ಬೆಂಗಳೂರು : ಡಿಜಿಪಿ ಕೆ ರಾಮಚಂದ್ರ ರಾವ್ ರವರ ರಾಸಲೀಲೆಯ ವಿಡಿಯೋ ವೈರಲ್ ಆಗಿದೆ,ತನ್ನ ಕಚೇರಿಯಲ್ಲೇ ಮಹಿಳೆಯರ ಜೊತೆ ಕಾಮುಕನ ರೀತಿ ವರ್ತಿಸಿ ಕಾಮಚೇಷ್ಟೆ ನಡೆಸುವ ವಿಡಿಯೋ ಇದಾಗಿದ್ದು ರಕ್ಷಕರೇ ಕಾಮುಕರಾದರೆ ಹೇಗೆ ಎಂದು ಸಾಮಾಜಿಕಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ತಮ್ಮ ಮಲಮಗಳು ರಾನ್ಯಾ ರಾವ್ ಭಾಗಿಯಾಗಿದ್ದಾರೆ ಎನ್ನಲಾದ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡ್ಡಾಯ ರಜೆಯಲ್ಲಿ ತೆರಳಿದ್ದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಕೆ ರಾಮಚಂದ್ರ ರಾವ್ ಅವರನ್ನು ಡಿಜಿಪಿಯಾಗಿ ಮರು ನೇಮಕ ಮಾಡಲಾಗಿತ್ತು. ಪೊಲೀಸ್ ಶಿಷ್ಟಾಚಾರ ಸೇವೆಗಳ ದುರುಪಯೋಗ ಮತ್ತು ಈ ಪ್ರಕರಣದಲ್ಲಿ ಡಿಜಿಪಿ ರಾಮಚಂದ್ರ ರಾವ್ ಅವರ ಸಂಭಾವ್ಯ ಪಾತ್ರದ ಬಗ್ಗೆ ತನಿಖೆ ನಡೆಸಲು ಗೌರವ್ ಗುಪ್ತಾ ಸಮಿತಿಯನ್ನು ರಚಿಸಲಾಗಿತ್ತು. ಇದಾದ ಬಳಿಕ ಮಾರ್ಚ್ 15 ರಂದು ರಾವ್ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿತ್ತು.
ಈಗಾಗಲೇ ಪೊಲೀಸರೇ ದರೋಡೆ, ಸುಲಿಗೆಯಂತಹ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿರುವ ಘಟನೆ ನಡೆದ ಬೆನ್ನಲ್ಲೇ ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ಪ್ರಕರಣ ಇಡೀ ಪೊಲೀಸ್ ಇಲಾಖೆಯೇ ತಲೆತಗ್ಗಿಸುವಂತಾಗಿದೆ. ವೈರಲ್ ಆಗಿರುವಂತ ವೀಡಿಯೋಗಳಲ್ಲಿ ಡಿಜಿಪಿ ಡಾ.ರಾಮಚಂದ್ರರಾವ್ ಅವರು ತಮ್ಮ ಕಚೇರಿಯಲ್ಲೇ ಕುಳಿತು, ಸಮವಸ್ತçದಲ್ಲಿ ಮಹಿಳೆಯೊಂದಿಗೆ ವಿವಿಧ ಭಂಗಿಗಳಲ್ಲಿ ಅಸಭ್ಯವಾಗಿ ವರ್ತಿಸಿರುವುದನ್ನು ಕಾಣಬಹುದಾಗಿದೆ.ರಾಜ್ಯದ ಪ್ರಸಿದ್ಧ ಮಾಡೆಲ್ ಒಬ್ಬರ ಜೊತೆಗೆ ಡಿಜಿಪಿ ಡಾ.ರಾಮಚಂದ್ರರಾವ್ ಸರಸವಾಡುವ ವೀಡಿಯೋ ಮಾಡಿಕೊಂಡಿದ್ದರು ಎನ್ನಲಾಗಿದೆ.
ಮಹಿಳೆಯೋರ್ವರ ಜೊತೆ ಡಿಜಿಪಿ ಇರುವ ಖಾಸಗಿ ವಿಡಿಯೋ ಪೊಲೀಸ್ ಇಲಾಖೆಯ ಮಾನ ಹರಾಜು ಹಾಕಿದ್ದು, ವಿಡಿಯೋದಲ್ಲಿರೋದು 1 ವರ್ಷದ ಹಿಂದೆ ಸೆರೆಯಾಗಿದ್ದ ದೃಶ್ಯಗಳು ಎಂಬುದು ಗೊತ್ತಾಗಿವೆ. ಸದ್ಯ ಡಿಸಿಆರ್ಇ ಡಿಜಿಪಿಯಾಗಿ ರಾಮಚಂದ್ರ ರಾವ್ ಕಾರ್ಯನಿರ್ವಹಿಸುತ್ತಿದ್ದಾರೆ.ಚೇರ್ ಮೇಲೆ ಕುಳಿತು ಮಹಿಳೆಯನ್ನ ಅಪ್ಪಿಕೊಂಡು IPS ಅಧಿಕಾರಿ ಸರಸ ನಡೆಸಿದ್ದು, ಇದು ರನ್ಯಾರಾವ್ ಪ್ರಕರಣಕ್ಕಿಂತ ಮೊದಲು ನಡೆದಿರುವ ಘಟನೆ ಎಂಬ ಮಾಹಿತಿ ಸಿಕ್ಕಿದೆ.
ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮ ಲಿಮಿಟೆಡ್‌ನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಮತ್ತು ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆಗಿ ಸೇವೆ ಸಲ್ಲಿಸಿದ್ದರು. 2023ರಲ್ಲಿ ಇವರನ್ನು ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್‌ನ ಡಿಜಿಪಿ ಮತ್ತು ಅಧ್ಯಕ್ಷ ಮತ್ತು ಎಂಡಿ ಆಗಿ ಬಡ್ತಿ ನೀಡಲಾಗಿತ್ತು. ಬಳಿಕ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಡಿಜಿಪಿಯಾಗಿ ನೇಮಕಗೊಂಡಿದ್ದರು. ರಾಮಚಂದ್ರ ರಾವ್ ರಾಸಲೀಲೆ ವಿಡಿಯೋ ವೈರಲ್ ವಿಚಾರ ಸಂಬಂಧ ಅಧಿಕಾರಿ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಂದು ಮಹಿಳಾಪರ ಸಂಘಟನೆಗಳು ಒತ್ತಾಯಿಸಿದೆ.


