ಬೆಂಗಳೂರು ; ಯುಗಾದಿ ಕಳೆದ ನಂತರ ರಾಜ್ಯದಲ್ಲಿ ಒಳ್ಳೆ ಬೆಳೆ ಮತ್ತು ಮಳೆಯಾಗುವ ಲಕ್ಷಣಗಳಿವೆ ಎಂದು ಸದ್ಯ ಮಳೆ-ಬೆಳೆ ಇಲ್ಲದೇ ಕಂಗಾಲಾಗಿರುವ ರೈತರಿಗೆ ಒಂದು ಸಮಾಧಾನಕರ ಭವಿಷ್ಯವೊಂದನ್ನು ಹೇಳಿದ್ದರು, ಅಲ್ಲದೇ ಬಾಂಬ್ ಸ್ಫೋಟ, ಭೂಕಂಪ ಆಗುತ್ತೆ ಮತಾದಂತೆ ಹೆಚ್ಚಾಗುತ್ತದೆ, ಧಾರ್ಮಿಕ ಮುಖಂಡನ ಸಾವು ಸಹ ಆಗಲಿದೆ ಎಂದು ಆಘಾತಕಾರಿ ಭವಿಷ್ಯ ನುಡಿದಿದ್ದರು.
ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ನುಡಿದ ಭವಿಷ್ಯ ನಿಜವಾದಂತಿದೆ.ಇದೀಗ ಬೆಚ್ಚಿಬೀಳಿಸಿದ ರಾಮೇಶ್ವರಂ ಕೆಫೆಯ ಬಾಂಬ್ ಬ್ಲಾಸ್ಟ್ ದೇಶದ್ಯಾಂತ ಸುದ್ದಿಯಾಗಿದೆ . ಮಧ್ಯಾಹ್ನ ಸರಿಯಾಗಿ 12.55 ಹೊತ್ತಿಗೆ ರಾಜ್ಯ ರಾಜಧಾನಿಯ ವೈಟ್ಫೀಲ್ಡ್ನ ಬ್ರೂಕ್ ಫೀಲ್ಡ್ ಸಮೀಪದಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ.
ಹಲವು ದಿನಗಳ ಹಿಂದೆ ಕೋಲಾರದ ಜಿಲ್ಲೆ ಮಾಲೂರು ಪಟ್ಟಣದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಕೋಡಿ ಮಠದ ಡಾ.ಶಿವನಂದ ಶಿವಯೋಗಿ ಸ್ವಾಮೀಜಿ, ಜಾಗತಿಕ ಮಟ್ಟದಲ್ಲಿ ತೊಂದರೆ ಇದೆ. ಬೆಂಕಿ ಹಾವಳಿ,ನೀರಿನ ಹಾವಳಿ, ಯುದ್ದ ಆಗುತ್ತೆ. ಅನೇಕ ಸಾವು ನೋವುಗಳು ಆಗುತ್ತೆ. ಮತಾದಂತೆ ಹೆಚ್ಚಾಗುತ್ತದೆ ಎಂದು ಹೇಳಿದರು.ಯುಗಾದಿ ಕಳೆದ ನಂತರ ರಾಜ್ಯದಲ್ಲಿ ಒಳ್ಳೆ ಬೆಳೆ ಮತ್ತು ಮಳೆಯಾಗುವ ಲಕ್ಷಣಗಳಿವೆ ಎಂದು ಭವಿಷ್ಯ ನುಡಿದರು. ಇನ್ನು ಇದೇ ವೇಳೆ ಗ್ಯಾರೆಂಟ್ ಗಳಿಂದ ಸರ್ಕಾರ ನಡೆಯುತ್ತಿದ್ದೀಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು ಈ ಬಗ್ಗೆ ಯುಗಾದಿ ಕಳೆದ ನಂತರ ಹೇಳುವೆ, ಇನ್ನ ಸಾಕಷ್ಟು ಸಮಯವಿದೆ ಎಂದು ಸ್ಫೋಟಕ ಭವಿಷ್ಯ ನುಡಿದಿದ್ದರು.
ಇದೀಗ ರಾಜ್ಯದಲ್ಲಿ ಬರಗಾಲ ಜೊತೆ ನೀರಿಗೆ ಹಾಹಾಕಾರ ಶುರುವಾಗಿದ್ದು,ಸರಕಾರ ಖಾಸಗಿ ಟ್ಯಾಂಕರ್ ಮೂಲಕ ಎಲ್ಲ ಹಳ್ಳಿಗಳಿಗೆ ನೀರು ಪೂರೈಕೆ ಮಾಡಲು ವ್ಯವಸ್ಥೆ ಮಾಡಲಾಗಿದೆ,ಇದರ ಮಧ್ಯೆ ನಿನ್ನೆ ಬೆಂಗಳೂರಿನಲ್ಲಿ ಬಾಂಬ್ ಸ್ಪೋಟಗೊಡಿದ್ದು ಶ್ರೀ ಗಳ ಸ್ಪೋಟಕ ಭವಿಷ್ಯ ನಿಜವಾದಂತಾಗಿದೆ.ಈಗಾಗಲೇ ಕೇಸ್ ಬಗ್ಗೆ ನಗರ ಪೊಲೀಸರಿಂದ ಎನ್ಐಎ ಮಾಹಿತಿಯನ್ನು ಪಡೆದುಕೊಂಡಿದೆ. ಅಲ್ಲದೆ, ಈ ಬ್ಲಾಸ್ಟ್ ಅನ್ನು ವ್ಯವಸ್ಥಿತವಾಗಿ ಮಾಡಲಾಗಿದ್ದು, ಎಲ್ಲಿಯೂ ಸಹ ಹೆಚ್ಚಿನ ಚಹರೆಯಾಗಲಿ, ಸುಳಿವನ್ನಾಗಲೀ ಬಿಡದಂತೆ ಪ್ಲ್ಯಾನ್ ಮಾಡಿ ಬ್ಲಾಸ್ಟ್ ಮಾಡಲಾಗಿದೆ. ಜತೆಗೆ ಇದು ಒಬ್ಬ ಕೃತ್ಯವಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದರ ಹಿಂದೆ ಒಂದು ಜಾಲವೇ ಇದ್ದು, ಆ ಬಗ್ಗೆ ತನಿಖೆ ನಡೆಸಬೇಕಿದೆ. ಅಲ್ಲದೆ, ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟಕ್ಕೆ ಬಳಸಿದ ವಸ್ತುಗಳಿಗೂ, ರಾಮೇಶ್ವರಂ ಕೆಫೆ ಬ್ಲಾಸ್ಟ್ಗೆ ಬಳಕೆ ಮಾಡಲಾಗಿರುವ ವಸ್ತುಗಳಿಗೂ ಸಾಮ್ಯತೆ ಇರುವುದರಿಂದ ತನಿಖೆ ಬೇರೆ ದಿಕ್ಕಿನಲ್ಲೇ ಸಾಗಬೇಕಿದೆ. ಹೀಗಾಗಿ ಎನ್ಐಎ ಮಧ್ಯಪ್ರವೇಶ ಮಾಡಿದೆ. ತನಿಖೆಯ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿದೆ.


