ಬೆಂಗಳೂರು : ಪ್ರೀತಿಯ ಹೆಸರಲ್ಲಿ ಯುವಕನೊಬ್ಬನ ಮಾತು ನಂಬಿ ಆತನಿಗೆ ತ ನ್ನ ಖಾಸಗಿ ಫೋಟೋಗಳನ್ನು ಕಳಿಸಿದ್ದಯುವತಿ ಯೊಬ್ಬಳು ಈಗ ಸೈಬರ್ ಬ್ಲಾಕ್‌ಮೇಲರ್ ಜಾಲಕ್ಕೆ ಸಿಲುಕಿ ಕಂಗಾಲಾಗಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ.
ನಗರದ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ 19 ವರ್ಷದ ವಿದ್ಯಾರ್ಥಿನಿ, ತನ್ನ ಪ್ರಿಯಕರನ ಕೋರಿಕೆಯ ಮೇರೆಗೆ ಕೆಲವು ಖಾಸಗಿ ಫೋಟೋಗಳನ್ನು ಆತನಿಗೆ ಕಳಿಸಿದ್ದಳು. ಆದರೆ, ಕೆ ಲವೇ ದಿನಗಳಲ್ಲಿ ಅಪರಿಚಿತ ನಂಬರ್‌ನಿಂದ ಆಕೆಗೆಕರೆ ಬರಲಾರಂಭಿಸಿದೆ. ಆಕೆ ಪ್ರಿಯಕರನಿಗೆ ಕಳಿಸಿದ್ದ ಅದೇ ಫೋಟೋಗಳನ್ನು ತೋರಿಸಿ ದುಷ್ಕರ್ಮಿಯು ಹಣಕ್ಕಾಗಿ ¨ಬ್ಲಾಕ್ ಮೇಲ್ ಮಾಡಲು ಶುರು ಮಾಡಿದ್ದಾನೆ.
ಫೋಟೋ ಬಹಿರಂಗವಾಗುವ ಭೀತಿಯಲ್ಲಿದ್ದ ಯುವತಿ, ತನ್ನ ಸ್ನೇಹಿತನ ಮೂಲಕ ಈಗಾಗಲೇ ಬ್ಲಾಕ್‌ಮೇ ಲರ್‌ಗೆ ಸುಮಾರು ೧ ಲಕ್ಷ ರೂ. ಪಾವತಿಸಿದ್ದಾ ಳೆ. ಆದರೂ ಆರೋಪಿ ಹಣದದಾಹ ತೀರದ ಕಾರಣ, ಮತ್ತೆ ಮತ್ತೆ ಹೆಚ್ಚಿನ ಮೊತ್ತಕ್ಕೆ ಬೇಡಿಕೆ ಇಡುತ್ತಿದ್ದಾನೆ. ಇದರಿಂದ ನೊಂದ ಯುವತಿ ಅಂತಿಮವಾಗಿ ಪೊಲೀಸರ ಮೊರೆ ಹೋಗಿದ್ದಾಳೆ. ತನ್ನ ಮೊಬೈಲ್‌ನಿಂದ ಪ್ರಿಯಕರನಿಗೆ ಮಾತ್ರ ಫೋಟೋ ಕಳಿಸಲಾಗಿತ್ತು. ಆದರೆ ಅಪರಿಚಿತನ ಕೈಗೆ ಈ ಫೋಟೋಗಳು ಸಿಕ್ಕಿದ್ದು ಹೇಗೆ ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ.
ಸದ್ಯದ ಪೋಲೀಸ್ ತನಿಖೆಯ ಪ್ರಕಾರ, ಈ ಕೃತ್ಯದಲ್ಲಿ ಆಕೆಯ ಪ್ರಿಯಕರನ ಪಾತ್ರ ಕಂಡುಬAದಿಲ್ಲ ಎನ್ನಲಾಗಿದೆ. ಡೇಟಾ ಹ್ಯಾಕ್ ಆಗಿದೆಯೇ ಅಥವಾ ತಾಂತ್ರಿಕ ನುಸುಳುವಿಕೆ ನಡೆದಿದೆಯೇ ಎಂಬ ಬಗ್ಗೆ ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.


