Friday, March 13, 2026
Flats for sale
Homeರಾಜ್ಯಬೆಂಗಳೂರು : ಕಳೆದ 7 ತಿಂಗಳಿಂದ ಆಂಬ್ಯುಲೆನ್ಸ್ ಚಾಲಕ, ವೈದ್ಯಕೀಯ ತಂತ್ರಜ್ಞರಿಗೆ ವೇತನವಿಲ್ಲ,ಬಿಎಂಟಿಸಿ ಸಿಬ್ಬಂದಿಯಾ ಯೂನಿಫಾರಂಗೂ...

ಬೆಂಗಳೂರು : ಕಳೆದ 7 ತಿಂಗಳಿಂದ ಆಂಬ್ಯುಲೆನ್ಸ್ ಚಾಲಕ, ವೈದ್ಯಕೀಯ ತಂತ್ರಜ್ಞರಿಗೆ ವೇತನವಿಲ್ಲ,ಬಿಎಂಟಿಸಿ ಸಿಬ್ಬಂದಿಯಾ ಯೂನಿಫಾರಂಗೂ ದುಡ್ಡಿಲ್ಲ…!

ಬೆಂಗಳೂರು: 108 ಆರೋಗ್ಯ ಕವಚ ಆಂಬ್ಯುಲೆನ್ಸ್ ಸೇವೆಗಾಗಿ ಕಾರ್ಯನಿರ್ವಹಿಸುತ್ತಿರುವ ಆಂಬ್ಯುಲೆನ್ಸ್ ಪೈಲಟ್‌ಗಳು ಮತ್ತು ತುರ್ತು ವೈದ್ಯಕೀಯ ತಂತ್ರಜ್ಞರು (ಇಎಂಟಿ) ಡಿಸೆಂಬರ್‌ನಿಂದ ಪೂರ್ಣ ವೇತನವನ್ನು ಪಡೆದಿಲ್ಲ ಮೂರು ಯೂನಿಯನ್‌ಗಳ ಸುಮಾರು 3,500 ಉದ್ಯೋಗಿಗಳ ಪರವಾಗಿ ಕರ್ನಾಟಕ ಹೈಕೋರ್ಟ್‌ಗೆ ರಿಟ್ ಅರ್ಜಿಯನ್ನು ಸಲ್ಲಿಸಲಾಗಿದೆ. ಇವರೆಲ್ಲ ಇಎಂಆರ್​ಐ ಗ್ರೀನ್ ಹೆಲ್ತ್ ಸರ್ವಿಸಸ್‌ (ಹಿಂದೆ ಜಿವಿಕೆ ಇಎಂಆರ್​ಐ) ಜತೆ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿಮಾಡಿದೆ.

ಒಕ್ಕೂಟಗಳು ಮೇ 6 ರಿಂದ ಮುಷ್ಕರ ನಡೆಸಲು ಯೋಜಿಸಿದ್ದವು, ಆದರೆ ರಾಜ್ಯ ಆರೋಗ್ಯ ಇಲಾಖೆಯೊಂದಿಗೆ ಚರ್ಚಿಸಿದ ನಂತರ ಅದನ್ನು ಮುಂದೂಡಲಾಯಿತು. ಆದಾಗ್ಯೂ, ಸುಮಾರು ಮೂರು ತಿಂಗಳ ನಂತರ, ಪಾವತಿ ಸಮಸ್ಯೆಯು ಬಗೆಹರಿಯದೆ ಉಳಿದಿದೆ. ಫೆಬ್ರವರಿಯಿಂದ ಯಾವುದೇ ಪಾವತಿಗಳಿಲ್ಲದೆ, ಆಂಬ್ಯುಲೆನ್ಸ್ ಚಾಲಕರು ಮತ್ತು ವೈದ್ಯಕೀಯ ತಂತ್ರಜ್ಞರುಗಳು ತಮ್ಮ ಡಿಸೆಂಬರ್ ಮತ್ತು ಜನವರಿ ತಿಂಗಳ ಸಂಬಳದ 50% ಅನ್ನು ಮೇ ತಿಂಗಳಲ್ಲಿ ಸ್ವೀಕರಿಸಿದ್ದಾರೆ ಎಂದು ಅರ್ಜಿಯು ತಿಳಿಸಿದ್ದಾರೆ. ಅಂದಿನಿಂದ ಕೆಲವು ಸಿಬ್ಬಂದಿ 5,000 ಮತ್ತು 10,000 ರೂ.ಪಾವತಿಸಲಾಗಿದೆ ಎಂದು ಚಾಲಕರು ಮಾಹಿತಿ ನೀಡಿದ್ದಾರೆ.

ಸುವರ್ಣ ಕರ್ನಾಟಕ ಆರೋಗ್ಯ ಕವಚ ನೌಕರರ ಸಂಘದ ಅಧ್ಯಕ್ಷ ಆರ್.ಶ್ರೀಧರ್ ಬೇಸರ ವ್ಯಕ್ತಪಡಿಸಿದ್ದು “12 ಗಂಟೆಗಳ ಪಾಳಿಯಲ್ಲಿ ನಾವು ಕೆಲಸ ಮಾಡುವ ಕಾರ್ಮಿಕ ಕಾನೂನಿನ ಪ್ರಕಾರ ಕನಿಷ್ಠ 30,000 ರೂ. ಡಿಸೆಂಬರ್‌ನಿಂದ ನಾವು ಇನ್ನೂ ಬಾಕಿ ಮೊತ್ತವನ್ನು ಸ್ವೀಕರಿಸಿಲ್ಲ. ನಾವು ನಮ್ಮ ಕುಟುಂಬಗಳನ್ನು ಹೇಗೆ ನಡೆಸಬೇಕು ಎಂದು ಆಕ್ರೋಶಹೊರಹಾಕಿದ್ದಾರೆ . ”

ಹೆಸರು ಬಹಿರಂಗಪಡಿಸಲು ಕೋರಿದ ದಾವಣಗೆರೆಯಚಾಲಕ ಮಾತನಾಡಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೂ ಉತ್ತರವಿಲ್ಲ. “ನಾವು ಪದೇ ಪದೇ ಸಹಾಯಕ್ಕಾಗಿ ಕೇಳಿದ್ದೇವೆ, ಆದರೆ ನಾವು ಕೇಳುತ್ತಿರುವುದು ಹೊಸ ಟೆಂಡರ್‌ಗಳನ್ನು ಕರೆಯಲಾಗುವುದು. ಅದು ನಮ್ಮ ತಕ್ಷಣದ ಪಾವತಿ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ, ಕರ್ನಾಟಕದಲ್ಲಿ ಇಎಂಆರ್‌ಐ ನಿರ್ವಹಿಸುತ್ತಿರುವ 715 ಆಂಬ್ಯುಲೆನ್ಸ್‌ಗಳಲ್ಲಿ ಕನಿಷ್ಠ 100 ತಕ್ಷಣದ ಸಹಾಯಕ್ಕಾಗಿ ಸ್ಮಾರ್ಟ್‌ಫೋನ್‌ಗಳ ಕೊರತೆಯಿದೆ, ಇದು ವಿಳಂಬಕ್ಕೆ ಕಾರಣವಾಗುತ್ತದೆ ಎಂದು ಅವರುhelidaru. ಹೆಚ್ಚುವರಿಯಾಗಿ, ತುರ್ತು ನಿಧಿ ಇಲ್ಲದಿರುವುದರಿಂದ ಯಾಂತ್ರಿಕ ಸಮಸ್ಯೆಗಳಿಗೆ ಅವರ ಜೇಬಿನಿಂದ ಪಾವತಿಸಬೇಕು. ”ಎಂದು ಅವರು ಬೇಸರವ್ಯಕ್ತಪಡಿಸಿದರು.

ಗುತ್ತಿದೆದಾರರ ರೊಬ್ಬರು ಮಾತನಾಡಿ “ನಾವು ಹೈಕೋರ್ಟ್ ಆದೇಶದ ಪ್ರಕಾರ ಪಾವತಿಸಿದ್ದೇವೆ. ಮುಂದಿನ ವಿಚಾರಣೆ ಆಗಸ್ಟ್ 9 ರಂದು ನಡೆಯಲಿದೆ. ನಾವು ನ್ಯಾಯಾಲಯದ ತೀರ್ಪನ್ನು ಅನುಸರಿಸುತ್ತೇವೆ ಮತ್ತು ಆರೋಪಗಳ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ” ಎಂದು ಹೇಳಿದರು.

“ಏಜೆನ್ಸಿ ಲೆಕ್ಕಾಚಾರದ ದೋಷಗಳನ್ನು ಮಾಡಿದೆ, ಕೆಲವು ಉದ್ಯೋಗಿಗಳಿಗೆ ಅಗತ್ಯಕ್ಕಿಂತ ಹೆಚ್ಚು ಪಾವತಿಸಿದೆ. ಅವರು ಈಗ ಸಂಬಳವನ್ನು ಸರಿಹೊಂದಿಸುತ್ತಿದ್ದಾರೆ, ಇದು ವ್ಯತ್ಯಾಸಗಳನ್ನು ವಿವರಿಸಬಹುದು. ಈ ಸೇವೆಗೆ ಸೂಕ್ತವಾದ ಏಜೆನ್ಸಿಗಳನ್ನು ಹುಡುಕಲು ನಾವು ಮುಂದಿನ ಎರಡು ತಿಂಗಳೊಳಗೆ ಹೊಸ ಟೆಂಡರ್‌ಗಳನ್ನು ಕರೆಯುತ್ತೇವೆ ಇಲಾಖೆಯಿಂದ ಯಾವುದೇ ಬಾಕಿ ಉಳಿದಿಲ್ಲ ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.

ಒಟ್ಟಿನಲ್ಲಿ ಸರಕಾರ ಹಾಗೂ ಗುತ್ತಿಗೆದಾರ ಗುದ್ದಾಟದಲ್ಲಿ ಈ ಕೆಲಸವನ್ನು ನಂಬಿ ಬದುಕುವ ಚಾಲಕರ ಕುಟುಂಬದವರು ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿ ಕೊಳ್ಳುವಂತಾಗಿದೆ ಅವರ ಜೀವನ.

RELATED ARTICLES

LEAVE A REPLY

Please enter your comment!
Please enter your name here

Most Popular