ಬೆಂಗಳೂರು : ಟೊಮೇಟೊ ಬೆಲೆ ಏರಿಕೆಯಿಂದ ಜನರಿಗೆ ಉಳಿಗಾಲವಿಲ್ಲದಂತಾಗಿದೆ. ಟೊಮೆಟೊ ಬೆಲೆ ಕೆಜಿಗೆ 200 ರೂ.ಆಗಿದೆ. ಸೋಮವಾರ ಬೆಳಗ್ಗೆ ಎಪಿಎಂಸಿಯಲ್ಲಿರುವ ಟೊಮೇಟೊ ಮಂಡಿಯಲ್ಲಿ ಜಿಲ್ಲೆ ಹಾಗೂ ಅಕ್ಕಪಕ್ಕದ ಜಿಲ್ಲೆಗಳಿಂದ ರೈತರು, ವರ್ತಕರು ತಂದಿದ್ದ ಟೊಮೆಟೊ ಹರಾಜು ಪ್ರಕ್ರಿಯೆ ನಡೆಯಿತು. ಪ್ರತಿ ಬಾಕ್ಸ್ಗೆ 4,500 ರೂ.ಗೆ ಮಾರಾಟವಾಗಿದ್ದು, ಕೆಜಿಗೆ 180 ರೂ. ಭಾನುವಾರ ಇದೇ ಬಾಕ್ಸ್ಗಳು 5,000 ರೂ.ಗೆ ಹರಾಜಾಗಿದ್ದು, ಕೆಜಿಗೆ ಸುಮಾರು 200 ರೂ. ಚಿಕ್ಕಮಗಳೂರಿನಿಂದ ಗುಜರಾತ್, ರಾಜಸ್ಥಾನ, ನವದೆಹಲಿ, ಮಹಾರಾಷ್ಟ್ರ, ಒಡಿಶಾ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಿಗೆ ಟೊಮೆಟೊ ಪೂರೈಕೆಯಾಗುತ್ತಿದೆ ಎಂದು ಟೊಮೆಟೊ ವ್ಯಾಪಾರಿ ಬಿ ಎಚ್ ಹರೀಶ್ ತಿಳಿಸಿದರು ಭಾನುವಾರ ಮಾರುಕಟ್ಟೆಗೆ 15 ಸಾವಿರ ಬಾಕ್ಸ್ ಟೊಮೆಟೊ ಬಂದಿತ್ತು. ಸೋಮವಾರ 5,000 ಬಾಕ್ಸ್ಗಳು ಮಾರುಕಟ್ಟೆಗೆ ಬಂದಿವೆ. ಮಂಗಳವಾರ ಮತ್ತು ಬುಧವಾರದಂದು ಸುಮಾರು 15,000 ರಿಂದ 20,000 ಬಾಕ್ಸ್ಗಳು ಮಾರುಕಟ್ಟೆಗೆ ಬರಲಿವೆ. ”ಬೆಲೆ ಕಡಿಮೆಯಾಗಲು ಗ್ರಾಹಕರು ಇನ್ನೂ ಒಂದು ತಿಂಗಳು ಕಾಯಬೇಕು. ಮಹಾರಾಷ್ಟ್ರ ಮತ್ತು ಇತರ ಪ್ರದೇಶಗಳಿಂದ ಟೊಮೆಟೊ ಬೆಳೆಗಳು ಮಾರುಕಟ್ಟೆಗೆ ಬಂದ ನಂತರ ಬೆಲೆ ಕಡಿಮೆಯಾಗುತ್ತದೆ. "ಎಂದು ವ್ಯಾಪಾರಿಗಳು ಹೇಳಿದರು.


