ಬೆಂಗಳೂರು : ರಾಜ್ಯ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ ಸಂಘರ್ಷ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಇದೀಗ ಹೈಕಮಾಂಡ್ ಮತ್ತೊಂದು ಹೊಸ ತಲೆನೋವು ಶುರುವಾಗಿದೆ. ಇದೇ ಮೊದಲ ಬಾರಿಗೆ ಶಾಸನಸಭೆಗೆ ಆಯ್ಕೆಯಾಗಿರುವ ಕಾಂಗ್ರೆಸ್ನ 21 ಶಾಸಕರು ಹೈಕಮಾಂಡ್ಗೆ ಪತ್ರ ಬರೆದಿದ್ದು, ಮೊದಲ ಬಾರಿ ಗೆದ್ದ ಕನಿಷ್ಠ ಐವರು ಶಾಸಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವಂತೆ ಆಗ್ರಹಿಸಿದ್ದಾರೆ.
ಸಿಎಂ ಕುರ್ಚಿ ವಿಷಯದ ಇತ್ಯರ್ಥಕ್ಕೆ ಅಂತಿಮ ತೀರ್ಮಾನಕ್ಕೆ ಬಾರದ ವರಿಷ್ಠರಿಗೆ ಇದೀಗ ಶಾಸಕರು ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿರುವುದು ಮತ್ತಷ್ಟು ತಲೆಬಿಸಿ ಹೆಚ್ಚಿಸಿದೆ. ಸಿಎಂ ಹಾಗೂ ಡಿಸಿಎಂ ಇಬ್ಬರ ಬೆಂಬಲಿತ ಶಾಸಕರೂ ಈ ಪಟ್ಟಿ ಯಲ್ಲಿರುವುದು ವಿಶೇಷವಾಗಿದೆ.
ವರಿಷ್ಠರಿಗೂ ತಲುಪಿದ ಪತ್ರ : ಕಾಂಗ್ರೆಸ್ ಪಕ್ಷದಿAದ ೨೦೨೩ರ ವಿಧಾನಸಭೆ ಚುನಾವಣೆ ಯಲ್ಲಿ ಮೊದಲ ಬಾರಿಗೆ ಆಯ್ಕೆಯಾಗಿರುವ ೩೮ ಶಾಸಕರ ಪೈಕಿ ೩೧ ಶಾಸಕರು ಸಂಪುಟ ವಿಸ್ತರಣೆಗೆ ಒತ್ತಾಯಿಸಿದ್ದಾರೆ.
ಈ ಬಾರಿ ಮಂತ್ರಿಸ್ಥಾನ ಕೇಳಿದವರು ಇಕ್ಬಾಲ್ ಹುಸೇನ್, ರವಿಕುಮಾರ್ ಗಣಿಗ, ಪ್ರದೀಪ್ ಈಶ್ವರ್, ವಿಕಾಸ್ವೈದ್ಯ, ನಾರಾ ಭರತ್ ರೆಡ್ಡಿ , ಕೆ. ಉದಯ್ ಕುಮಾರ್,ಎನ್. ಶ್ರೀನಿವಾಸ್, ಬಿ.ಬಿ. ಚಿಮ್ಮನಕಟ್ಟಿ, ಬಿ. ದೇವೇಂದ್ರಪ್ಪ, ಡಾ.ಮAಥರ್ಗೌಡ, ಅಶೋಕ್ ಮನಗೂಳಿ, ಕೆ.ಬಸವಂತಪ್ಪ. ಶಿವಗAಗಾ ಬಸವರಾಜ್, ಹೆಚ್.ವಿ. ವೆಂಕಟೇಶ್, ಎ.ಎಸ್. ಪೊನ್ನಣ್ಣ, ಅಶೋಕ್ ಕುಮಾರ್ ರೈ, ಡಿ. ರವಿಶಂಕರ್, ನಯನಾ ಮೋಟಮ್ಮ, ಮಹೇಂದ್ರ ತಮ್ಮಣ್ಣನವರ್, ಎ.ಸಿ ಶ್ರೀನಿವಾಸ್, ಬಾಬಾ ಸಾಹೇಬ್ ಪಾಟೀಲ್, ದರ್ಶನ್ ದ್ರುವನಾರಾಯಣ, ರಾಜಾ ವೇಣುಗೋಪಾಲ್ ನಾಯಕ್, ಕೆ. ಪ್ರಕಾಶ್ ಕೋಳಿವಾಡ, ಆನಂದ್ ಕೆ.ಎಸ್., ಟಿ. ಚೆನ್ನಾರೆಡ್ಡಿ ಪಾಟೀಲ್.
ಈ ಬಾರಿ ಹೊಸ ಮುಖಗಳಿಗೆ ಸ್ಥಾನ ಸಿಗಬೇಕಾಗಿದೆ ಪಕ್ಷದ ಸಂಘಟನೆ ಮತ್ತು ಭವಿಷ್ಯದ ನಾಯಕತ್ವ ರೂಪಿಸುವ ನಿಟ್ಟಿನಲ್ಲಿ ಯುವ ಹಾಗೂ ಹೊಸ ಮುಖಗಳಿಗೆ ಸಚಿವ ಸ್ಥಾನ ಸಿಗಬೇಕಿದೆ. ನಮ್ಮಲ್ಲಿ ಯಾರಿಗೆ ಸಿಕ್ಕಿದರೂ ಅಭ್ಯಂತರ ವಿಲ್ಲ. ಕನಿಷ್ಠ ಐದು ಮಂದಿ ಹೊಸಬರು ಪುನಾರಚನೆ ವೇಳೆ ಮಂತ್ರಿಗಳಾಗಬೇಕು ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ,ಹೇಳಿದ್ದಾರೆ.


