Tuesday, February 4, 2025
Flats for sale
Homeರಾಜ್ಯಬೆಂಗಳೂರು : ತಾಂತ್ರಿಕ ತಜ್ಞರ ತಂಡದ ಜೊತೆ ನ್ಯಾಯಾಲಯದಲ್ಲಿ ತನ್ನದೇ ರಾಸಲೀಲೆಯ ವಿಡಿಯೋ ನೋಡಿದ ಮಾಜಿ...

ಬೆಂಗಳೂರು : ತಾಂತ್ರಿಕ ತಜ್ಞರ ತಂಡದ ಜೊತೆ ನ್ಯಾಯಾಲಯದಲ್ಲಿ ತನ್ನದೇ ರಾಸಲೀಲೆಯ ವಿಡಿಯೋ ನೋಡಿದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ..!

ಬೆಂಗಳೂರು : ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಚ್ಚಿದ ಕೋರ್ಟ್ ನಲ್ಲಿ ನಿನ್ನೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪ್ರಜ್ವಲ್ ವಕೀಲರು ಮತ್ತು ತಾಂತ್ರಿಕ ತಜ್ಞರ ತಂಡ ವಿಡಿಯೋವನ್ನು ವೀಕ್ಷಣೆ ಮಾಡಿದ್ದಾರೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಬೆಳಿಗ್ಗೆ ಪರಪ್ಪನ ಅಗ್ರಹಾರ ಜೈಲಿನಿಂದ ಪ್ರಜ್ವಲ್ ಅವರನ್ನು ಪೊಲೀಸರು ಕರೆ ತಂದ ಬಳಿಕ ವಿಚಾರಣೆ ಆರಂಭವಾಯಿತು. ಈ ವೇಳೆ ಮಾಧ್ಯಮದವರಿಗೆ ಸುದ್ದಿಗಳನ್ನು ಪ್ರಕಟ ಮಾಡದಂತೆ ನಿರ್ದೇಶಿಸಬೇಕೆAದು ಪ್ರಜ್ವಲ್ ಪರ ವಕೀಲ ಅರುಣ್ ಮನವಿ ಮಾಡಿದರು.

ಇದಕ್ಕೆ ನ್ಯಾಯಧೀಶರು ಮಾಧ್ಯಮವರಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು. ಈ ವೇಳೆ ಎಸ್‌ಪಿಪಿ ಮೀಡಿಯಾದವರು ಇಂಜಕ್ಷನ್ ತಂದಿರುವ ವಿಚಾರವನ್ನು ಕೋರ್ಟ್ ಗಮನಕ್ಕೆ ತಂದರು. ನಂತರ ತಾಂತ್ರಿಕ ತಜ್ಞರು ಬಂದಿಲ್ಲ. ಹೀಗಾಗಿ ವಿಡಿಯೋ ವೀಕ್ಷಣೆಗೆ ಮತ್ತೊಂದು ದಿನಾಂಕ ನೀಡಬೇಕೆಂದು ಪ್ರಜ್ವಲ್ ಪರ ವಕೀಲ ಅರುಣ್ ಮನವಿ ಮಾಡಿದರು. ಇದಕ್ಕೆ ಗರಂ ಆದ ಜಡ್ಜ್, ಸಮಯ ವಿಸ್ತರಣೆ ಮಾಡಲು ಏನು ಮಾಡಬೇಕು ಅದನ್ನು ಮಾಡುತ್ತಾ ಇದ್ದೀರಿ. ಬೇಕಾದರೆ ಮಹಿಳಾ ನ್ಯಾಯಾಧೀಶರು ಬೇಕು ಎಂದು ಅರ್ಜಿ ಹಾಕಿ ನನ್ನದೇನು ಅಭ್ಯಂತರವಿಲ್ಲ ಎಂದರು.

ಕೊನೆಗೆ ಪ್ರಜ್ವಲ್ ರೇವಣ್ಣ, ವಕೀಲರು ಮತ್ತು ತಾಂತ್ರಿಕ ತಜ್ಞರ ತಂಡ ಮುಚ್ಚಿದ ಕೋರ್ಟ್ನಲ್ಲಿ ವಿಡಿಯೋವನ್ನು ವೀಕ್ಷಣೆ ಮಾಡಲು ತೆರಳಿದರು. ಈ ವೇಳೆ ಎಸ್‌ಪಿಪಿ, ಪ್ರಕರಣದ ತನಿಖಾಧಿಕಾರಿ ಹೊರತು ಪಡಿಸಿ ಬೇರೆ ಯಾರಿಗೂ ಮುಚ್ಚಿದ ಕೋರ್ಟ್ ಒಳಗಡೆ ಪ್ರವೇಶಕ್ಕೆ ಅನುಮತಿ ನೀಡಲಿಲ್ಲ. ತನ್ನ ಮೇಲೆ ದಾಖಲಾಗಿರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಿಯಾಗಿರುವ ತನ್ನ 2,೦೦೦ ವಿಡಿಯೋ ಹಾಗೂ 15 ಸಾವಿರ ಫೋಟೊಗಳು ಇರುವ ಮೊಬೈಲ್ ಅನ್ನು ವಾಪಸ್ ಕೊಡುವಂತೆ ಹಾಗೂ ಪ್ರಕರಣದಿಂದ ತನ್ನನ್ನು ಖುಲಾಸೆ ಮಾಡುವಂತೆ ಪ್ರಜ್ವಲ್ ರೇವಣ್ಣ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್, ಇತರೇ ಮಹಿಳೆಯರ ಖಾಸಗಿತನ ಉಲ್ಲಂಘಿಸುವ ದಾಖಲೆಗಳು ನಿಮಗೆ ಏಕೆ ಬೇಕು? ಎಲ್ಲವೂ ಅಶ್ಲೀಲವಾಗಿದೆ. ಅಶ್ಲೀಲತೆಗೆ ಒಂದು ಮಿತಿ ಇರಬೇಕು ಎಂದು ಅಭಿಪ್ರಾಯಪಟ್ಟು ಚಾಟಿ ಬೀಸಿತ್ತು.

ಮೊಬೈಲ್ ಕೊಡಲಾಗುವುದಿಲ್ಲ. ಆದರೆ ನಿಮ್ಮ ವಿಡಿಯೋ ಹಾಗೂ ಫೋಟೋಗಳನ್ನು ಕೋರ್ಟ್ನಲ್ಲಿಯೇ ವೀಕ್ಷಣೆ ಮಾಡುವುದಕ್ಕೆ ಅವಕಾಶ ನೀಡಲಾಗುವುದು. ಪ್ರಕರಣ ದಾಖಲು ಮಾಡಿದವರ ವಿಡಿಯೋ ಮಾತ್ರ ನೀಡಿ ಎಂದು ಕೋರ್ಟ್ಸೂ ಚಿಸಿತ್ತು. ಮಹಿಳೆಯರ ಖಾಸಗಿತನ ಗೌರವಿಸುವುದು ಎಲ್ಲರ ಕರ್ತವ್ಯ. ಪ್ರಜ್ವಲ್ ರೇವಣ್ಣ ಅಂದ ಕೂಡಲೇ ಕಾನೂನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟ ಕೋರ್ಟ್ ಈ ಅರ್ಜಿಯನ್ನು
ಇತ್ಯರ್ಥ ಮಾಡಿತ್ತು.

RELATED ARTICLES

LEAVE A REPLY

Please enter your comment!
Please enter your name here

Most Popular