Saturday, March 14, 2026
Flats for sale
Homeರಾಜ್ಯಬೆಂಗಳೂರು : ಟೊಮೆಟೊ ದರದಲ್ಲಿ ದಿಢೀರ್‌ ಏರಿಕೆ,ಕಂಗಾಲಾದ ಗ್ರಾಹಕರು ..!

ಬೆಂಗಳೂರು : ಟೊಮೆಟೊ ದರದಲ್ಲಿ ದಿಢೀರ್‌ ಏರಿಕೆ,ಕಂಗಾಲಾದ ಗ್ರಾಹಕರು ..!

ಬೆಂಗಳೂರು : ಜನಸಾಮಾನ್ಯನಿಗೆ ಒಂದರ ಹಿಂದೆ ಒಂದರಂತೆ ದರ ಏರಿಕೆಯ ಬರೆ ಬೀಳುತ್ತಿದ್ದು ಈರುಳ್ಳಿ, ಬೆಳ್ಳುಳ್ಳಿ ಬಳಿಕ ಇದೀಗ ಟೊಮೆಟೊ ದರ ಏರಿಕೆಯಾಗಿದೆ. ಕಳೆದ ಒಂದು ವಾರದ ಹಿಂದೆ ಕೆಜಿಗೆ 40 ರೂ. ಇದ್ದ ದರ ಈಗ ಎರಡು ಪಟ್ಟು ಹೆಚ್ಚಳವಾಗಿದೆ. ಶುಕ್ರವಾರದಿಂದ ಕೆಜಿಗೆ 80 ರೂ. ದರದಲ್ಲಿ ಟೊಮೆಟೊ ಮಾರಾಟವಾಗುತ್ತಿದೆ.ಕಳೆದ ತಿಂಗಳು ತೀವ್ರ ಕುಸಿತ ಕಂಡಿದ್ದ ಟೊಮೆಟೊ ಧಾರಣೆ ಕಳೆದ ಕೆಲ ವಾರಗಳಿಂದ ಒಮ್ಮೆಲೇ ಎರಡು ಪಟ್ಟು ಹೆಚ್ಚಳವಾಗಿದೆ. ಹೀಗಾಗಿ ಈಗ ಕೆಂಪು ಸುಂದರಿಗೆ ಮತ್ತೆ ಬಂಪರ್ ಹೊಡೆದಿದೆ.

ಅಕಾಲಿಕ ಮಳೆ‌ಯಿಂದ ಟೊಮೆಟೊ ಇಳುವರಿ ಕುಸಿತಗೊಂಡಿದೆ. ಇದರ ಜೊತೆ ಈಗ ನವರಾತ್ರಿ ಹಬ್ಬ,ಬೇಡಿಕೆ ಜಾಸ್ತಿ ಇದೆ. ಪೂರೈಕೆ ಕಡಿಮೆ ಇರುವ ಕಾರಣ ಟೊಮೆಟೊ ಬೆಲೆ ದಿಢೀರ್‌ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಈಗಾಗಲೇ ಅಕಾಲಿಕ ಮಳೆಯಿಂದಾಗಿ 1 ಕೆಜಿ ಈರುಳ್ಳಿ ದರ 70 ರೂ. ದಾಟಿದೆ. 1 ಕೆಜಿ ಬೆಳ್ಳುಳ್ಳಿ ದರ 500 ರೂ. ಆಗಿದೆ. ಈಗ ಟೊಮೆಟೊ ದರ ಏರಿಕೆಯಿಂದಾಗಿ ದಸರಾ ಹಬ್ಬದ ಸಮಯದಲ್ಲಿ ಜನರ ಜೇಬು ಮತ್ತಷ್ಟು ಖಾಲಿಯಾಗಲಿದೆ.

ಸದ್ಯ ಹಬ್ಬ ಇರುವ ಕಾರಣ ಟೊಮೆಟೊಗೆ ಬಾರಿ ಬೇಡಿಕೆ ಇದೆ‌. ಆದ್ರೆ ಬೇಡಿಕೆಗೆ ತಕ್ಕಂತೆ ಟೊಮೆಟೊ ಸಿಗದ ಪರಿಣಾಮ ಬೆಲೆ ಏರಿಕೆಯಾಗುತ್ತಿದೆ. ಹೋಲ್ ಸೇಲ್ ನಲ್ಲಿ ಒಂದು ಕೆಜಿ ಟೊಮೆಟೊ ಬೆಲೆ‌ 50 ರಿಂದ 60 ರೂಪಾಯಿ ಇದ್ರೆ, ರಿಟೈಲ್ ನಲ್ಲಿ 80 ರಿಂದ 90 ರವರೆಗೂ ದರ ಫಿಕ್ಸ್ ಮಾಡಲಾಗಿದೆ. ಮಾರುಕಟ್ಟೆಗೆ 20 ಟೊಮೆಟೊ ಬಾಕ್ಸ್ ಗಳು ಮಾತ್ರ ಬರುತ್ತಿದ್ದು, ಒಟ್ಟು 20% ರಷ್ಟು ಟೊಮೆಟೊಕೊರತೆಯಾಗಿದೆ. ಇದರ ಮಧ್ಯೆ ಬಾಂಬೆ , ಕೊಲ್ಕತ್ತಾ, ಗುಜರಾತ್ ಗೂ ಕರ್ನಾಟಕದಿಂದಲೇ ಟೊಮೆಟೊ ಹೋಗುತ್ತಿರುವ ಪರಿಣಾಮ ಬೆಲೆ ಏರಿಕೆಗೆ ಕಾರಣವಾಗುತ್ತಿದೆ ಎಂದು ಹೋಲ್ ಸೇಲ್ ವ್ಯಾಪಾರಸ್ಥರು ಹೇಳುತ್ತಿದ್ದಾರೆ.

ಸದ್ಯ ಈರುಳ್ಳಿ ಬೆಳ್ಳುಳ್ಳಿ, ಬೀನ್ಸ್ ಜಾಸ್ತಿಯಾಗಿದೆ. ಟೊಮೆಟೊ ಮಾರುಕಟ್ಟೆಯಲ್ಲಿ 60 ರಿಂದ 80 ರೂಪಾಯಿ ಇದೆ‌. ಮನೆಯ ಅಕ್ಕಪಕ್ಕದ ಅಂಗಡಿಗಳಲ್ಲಿ 100 ರೂಪಾಯಿ ಮಾಡಿದ್ದಾರೆ. ಇದರಿಂದ ಗ್ರಾಹಕರಿಗೆ ತುಂಬ ಕಷ್ಡ ಆಗುತ್ತಿದೆ. ಇಷ್ಟೋಂದು ಬೆಲೆ ಜಾಸ್ತಿಯಾದ್ರೆ ಹಬ್ಬವನ್ನ ಮಾಡುವುದಾದ್ರು ಹೇಗೆ ಹೇಳಿ ಎಂದು ಗ್ರಾಹಕರು ಅಳಲು ತೋಡಿಕೊಂಡಿದ್ದು ಹೋಟೆಲ್ ಮಾಲೀಕರು ಕೂಡ ತಲೆ ಮೇಲೆ ಕೈಹಿಟ್ಟುಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular