. ಅಲ್ಲದೇ ಮಹಿಳೆಯರಿಗೆ ಅವಾಚ್ಯ ಶಬ್ದಗಳಿಂದ ನಿAದಿಸಿದ್ದಾನೆ. ಶಕ್ತಿ ಯೋಜನೆಯನ್ನು ಕೂಡ ಟೀಕಿಸಿದ್ದಾನೆ.

ಇನ್ನೂ ಬಸ್‌ನಲ್ಲಿದ್ದ ಓರ್ವ ಮಹಿಳೆಯನ್ನು ಕೆಂಗೇರಿ ಬಳಿಯೇ ಕೆಳಗಿಳಿಸಿ, ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಘಟನೆ ಸಂಬಂಧ ಕೆಂಗೇರಿ ಪೊಲೀಸರಿಗೆ ಮಹಿಳೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಕಂಡಕ್ಟರ್ ವಿರುದ್ಧ
ಎಫ್‌ಐಆರ್ ದಾಖಲಾಗಿದೆ

RELATED ARTICLES

LEAVE A REPLY

Please enter your comment!
Please enter your name here

Most Popular