ಬೆಂಗಳೂರು : ರಾಜ್ಯವನ್ನೇ ಬೆಚ್ಚಿಬಿಸಿದಂತಹ ಪ್ರಕರಣದ 2ನೇ ಆರೋಪಿ ಲೇಡಿ ವಾರ್ಡನ್ ರಶ್ಮಿಗೆ ಹೈಕೋರ್ಟ್‌ನ ನ್ಯಾ.ಮೊಹಮ್ಮದ್ ನವಾಜ್‌ರಿದ್ದ ಪೀಠ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಶ್ರೀಗಳ ಲೈಂಗಿಕ ದೌರ್ಜನ್ಯಕ್ಕೆ ವಾರ್ಡನ್ ರಶ್ಮಿ ಸಹಕಾರ ನೀಡಿದ್ದು ಇವಳು ಮಧ್ಯವರ್ತಿಯಾಗಿ ಕೆಲಸ ಮಾಡುತಿದ್ದಳು ಎಂದು ತಿಳಿದುಬಂದಿತ್ತು.
ಚಾರ್ಜ್ಶೀಟ್ನಲ್ಲಿ ಎರಡನೇ ಆರೋಪಿ ಆಗಿರುವ ಲೇಡಿ ವಾರ್ಡನ್ ವಿರುದ್ಧ, ಬೆಚ್ಚಿ ಬೀಳಿಸುವ ಆರೋಪಗಳು ಮಾಡಲಾಗಿತ್ತು. ಈ ಪೈಕಿ, ಮುರುಘಾ ಶ್ರೀಗಳ ಬಳಿ ಬಾಲಕಿಯರನ್ನ ಕರೆದೊಯ್ಯುವ ಕೆಲಸವನ್ನ ಇದೇ ವಾರ್ಡನ್ ಮಾಡುತ್ತಿದ್ದಳು ಹಾಗೂ ಬಾಲಕಿಯರಿಗೆ ಲೈಂಗಿಕತೆಯ ಆಶಕ್ತಿ ಉಂಟಾಗುವಂತೆ ಮಾಡುತಿದ್ದಳು ಎಂದು ಆರೋಪಿಸಲಾಗಿತ್ತು.
ಯಾರನ್ನ ಕಳಿಸಬೇಕು, ಯಾವಾಗ ಕಳಿಸಬೇಕು, ಹೇಗೆ ಕಳಿಸಬೇಕು ಅನ್ನುವ ಎಲ್ಲ ವಿಚಾರವನ್ನೂ ಈಕೆಯೇ ನೋಡಿಕೊಳ್ಳುತ್ತಿದ್ದಳು. ಇದಕ್ಕೆ ತಿರುಗಿ ಬೀಳುವ ಬಾಲಕಿಯರ ಮೇಲೆ, ಇಲ್ಲದ ನೆಪವೊಡ್ಡಿ ಶಿಕ್ಷೆಯನ್ನೂ ನೀಡುತ್ತಿದ್ದಳು ಅನ್ನುವ ಸಂಗತಿಯನ್ನ ಬಾಲಕಿಯರು ಹೇಳಿದ್ದರು.


