Friday, November 22, 2024
Flats for sale
Homeರಾಜ್ಯಬೆಂಗಳೂರು ; ಒಂದೇ ಕುಟುಂಬದ ನಾಲ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ..!

ಬೆಂಗಳೂರು ; ಒಂದೇ ಕುಟುಂಬದ ನಾಲ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ..!

ಬೆಂಗಳೂರು ; ಒಂದೇ ಕುಟುಂಬದ ನಾಲ್ವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಯಲಹಂಕ ‌ತಾಲೂಕಿನ ಸಿಂಗನಾಯಕನಹಳ್ಳಿಯ ಯಡಿಯೂರಪ್ಪ ನಗರದಲ್ಲಿ ನಡೆದಿದೆ.

ದಂಪತಿಗಳ ಜೊತೆ ಮುದ್ದಾದ ಇಬ್ಬರು ಮಕ್ಕಳು ಕೂಡ ಆತ್ಮಹತ್ಯೆಗೆ ಶರಣಾಗಿದ್ದು ದೃಶ್ಯ ಮನುಕುಲಕುವಂತಿದೆ. ಕಳೆದ ರಾತ್ರಿ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದ್ದು ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಮೃತರನ್ನು ಪತಿ ಅವಿನಾಶ್ (38) ವರ್ಷ, ಪತ್ನಿ ಮಮತಾ (30) ವರ್ಷ ಮತ್ತು ಅಧಿರಾ (05) ಮಗಳು, ಅಣ್ಣಯ್ಯ (03) ಎಂದು ತಿಳಿದುಬಂದಿದೆ.

5 ವರ್ಷದಿಂದ ಬಾಡಿಗೆ ಮನೆಯಲ್ಲಿದ್ದ ಕುಟುಂಬ ಹಣಕಾಸಿನ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದರೆಂದು ಮಾಹಿತಿ ದೊರೆತಿದೆ .ಮೊದಲಿಗೆ ಇಬ್ಬರು ಹೆಣ್ಣು ಮಕ್ಕಳಿಗೆ ವಿಷ ಕುಡಿಸಿ ಸಾಯಿಸಿ ಆ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದಿದೆ. ಅವಿನಾಶ್ ಗುಲ್ಬರ್ಗ ಮೂಲದವನಾಗಿದ್ದು, ಕ್ಯಾಬ್​ ಚಾಲಕನಾಗಿ ಕೆಲಸಮಾಡುತ್ತಿದ್ದರು . ನರಸಪ್ಪ ಎಂಬುವವರ ಬಾಡಿಗೆ ಮನೆಯಲ್ಲಿ ಕುಟುಂಬ ಸಮೇತ ವಾಸವಿದ್ದನು. ಅವಿನಾಶ್​ ಸಹೋದರ ಉದಯ್ ಎಂಬಾತ ದೂರು ನೀಡಿದ ಹಿನ್ನೆಲೆ ಪರಿಶೀಲಿಸಿದಾಗ ನಾಲ್ವರು ನೇಣಿಗೆ ಶರಣಾದ ಪ್ರಕರಣ ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಭೇಟಿ- ಎಸ್ಪಿ ಸಿ ಕೆ ಭೇಟಿನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular