ಬೆಂಗಳೂರು : ವಿಮಾನಗಳ ವಿಳಂಭದಿಂದ ಏರ್ಪೋಟ್ ನಲ್ಲಿ ಪ್ರಯಾಣಿಕರು ತುಂಬಿ ತಳುಕಿದ ಘಟನೆ ಕೆಂಪೇಗೌಡ ಏರ್ಪೋಟ್ ನ ಟರ್ಮಿನಲ್ 1 ರಲ್ಲಿ ನಡೆದಿದೆ.
ಕೆಂಪೇಗೌಡ ಏರ್ಪೋಟ್ ನ ಟರ್ಮಿನಲ್ 1 ರಲ್ಲಿ ಡಿಪಾರ್ಚರ್ ಗೇಟ್ ಬಳಿ ಕೂರಲು ಜಾಗವಿಲ್ಲದೆ ಪ್ರಯಾಣಿಕರು ಪರದಾಡಿದ್ದಾರೆ. ಕಳೆದ ಎರಡು ದಿನಗಳಿಂದ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗುತ್ತಿದ್ದುವ ಇಂಡಿಗೋ ವಿಮಾನಗಳಲ್ಲಿ ಪೈಲೆಟ್ ಮತ್ತು ಸಿಬ್ಬಂದಿ ಕೊರತೆಯಿಂದ ಪರದಾಟವಾಗುತ್ತಿದೆಂದು ತಿಳಿದುಬಂದಿದೆ.
ಡಿಪಾರ್ಚರ್ ಗೇಟ್ಗಳ ಬಳಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು ಇಂಡಿಗೋ ಏರ್ಲೈನ್ಸ್ ಸಿಬ್ಬಂದಿ ವಿರುದ್ದ ಪ್ರಯಾಣಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಗಂಟೆಗಟ್ಟಲೆ ಕಾದರು ವಿಮಾನಗಳು ಡಿಲೆ ಆಗ್ತಿದ್ದು ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.


