Wednesday, March 11, 2026
Flats for sale
Homeರಾಜ್ಯಬೆಂಗಳೂರು : ಗಂಡು ಮಗು ಆಗಿಲ್ಲವೆಂದು ಪ್ರೀತಿಸಿ ಮದುವೆಯಾದ ಪತ್ನಿಗೆ ಕೈಕೊಟ್ಟು ಪರಾರಿಯಾದ ಪತಿ.

ಬೆಂಗಳೂರು : ಗಂಡು ಮಗು ಆಗಿಲ್ಲವೆಂದು ಪ್ರೀತಿಸಿ ಮದುವೆಯಾದ ಪತ್ನಿಗೆ ಕೈಕೊಟ್ಟು ಪರಾರಿಯಾದ ಪತಿ.

ಬೆಂಗಳೂರು : ಪ್ರೀತಿಸಿ ಮದುವೆಯಾದ ಪತಿ, ಗಂಡು ಮಗುವಿನ ಹಪಾಹಪಿಗೆ ಬಿದ್ದು ೩ ಹೆಣ್ಣು ಮಕ್ಕಳನ್ನು ಹೆತ್ತ ಪತ್ನಿಯನ್ನು ನಡುನೀರಿನಲ್ಲಿ ಕೈಬಿಟ್ಟು ಪರಾರಿಯಾಗಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಹಸುಗೂಸು ಸೇರಿ ಮೂವರು ಹೆಣ್ಣು ಮಕ್ಕಳೊಂದಿಗೆ ಸಂತ್ರಸ್ತ ಮಹಿಳೆ ಈಗ ನ್ಯಾಯಕ್ಕಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.

ಮೂಲತಃ ಆಂಧ್ರದವರಾದ ವರಲಕ್ಷ್ಮಿ ಎಂಬುವವರು 2014 ರಲ್ಲಿಬೆಂಗಳೂರಿನ ದ್ವಾರಕನಗರದ ಫಾರ್ಮಸಿಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಅದೇ ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದ ರಾಜಸ್ಥಾನ ಮೂಲದ ಹರೀಶ್ ಎಂಬಾತನೊAದಿಗೆ ಈಕೆಗೆ ಪ್ರೇಮಾಂಕುರವಾಗಿತ್ತು. ನಂತರ ಉಭಯ ಕುಟುಂಬಗಳ ಒಪ್ಪಿಗೆ ಪಡೆದೇ ಈ ಜೋಡಿ ವಿವಾಹವಾಗಿತ್ತು. ಪತಿ ಹರೀಶ್‌ಗೆ ಗಂಡು ಮಗುವಿನ ಮೇಲೆ ತೀವ್ರ ವ್ಯಾಮೋಹವಿತ್ತು. ಆದರೆ ಮೂರನೇ ಮಗುವೂ ಹೆಣ್ಣಾಗಲಿದೆ ಎಂಬ ಸುಳಿವು ಸಿಗುತ್ತಿದ್ದಂತೆಯೇ ಆತ ಪತ್ನಿಯಿಂದ ದೂರವಾಗಲು ಶುರು ಮಾಡಿದ್ದ. ಇತ್ತೀಚೆಗೆ ಜನಿಸಿದ ೩ನೇ ಮಗು ಕೂಡ ಹೆಣ್ಣೆಂಬುದು ತಿಳಿದ ಮೇಲೆ ಹರೀಶ್ ಪತ್ನಿ ಮತ್ತು ಮಕ್ಕಳ ಮುಖ ನೋಡದೆ ಮನೆಯಿಂದ ನಾಪತ್ತೆಯಾಗಿದ್ದಾನೆ. ಹರೀಶ್ ಈಗಾಗಲೇ ಮತ್ತೊಂದು ಯುವತಿಯನ್ನು ವಿವಾಹವಾಗಿದ್ದಾನೆ ಎಂದು ವರಲಕ್ಷ್ಮಿ ಆರೋಪಿಸಿದ್ದಾರೆ. ಈ ಸಂಬAಧ ಒಟ್ಟು 7 ಜನರ ವಿರುದ್ಧ ಈಶಾನ್ಯ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular