ಬೆಂಗಳೂರು : ಹೆಚ್ಡಿ ರೇವಣ್ಣ ವಿರುದ್ಧದ ಅಶ್ಲೀಲ ವಿಡಿಯೋ, ಲೈಂಗಿಕ ದೌರ್ಜನ್ಯ ಹಾಗೂ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಂಗ ಬಂಧನಕ್ಕೆ ವಿಧಿಸಿ ಕೋರ್ಟ್ ಆದೇಶಿಸಿ ಏಳು ದಿನ ಅಂದರೆ ಮೇ 14ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಲಾಗಿದೆ..
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್ಡ್ರೈವ್ ಪ್ರಕರಣದಲ್ಲಿ ಹಾಗೂ ಸಂತ್ರಸ್ತೆಯನ್ನು ಅಪಹರಣ ಮಾಡಿದ ಆರೋಪ ಹೊತ್ತಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆ ಬುಧವಾರ ನಡೆದಿದ್ದು, ಏಳು ದಿನ ಅಂದರೆ ಮೇ 14ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಲಾಗಿದೆ. ಹೀಗಾಗಿ ಪರಪ್ಪನ ಅಗ್ರಹಾರಕ್ಕೆ ರೇವಣ್ಣ ಶಿಫ್ಟ್ ಆಗಲಿದ್ದಾರೆ. ಅಮಾವಾಸ್ಯೆ ದಿನವೇ ರೇವಣ್ಣ ಅವರಿಗೆ ಜೈಲುವಾಸ ಆದಂತೆ ಆಗಿದೆ.ಮೂರ್ನಾಲ್ಕು ದಿನ ವಿಶೇಷ ತನಿಖಾ ತಂಡದ (ಎಸ್ಐಟಿ) ಪೊಲೀಸರ ವಶದಲ್ಲಿದ್ದ ರೇವಣ್ಣ ಅವರನ್ನು ಇನ್ನುಮುಂದೆ ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಲಾಗುತ್ತದೆ.
ನ್ಯಾ. ರವೀಂದ್ರಕುಮಾರ್ ಬಿ ಕಟ್ಟಿಮನಿಯವರ ಪೀಠದಲ್ಲಿ ರೇವಣ್ಣ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲು SIT ಮನವಿ ಮಾಡಿತು. ಆರೋಪಿಯು ತನಿಖೆಗೆ ಸಹಕರಿಸಿಲ್ಲ ಎಂದು ಉಲ್ಲೇಖ ಮಾಡಲಾಗಿದೆ. ಎಸ್ಐಟಿ ಮನವಿಗೆ ರೇವಣ್ಣ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಇದು ಆರ್ಟಿಕಲ್ 21ರ ಉಲ್ಲಂಘನೆಯಾಗುತ್ತದೆ. ಆರೋಪಿಗೆ ತನ್ನ ವಿರುದ್ಧದ ಆರೋಪಗಳ ತಿರಸ್ಕರಿಸುವ ಹಕ್ಕಿದೆ. ತನಿಖಾಧಿಕಾರಿಯ ಉದ್ದೇಶ ಆರೋಪಿಯ ಹೇಳಿಕೆ ದಾಖಲಿಸಿಕೊಳ್ಳುವುದು. ಆದರೆ ಅವರು ಒಪ್ಪಿಕೊಂಡಿಲ್ಲ ಅಂದ್ರೆ ಹೇಗೆ ತಪ್ಪಾಗುತ್ತದೆ ಎಂದು ಮೂರ್ತಿ ಡಿ ನಾಯ್ಕ್ ವಾದ ಮಂಡಿಸಿದರು.
ಎಸ್ಐಟಿ ಯಾವ ಆರೋಪ ಮಾಡಿದಿಯೋ ಅದೆಲ್ಲಾ ಬೆಲೆಬಲ್ ಅಫೆನ್ಸ್ ಆಗಿದೆ. 364A ಹಾಕಿರುವುದು ಸಹ ಇದರಲ್ಲಿ ಅಪ್ಲೈ ಆಗಲ್ಲ. ಮೂರು ದಿನ ಸತತ ಹೇಳಿಕೆ ದಾಖಲಿಸಿದ್ದಾರೆ. ಪುನಃ ಕಸ್ಟಡಿಗೆ ಪಡೆಯುವ ಅವಶ್ಯಕತೆ ಇಲ್ಲ. ಇದಕ್ಕೂ ಹೆಚ್ಚು ಒತ್ತಡ ಹಾಕುವುದು ಟಾರ್ಚರ್ ಆಗಲಿದೆ ಎಂದು ರೇವಣ್ಣ ಪರ ವಕೀಲರು ವಾದಿಸಿದ್ದಾರೆ.
ಆರೋಪಿ ಹೊರ ಬಂದ್ರೆ ಸಾಕ್ಷಿ ನಾಶ ಸಾಧ್ಯತೆ ಇರುತ್ತೆ ಅನ್ನೋ ಅಂಶವನ್ನು ಎಸ್ಐಟಿ ಉಲ್ಲೇಖ ಮಾಡಿದೆ. ಎಸ್ಐಟಿ SPP ಜಗದೀಶ್ ಅವರು ರೇವಣ್ಣ IO ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡಿಲ್ಲ. ಬರೀ ನಕರಾತ್ಮಕವಾದ ಉತ್ತರ ನೀಡ್ತಿದ್ದಾರೆ. ಪ್ರಕರಣದಲ್ಲಿ ಇನ್ನೊಬ್ಬ ಆರೋಪಿ ಪಿಸಿ ಇದ್ದಾರೆ. ಪ್ರಕರಣದ ತನಿಖೆ ಇನ್ನೂ ಮುಂದುವರೆದಿದೆ ಎಂದಿದ್ದಾರೆ.


