ಬೆಂಗಳೂರು : ಭಾರತದ ಮಾಜಿ ಆಟಗಾರ ಮಯಾಂಕ್ ಅಗರ್ವಾಲ್, ಇದೇ ದಿನಾಂಕ 23 ರಿಂದ ನಗರದ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂಜಾಬದ ಎದುರು ನಡೆಯಲಿರುವ ನಾಲ್ಕು ದಿನಗಳ ರಣಜಿ ಟ್ರೋಫಿ ಲೀಗ್ ಪಂದ್ಯದಲ್ಲಿ ಕರ್ನಾಟಕ ರಾಜ್ಯ ತಂಡದ ನಾಯಕತ್ವ ವಹಿಸಲಿದ್ದಾರೆ.
ಪಂಜಾಬ್ ಎದುರಿನ ಮಹತ್ವದ ಪಂದ್ಯಕ್ಕಾಗಿ ಕೆಎಸ್‌ಸಿಎ ಸೋಮವಾರ ಬೆಂಗಳೂರಿನಲ್ಲಿ ಪ್ರಕಟಿಸಿದ 16 ಸದಸ್ಯರ ತಂಡ ಇಂತಿದೆ : ಮಾಯಾಂಕ್ ಅಗರ್ವಾಲ್(ನಾಯಕ), ಶ್ರೇಯಸ್ ಗೋಪಾಲ(ಉಪನಾಯಕ), ದೇವದತ್ ಪಡಿಕ್ಕಲ್, ಅನೀಶ್ ಕೆ.ವಿ., ಸ್ಮರಣ ರವಿಚಂದ್ರನ್, ಶ್ರೀಜಿತ್ ಕೆ.ಎಲ್.(ವಿಕೆಟ್ ಕೀಪರ್), ಅಭಿನವ ಮನೋಹರ, ಹಾರ್ದಿಕ್ ರಾಜ್, ಪ್ರಸಿದ್ಧ ಎಂ. ಕೃಷ್ಣ, ಕೌಶಿಕ್ ವಾಸುಕಿ, ಅಭಿಲಾಷ ಶೆಟ್ಟಿ, ಯಶೋವರ್ಧನ ಪರಂತಾಪ, ನಿಕಿನ್ ಜೋಸ್, ವಿದ್ಯಾಧರ ಪಾಟೀಲ, ಸುಜಯ ಸತೇರಿ(ವಿಕೆಟ್ ಕೀಪರ್) ಹಾಗೂ ಮೊಹ್ಸಿನ್ ಖಾನ.
ಎಲೈಟ್ `ಸಿ’ ಗುಂಪಿನಲ್ಲಿರುವ ಕರ್ನಾಟಕ ಆಡಿರುವ 5 ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದು 12 ಪಾಯಿಂಟ್‌ಗಳೊಡನೆ ಸದ್ಯ ನಾಲ್ಕನೇ ಸ್ಥಾನದಲ್ಲಿದೆ. ಇಷ್ಟೇ ಪಂದ್ಯಗಳಿAದ 20 ಪಾಯಿಂಟ್ ಕೂಡಿಹಾಕಿರುವ ರ‍್ಯಾಣಾ ಅಗ್ರಸ್ಥಾನದಲ್ಲಿದ್ದು, ಕೇರಳ(18) ಹಾಗೂ ಬಂಗಾಲ(14) ಅನುಕ್ರಮವಾಗಿ ಎರಡು ಹಾಗೂ ಮೂರನೇಯದಾಗಿವೆ.