Friday, November 22, 2024
Flats for sale
Homeಕ್ರೈಂಬೆಂಗಳೂರು ; ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ತಾಯಿ-ಮಗಳ ಜಗಳ ,ಚೂರಿ ಇರಿತದಲ್ಲಿ ಮಗಳನ್ನೇ...

ಬೆಂಗಳೂರು ; ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ತಾಯಿ-ಮಗಳ ಜಗಳ ,ಚೂರಿ ಇರಿತದಲ್ಲಿ ಮಗಳನ್ನೇ ಕೊಂದ ತಾಯಿ!

ಬೆಂಗಳೂರು ; ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ತಾಯಿ ಮತ್ತು ಮಗಳ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವುದು ಬನಶಂಕರಿ ಶಾಸ್ತ್ರಿನಗರದ 3ನೇ ಕ್ರಾಸ್​ನಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ದ್ವಿತೀಯ ಪಿಯುಸಿಯಲ್ಲಿ ಸಾಹಿತಿ ಪಾಸ್ ಆಗಿದ್ದಾಳೆ. ಆದರೆ ಕಡಿಮೆ ಅಂಕ ಬಂದಿದೆ ಎಂದು ಪುತ್ರಿ ಜತೆ ತಾಯಿ ಪದ್ಮಜಾ ವಾಗ್ವಾದ ಮಾಡಿದ್ದಾರೆ.

ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ಗಳಿಸಿದ್ದಕ್ಕೆ ಮಗಳನ್ನು ತಾಯಿ ಪ್ರಶ್ನೆ ಮಾಡಿದ್ದಾಳೆ. ಈ ವಿಚಾರಕ್ಕೆ ತಾಯಿ ಮತ್ತು ಮಗಳ ನಡುವೆ ನಿತ್ಯ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಸೋಮವಾರ ಇದೇ ವಿಚಾರಕ್ಕೆ ಜಗಳ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯಗೊಂಡಿರುವ ಶಂಕೆ ವ್ಯಕ್ತವಾಗಿದೆ. ತಾಯಿ ಪದ್ಮಜಾಗೆ 4-5 ಕಡೆ ಸಾಹಿತಿ ಚಾಕು ಇರಿದಿದ್ದು ಸಾಹಿತಿ(18) ಕೊಲೆಯಾದ ಯುವತಿ. ಪದ್ಮಜಾ (60) ಮಗಳನ್ನು ಕೊಲೆಗೈದ ತಾಯಿ ಎಂದು ತಿಳಿದುಬಂದಿದೆ.

ಸದ್ಯ ಪದ್ಮಜಾ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular