ಬೆಂಗಳೂರು : ಬಡತನದಿಂದ ಮನೆಯ ಸಂಸಾರ ನಿಭಾಯಿಸದೇ ಕುಡಿತದ ಚಟಕ್ಕೆ ಒಳಗಾಗಿದ್ದ ಪತಿಯ ವರ್ತನೆಗೆ ರೋಸಿಹೋದ ಗೃಹಿಣಿಯೊಬ್ಬಳು ತಾನು ಹೆತ್ತ ನವಜಾತ ಶಿಶುವನ್ನು ಕೊಂದ ಹೃದಯವಿದ್ರಾವಕ ಘಟನೆ ನೆಲಮಂಗಲ ಪೊಲೀಸ್ ಠಾಣೆಯ ವಿಶ್ವೇಶಪುರದ ನಾಗಕಲ್ಲು ಎಂಬ ಗ್ರಾಮದಲ್ಲಿ ಸಂಭವಿಸಿದೆ.
ಪವನ್ ಹಾಗೂ ರಾಧೆ ಎಂಬ ದಂಪತಿಗೆ ಜನಿಸಿದ ಒಂದೂವರೆ ವರ್ಷದ ಗಂಡು ಮಗು ಬಡತನಕ್ಕೆ ಬಲಿಯಾಗಿದ್ದು, ಪವನ್ ಮನೆಯ ಸಂಸಾರ ನಿಭಾಯಿಸದೇ ಕುಡಿತದ ಚಟಕ್ಕೆ ಒಳಗಾಗಿದ್ದ ಎನ್ನಲಾಗಿದ್ದು, ಬಡತನ ಹಾಗೂ ಮಗುವಿನ ಆರೈಕೆ ಕಷ್ಟವಾದ ಹಿನ್ನೆಲೆಯಲ್ಲಿ ತಡರಾತ್ರಿ ಮಗುವನ್ನು ನೀರು ಕಾಯಿಸುವ ಹಂಡೆಯಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾರೆನ್ನಲಾಗಿದೆ. ಘಟನೆ ಸಂಬAಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ರಾಧೆಯನ್ನು ವಶಕ್ಕೆ ಪಡೆದುಕೊಂಡು ಮುAದಿನ ಕ್ರಮ ಕೈಗೊಂಡಿದ್ದಾರೆ.