ಬೆಂಗಳೂರು : ದಿನನಿತ್ಯ ಬಳಸುವ ಅಗತ್ಯ ವಸ್ತುಗಳು ರಾಜ್ಯದಲ್ಲಿ ಮಳೆಯ ತೀವ್ರ ಕೊರತೆ ಹಿನ್ನೆಲೆಯಲ್ಲಿ ಆಹಾರ ಧಾನ್ಯ ಹಾಗೂ ತರಕಾರಿಗಳ ಬೆಲೆ ಗಗನಕ್ಕೇರುತ್ತಿದೆ. ಕೆಜಿ ಈರುಳ್ಳಿ ದರ ಸದ್ಯದಲ್ಲಿ ಸೆಂಚುರಿ ಬಾರಿಸಲಿದೆ.
ಕಾಂಗ್ರೆಸ್ ಸರಕಾರ ಅಧಿಕಾರ ಬಂದ ನಂತರ ರಾಜ್ಯದಲ್ಲಿ ಅತಿವೃಷ್ಟಿ, ಬರಗಾಲ ಹಿನ್ನೆಲೆಯಲ್ಲಿ ಆಹಾರ ಧಾನ್ಯಗಳ ಇಳುವರಿ ಕುಸಿತ ಕಂಡಿದೆ. ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ಪೂರೈಕೆಯಾಗುತ್ತಿದ್ದ ವಿವಿಧ ಆಹಾರ ಧಾನ್ಯ ಹಾಗೂ ಅಕ್ಕಿಯ ಪ್ರಮಾಣ ಕಡಿಮೆಯಾಗಿದೆ ಹೀಗಾಗಿ ಧಾನ್ಯಗಳ ಬೆಲೆ ಅಧಿಕಗೊಂಡಿದೆ. ರಾಜ್ಯದಲ್ಲಿ ಈ ವರ್ಷ ಮಳೆ ಕೊರತೆಯಾಗಿ, ಬಿತ್ತನೆಯಾಗಿದ್ದ ಬೆಳೆಗಳು ಒಣಗಿವೆ. ಅಂತರ್ಜಲ ಕೂಡ ಕುಸಿದಿದೆ. ನೀರಿಲ್ಲದೆ ಬೆಳೆಗಳು ಒಣಗುತ್ತಿವೆ. ರಾಜ್ಯದ 162 ತಾಲೂಕುಗಳಲ್ಲಿ ಬರಗಾಲ ಆವರಿಸಿದೆ. ಇದರಿಂದ ಆಹಾರ ಧಾನ್ಯಗಳ ಬೆಲೆ ಅಧಿಕಗೊಳ್ಳುತ್ತಿದೆ. ತೊಗರಿ, ಹೆಸರು, ಉದ್ದಿನ ಬೇಳೆ, ಜೋಳ, ಅಕ್ಕಿ ಸೇರಿದಂತೆ ಆಹಾರಧಾನ್ಯಗಳ ಬೆಲೆ ಹೆಚ್ಚಳವಾಗಿದೆ. ರಾಜ್ಯದಲ್ಲಿ 2021-22ರ ರಲ್ಲಿ 143.68 ಲಕ್ಷ ಟನ್ ಆಹಾರ ಧಾನ್ಯ ಉತ್ಪಾದನೆಯಾಗಿದ್ದರೇ, ಈ ವರ್ಷ ಕೇವಲ 135.48 ಲಕ್ಷ ಟನ್ ಉತ್ಪಾದನೆಯಾಗಿದೆ.
ದಿನನಿತ್ಯ ಬಳಸುವ ಬೇಳೆಕಾಳುಗಳ ದರ ಶೇ. 20 ರಿಂದ 35.8 ರಷ್ಟು ಏರಿಕೆಯಾಗಿದೆ. ಅಗತ್ಯ ದಿನಸಿ ಸಾಮಗ್ರಿಗಳ ಬೇಲೆ ಡಿಸೆಂಬರ್ಬ ಳಿಕ ಮತಷ್ಟು ದುಬಾರಿಯಾಗುವ ಸಾಧ್ಯತೆ ಇದೆ. ಹೆಸರು, ಉದ್ದು, ಕಡಲೆ, ಗೋಧಿ, ಅಕ್ಕಿ ಸೇರಿದಂತೆ ಹಲವು ಪದಾರ್ಥಗಳ ಬೆಲೆ ಶೇ.30 ರಷ್ಟು ಏರಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ಇದು ದುಪ್ಪಟ್ಟಾಗುವ ಸಾಧ್ಯತೆ ಇದೆ. ಅಲ್ಲದೆ ಸಿರಿಧಾನ್ಯಗಳಾದ ಸಜ್ಜೆ, ರಾಗಿ, ಬರಗು, ನವಣೆ, ಸಾಮೆ, ಅರ್ಕ, ಕೊರಲೆ ಬೆಲೆಯೂ ದುಪ್ಪಟ್ಟಾಗಿದೆ. ಇದೇ ಅವಧಿಯಲ್ಲಿ ವಸ್ಪತಿ ಆಲೂಗಡ್ಡೆ ಹಾಗೂ ಟೊಮ್ಯೊಟೊ ದರದಲ್ಲಿ ಕುಸಿತ ಕಂಡಿದೆ. ಇದರಿಂದ ಮಧ್ಯಮ ವರ್ಗದ ಜನರಿಗೆ ಬರೆ ಎಳೆದಂತಾಗಿದೆ.