ಬೆಂಗಳೂರು : ಇನ್ನೇನು ಕೆಲವೇ ತಿಂಗಳಲ್ಲಿ ದೇಶದಲ್ಲಿ ಚುನಾವಣೆಯ ಸದ್ದು ಕೇಳಲಿದ್ದು ಎಲ್ಲ ಪಕ್ಷಗಳು ರಣರಂಗಕ್ಕೆ ಸಜ್ಜಾಗಲಿದೆ . ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಚುನಾವಣಾ ಸಿದ್ಧತೆಗಾಗಿ ಎರಡು ದಿನಗಳ ಕಾಲ ಸುದೀರ್ಘ ಚಿಂತನ-ಮAಥನ ಮುಕ್ತಾಯಗೊಂಡಿದ್ದು, ಎರಡನೇ ದಿನವಾದ ಗುರುವಾರ 15 ಕ್ಷೇತ್ರಗಳ ವಾಸ್ತವಿಕ ಸ್ಥಿತಿ ಕುರಿತಂತೆ ಮುಖಂಡರು ಚರ್ಚೆ ನಡೆಸಿದರು.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಸಂಸದರನ್ನು ಬದಲಾವಣೆ ಮಾಡಬೇಕೆಂಬುದು ಸಾಮಾನ್ಯ ಕಾರ್ಯಕರ್ತರ ಒತ್ತಡ ,ಯಾಕೆಂದರೆ ಈ ಸಂಸದರು ಸಾಮಾನ್ಯ ಕಾರ್ಯಕರ್ತರ ಕೈಗೆ ಸಿಗದಿರುವುದು ಹಾಗೂ ಸರಿಯಾಗಿ ಕ್ಷೆತ್ರದ ಕೆಲಸಕಾರ್ಯಕ್ಕೆ ಒತ್ತುಕೊಡದೆ ಇರುವುದು ಜನರ ಮಾತು .ಈ ಸಭೆಯಲ್ಲಿ ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು, ಹಾವೇರಿ ಹಾಗೂ ಬೆಂಗಳೂರು ಉತ್ತರ ಕ್ಷೇತ್ರದ ಬಗೆಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಉತ್ತರ ಕನ್ನಡ ಕ್ಷೇತ್ರದ ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆ ಬಗೆಗೆ ಅನಿರೀಕ್ಷಿತವಾಗಿ ಒಮ್ಮತಾಭಿಪ್ರಾಯ ವ್ಯಕ್ತವಾಗಿದೆ.
ಯುವ ಮತದಾರರು ಜಿಲ್ಲೆಯಲ್ಲಿ ವಿದ್ಯಾವಂತ ಸಂಸದರನ್ನು ಬಯಸಿದ್ದು ನಳೀನ್ ಕುಮಾರ್ ಕಟೀಲ್ ಗೆ ಇದರಿಂದ ತೀವ್ರ ಹಿನ್ನಡೆಯಾಗಿದೆ ,ಜನಸಾಮನ್ಯರ ನಾಡಿ ಮಿಡಿತವನ್ನು ಸರಿಯಾಗಿ ತಿಳಿಯದೆ ಇರುವುದು ಹಾಗೂ ಕಚೇರಿಗೆ ಹೋದರೆ ಸರಿಯಾಗಿ ಸ್ಪಂದಿಸದೆ ಇರುವುದು ಜಿಲ್ಲೆಯ ಮತದಾರರ ಆಕ್ರೋಶ . ದಕ್ಷಿಣ ಕನ್ನಡದ ನಳಿನ್ ಕುಮಾರ್, ಕಟೀಳ್, ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಹಾಲಿ ಸಂಸದೆಯಾಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಭೆಗೆ ಗೈರು ಹಾಜರಾದರೆ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಧಾರವಾಡ ಕ್ಷೇತ್ರದ ಚರ್ಚೆ ವೇಳೆ ಸಭೆಯಲ್ಲಿ ಪಾಲ್ಗೊಂಡಿದ್ದರು.
ದಕ್ಷಿಣ ಕನ್ನಡ ಕ್ಷೇತ್ರದ ಚರ್ಚೆ ವೇಳೆ ಅರುಣ್ ಕುಮಾರ್ ಪುತ್ತಿಲ್ ಹೆಸರು ಪ್ರಸ್ತಾಪವಾದರೆ, ಉಡುಪಿ ಕ್ಷೇತ್ರದ ಚರ್ಚೆ ವೇಳೆ ಕಾಂಗ್ರೆಸ್‌ನಿAದ ಜಯಪ್ರಕಾಶ್ ಹೆಗ್ಡೆ ಸ್ಪರ್ಧಿಸಿದರೆ ಬಿಜೆಪಿ ಎಚ್ಚರಿಕೆಯಿಂದ ಚುನಾವಣೆ ಎದುರಿಸಬೇಕಾಗುತ್ತದೆ ಎಂಬ ಅಭಿಪ್ರಾಯ ಕೇಳಿಬಂದಿದೆ ಎಂದು ಮೂಲಗಳು ತಿಳಿಸಿವೆ.ಯಾಕೆಂದರೆ ಶೋಭಾ ಕರಂದ್ಲಾಜೆ ಜಿಲ್ಲೆಯಲ್ಲಿ ಜನಸಾಮನ್ಯರ ಕೈಗೆ ಸಿಗದೇ ಇರುವುದು ಹಾಗೂ ಅಭಿವೃದ್ಧಿ ಕೆಲಸಕಾರ್ಯಕ್ಕೆ ಕೈಜೋಡಿಸದೆ ಇರುವುದು ಮುಖ್ಯ ಕಾರಣ.
ಹಾವೇರಿ ಲೋಕಸಭಾ ಕ್ಷೇತ್ರದ ಚರ್ಚೆ ವೇಳೆ ಮಾಜಿ ಶಾಸಕ ಕಳಕಪ್ಪ ಬಂಡಿ ಅವರು ಪರೋಕ್ಷವಾಗಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ನಡೆಯ ಬಗೆಗೆ ಆಕ್ಷೇಪ ವ್ಯಕ್ತಪಡಿಸಿದರು ಎನ್ನಲಾಗಿದೆ.
ಧಾರವಾಡ ಕ್ಷೇತ್ರದ ಚರ್ಚೆಯ ವೇಳೆ ಹೆಚ್ಚು ವಿಷಯ ಪ್ರಸ್ತಾಪ ಆಗಲಿಲ್ಲವಾದರೂ ಸಭೆಗೆ ಗೈರು ಹಾಜರಾಗಿದ್ದ ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಅವರು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ದೂರವಾಣಿ ಕರೆ ಮಾಡಿ, ಅನಾರೋಗ್ಯದಿಂದ ತಾವು ಸಭೆಗೆ ಬರುತ್ತಿಲ್ಲ ಹಾಗೂ ಧಾರವಾಡ ಕ್ಷೇತ್ರದಿಂದ ಸ್ಪರ್ಧಿಸಲು ತಾವೂ ಬಯಸಿದ್ದಾಗಿ ಅಭಿಪ್ರಾಯ ನೀಡಿದ್ದಾರೆ ಎಂದು ಖಚಿತ ಮೂಲಗಳು ಹೇಳಿವೆ.
ಸಭೆಯಲ್ಲಿ ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ವಿಜಯಪುರ, ಧಾರವಾಡ, ದಾವಣಗೆರೆ, ಚಿತ್ರದುರ್ಗ ಹಾಗೂ ಬೆಂಗಳೂರಿನ ಮೂರೂ ಕ್ಷೇತ್ರಗಳ ಬಗೆಗೆ ಅಭಿಪ್ರಾಯ ಸಂಗ್ರಹಿಸಲಾಯಿತು.


