Thursday, March 12, 2026
Flats for sale
Homeರಾಜಕೀಯಬೆಂಗಳೂರು : ಗ್ಯಾರಂಟಿಗಳಿಗೆ 3 ತಿಂಗಳಲ್ಲಿ ಸುಮಾರು 6,321 ಕೋಟಿ ಅಧಿಕ ಬಿಡುಗಡೆ,ಅಭಿವೃದ್ಧಿಗಿಂತ ಗ್ಯಾರಂಟಿಗೆ ದುಬಾರಿ...

ಬೆಂಗಳೂರು : ಗ್ಯಾರಂಟಿಗಳಿಗೆ 3 ತಿಂಗಳಲ್ಲಿ ಸುಮಾರು 6,321 ಕೋಟಿ ಅಧಿಕ ಬಿಡುಗಡೆ,ಅಭಿವೃದ್ಧಿಗಿಂತ ಗ್ಯಾರಂಟಿಗೆ ದುಬಾರಿ ಖರ್ಚು,ತ್ರೈ ಮಾಸಿಕ ವರದಿಯಲಿ ವಿವರ..!

ಬೆಂಗಳೂರು : ಆರ್ಥಿಕ ಇಲಾಖೆಯ ಅಂಕಿ-ಅಮಾಶ ಗಳ ಪ್ರಕಾರ ಬಂಡವಾಳ ವೆಚ್ಚಕ್ಕೆ ತ್ರೈಮಾಸಿಕದಲ್ಲಿ ಖರ್ಚು ಮಾಡಿದ್ದು ಕೇವಲ 5,396 ಕೋಟಿ ರೂ. ಅದೇ ಪಂಚ ಗ್ಯಾರಂಟಿ ಗಳಿಗೆ 3 ತಿಂಗಳಲ್ಲಿ ಸುಮಾರು 6,321 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ.

ರಾಜ್ಯ ಸರ್ಕಾರ 2025-26 ಸಾಲಿನ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಪಂಚ ಗ್ಯಾರಂಟಿಗಳಿಗಾಗಿ ಸುಮಾರು 51,034 ಕೋಟಿ ರೂ. ಅನುದಾನ ಹಾಗೂ ಬಂಡವಾಳ ವೆಚ್ಚಕ್ಕಾಗಿ ಅಂದಾಜು 71,336 ಕೋಟಿ ರೂ. ಅನುದಾನ ಹಂಚಿಕೆ ಮಾಡಿದ್ದರು. ಆದರೆ ಬಜೆಟ್ ವರ್ಷದ ಮೊದಲ ತ್ರೈ ಮಾಸಿಕ ಮುಕ್ತಾಯವಾಗಿದ್ದು ಬಂಡವಾಳ ವೆಚ್ಚದ ರೂಪದಲ್ಲಿ ಹಣ ವ್ಯಯಿಸಿರುವುದು ಅತ್ಯಲ್ಪವಾಗಿದೆ.

ಶೇ.7.56 ಬಂಡವಾಳ ವೆಚ್ಚ: 2025-26 ಬಜೆಟ್ ವರ್ಷದ ಮೊದಲ ತ್ರೈ ಮಾಸಿಕದಲ್ಲಿ ರಾಜ್ಯ ಸರ್ಕಾರ ಕೇವಲ ಶೇ. 7.56ಬಂಡವಾಳ ವೆಚ್ಚಮಾಡಿದೆ. ಏಪ್ರಿಲ್‌ಜೂನ್ ವರೆಗೆ ಬಂಡವಾಳ ವೆಚ್ಚವಾಗಿ ಕೇವಲ 5,236 ಕೋಟಿ ರೂ. ಖರ್ಚು ಮಾಡಿದೆ. ಕಳೆದ ಬಜೆಟ್ ವರ್ಷದಲ್ಲಿ ಮೊದಲ ತ್ರೈಮಾಸಿಕದಲ್ಲಿ ಶೇ. 8.24ರಷ್ಟು ಬಂಡವಾಳ ವೆಚ್ಚ ಮಾಡಲಾಗಿತ್ತು. ಅಂದರೆ ಕಳೆದ ಬಜೆಟ್ ವರ್ಷಕ್ಕೆ ಹೋಲಿಕೆ ಮಾಡಿದರೂ ಬಂಡವಾಳ ವೆಚ್ಚದ ಪ್ರಗತಿ ಮಂದಗತಿಯಲ್ಲಿದೆ. ಮೂರು ತಿಂಗಳಲ್ಲಿ ರಾಜ್ಯ ಸರ್ಕಾರ ರಾಜಸ್ವ ವೆಚ್ಚ ಅಂದರೆ ನೌಕರರ ವೇತನ, ಪಿಂಚಣಿ, ಸಹಾಯಧನ, ಪಂಚ ಗ್ಯಾರಂಟಿ ಒಳಗೊಂಡಂತೆ ಸುಮಾರು 61,651 ಕೋಟಿ ರೂ. ಖರ್ಚು ಮಾಡಿದೆ.

ಪ್ರಸಕ್ತ ಬಜೆಟ್ ವರ್ಷದಲ್ಲಿ ಒಟ್ಟು ರಾಜಸ್ವ ವೆಚ್ಚವಾಗಿ 3,11,738 ಕೋಟಿ ಅಂದಾಜು ಮಾಡಿದೆ. ಈ ಪೈಕಿ ಮೊದಲ ತ್ರೈ ಮಾಸಿಕದಲ್ಲಿ ಸುಮಾರು
ಶೇ. 20ರಷ್ಟು ವ್ಯಯಿಸಲಾಗಿದೆ. ಆದರೆ, ಬಂಡವಾಳ ವೆಚ್ಚದ ರೂಪದಲ್ಲಿ ಕೇವಲ 7.56ರಷ್ಟು ಮಾತ್ರ ಹಣ ಖರ್ಚು ಮಾಡಲಾಗಿದೆ.

2024-25ರಲ್ಲಿ ಒಟ್ಟು 55,877 ಕೋಟಿ ರೂ. ಬಂಡವಾಳ ವೆಚ್ಚ ಅಂದಾಜು ಮಾಡಲಾಗಿತ್ತು. ಈ ಪೈಕಿ ಏಪ್ರಿಲ್‌ನಲ್ಲಿ 2,೦27 ಕೋಟಿ ರೂ., ಮೇ ತಿಂಗಳಲ್ಲಿ 586 ಕೋಟಿ ರೂ, ಜೂನ್‌ನಲ್ಲಿ 1,993 ಕೋಟಿ ರೂ. ಬಂಡವಾಳ ವೆಚ್ಚ ಮಾಡಲಾಗಿತ್ತು. ಒಟ್ಟು ಬಂಡವಾಳ ವೆಚ್ಚದ ಮುಂದೆ ಮೊದಲ ತ್ರೆöÊಮಾಸಿಕದಲ್ಲಿ ಶೇ. 8.24ಪ್ರಗತಿ ಸಾಧಿಸಲಾಗಿತ್ತು. ಕಳೆದ ಬಜೆಟ್ ವರ್ಷಕ್ಕೆ ಹೋಲಿಕೆ ಮಾಡಿದರೂ ಬಂಡವಾಳ ವೆಚ್ಚದ ಪ್ರಗತಿ ಮಂದಗತಿಯಲ್ಲಿದೆ. ಮೂರು ತಿಂಗಳಲ್ಲಿ ರಾಜ್ಯ ಸರ್ಕಾರ ರಾಜಸ್ವ ವೆಚ್ಚ ಅಂದರೆ ನೌಕರರ ವೇತನ, ಪಿಂಚಣಿ, ಸಹಾಯಧನ, ಪಂಚ ಗ್ಯಾರಂಟಿ ಒಳಗೊಂಡAತೆ ಸುಮಾರು 61,651 ಕೋಟಿ ರೂ. ಖರ್ಚು ಮಾಡಿದೆ.

ಗ್ಯಾರಂಟಿಗಳಿಗೆ ಆದ್ಯತೆ 2025-26 ಸಾಲಿನಲ್ಲಿ ಈವರೆಗೆ ವ್ಯಯಿಸಿದ ಬಂಡವಾಳ ವೆಚ್ಚ ಅತ್ಯಲ್ಪವಾಗಿದೆ. ಆದರೆ, ಅದೇ ಇತ್ತ ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಆರ್ಥಿಕ ಇಲಾಖೆಯ ಅಂಕಿ ಅAಶದAತೆ ಬಂಡವಾಳ ವೆಚ್ಚಕ್ಕೆ ತ್ರೈ ಮಾಸಿಕದಲ್ಲಿ ಖರ್ಚು ಮಾಡಿದ್ದು ಕೇವಲ 5,396 ಕೋಟಿ ರೂ. ಆದರೆ ಪಂಚ ಗ್ಯಾರಂಟಿಗಳಿಗೆ 3 ತಿಂಗಳಲ್ಲಿ ಸುಮಾರು 6,321 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಅಂದರೆ ಅನುದಾನದ ಪೈಕಿ ಶೇ. 8.3೦ರಷ್ಟು ಪಂಚ ಗ್ಯಾರಂಟಿಗಳಿಗೆ ಹಣ ಬಿಡುಗಡೆ ಮಾಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular