Friday, March 13, 2026
Flats for sale
Homeರಾಜ್ಯಬೆಂಗಳೂರು : ಎರಡನೇ ತಿಂಗಳಲ್ಲೇ ಸ್ಥಗಿತವಾಯಿತೇ ಗೃಹಲಕ್ಷ್ಮಿ ಯೋಜನೆ ?

ಬೆಂಗಳೂರು : ಎರಡನೇ ತಿಂಗಳಲ್ಲೇ ಸ್ಥಗಿತವಾಯಿತೇ ಗೃಹಲಕ್ಷ್ಮಿ ಯೋಜನೆ ?

ಬೆಂಗಳೂರು : ರಾಜ್ಯದ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಮಹಾತ್ವಾಕಾಂಕ್ಷೆಯ ಗೃಹಲಕ್ಷಿ ಯೋಜನೆ ತಾತ್ಕಾಲಿಕವೇ? ಇಂತಹದ್ದೊAದು ಆಲೋಚನೆ ಬಹುತೇಕ ಅರ್ಜಿದಾರದ್ದು. ಕಾರಣ ಮೊದಲ ತಿಂಗಳು ಬಂದಿದ್ದ ೨೦೦೦ ರೂಪಾಯಿ ಎರಡನೇ ತಿಂಗಳೇ ಸ್ಥಗಿತವಾಗಿದೆ. ಸಹಜವಾಗಿಯೇ ಇದು ಲಕ್ಷಾಂತರ ಅರ್ಹ ಗೃಹಿಣಿಯರಲ್ಲಿ ಭ್ರಮನಿರಸನ ಮೂಡಿಸಿದೆ.

ಸಾಂಸ್ಕೃತಿಕನಗರಿ ಮೈಸೂರಿನಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತ್ತು. ಇದಕ್ಕೂ ಮುನ್ನವೇ ಮೂರು ಬಾರಿ ಲಾಂಚ್ ದಿನಾಂಕ ಪರಿಷ್ಕರಣೆಯಾಗಿತ್ತು. ಇದಕ್ಕೆ ನೀಡಿದ್ದ ಕಾರಣ ಇಲಾಖೆಯಿಂದಲೇ ಪ್ರತ್ಯೇಕ ಆ್ಯಪ್ ತಯಾರಿ ಸೇರಿದಂತೆ ಹಣ ವರ್ಗಾವಣೆಗೆ ಇದ್ದ ತಾಂತ್ರಿಕ ಅಡಚಣೆಗಳನ್ನು ನಿವಾರಿಸುವುದೇ ಆಗಿತ್ತು. ವಿಶೇಷವೆಂದರೆ ಅನರ್ಹ ಅರ್ಜಿಗಳನ್ನು ಆ್ಯಪ್ಸ್ವ ಯಂ ಆಗಿ ತಿರಸ್ಕರಿಸುವ ವ್ಯವಸ್ಥೆ ಅಳವಡಿಸಲಾಗಿದೆ ಎನ್ನುವುದಾಗಿತ್ತು.

ಆದರೆ ವಾಸ್ತವವಾಗಿ ಗೃಹಲಕ್ಷಿಯರ ಖುಷಿ ತಾತ್ಕಾಲಿಕ ಎನ್ನುವ ಸ್ಥಿತಿಯನ್ನು ವ್ಯವಸ್ಥೆಯೇ ಸೃಷ್ಟಿಸಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕೃತ ಅಂಕಿಸAಖ್ಯೆಯAತೆ ಕುಟುAಬದ ಯಜಮಾನಿಗೆ ಸೇರಬೇಕಾಗಿದ್ದ ಮಾಸಿಕ ೨ ಸಾವಿರ ರೂಪಾಯಿ ಹಣ ಇದುವರೆಗೆ ೯,೪೪,೧೫೫ ಅರ್ಜಿದಾರರಿಗೆ ಇನ್ನೂ ಹೋಗಿಲ್ಲ. ಇದಕ್ಕೆ ಹಲವು ತಾಂತ್ರಿಕ ಅಡಚಣೆಗಳ ಬಗ್ಗೆ ಸ್ವರ್ತ ಸಚಿವೆ ಲಕ್ಷಿಹೆಬ್ಬಾಳ್ಕರ್ ಅವರೇ ಮಾಹಿತಿ ನೀಡಿದ್ದಾರೆ. ಆದರೆ ಇದಕ್ಕೆ ಸರ್ಕಾರವೇ ಹೊಣೆ ಎನ್ನುವುದು ನಿಸ್ಸಂಶಯ.

ಅಧಿಕೃತ ಮಾಹಿತಿಯಂತೆ ಮೃತಪಟ್ಟಿದ್ದರೂ ಫಲಾನುಭವಿಗಳ ಪಟ್ಟಿ ಸೇರಿದ್ದ ೩೦೮೨ ಅರ್ಜಿದಾರರನ್ನು ಅನರ್ಹಗೊಳಿಸಲಾಗಿದೆ. ೧,೫೯,೩೫೬ ಅರ್ಜಿದಾರರ ಡೆಮೋ(ದಾಖಲಾತಿಗಳ ವಾಸ್ತವಿಕ ಪರಿಶೀಲನೆ) ದೃಢೀಕರಣ ವಿಫಲವಾಗಿದೆ. ಸುಮಾರು ೫,೯೬,೨೬೮ ಫಲಾನುಭವಿಗಳ ಖಾತೆಯೊಂದಿಗೆ ಆಧಾರ್ ಜೋಡಣೆಯಾಗಿಲ್ಲ.

ಬಳಿಕ ಇಲಾಖೆಯೇ ೨,೧೭,೫೩೬ ಫಲಾನುಭವಿಗಳ ಬ್ಯಾಂಕ್ ಖಾತೆಯನ್ನು ಆಧಾರ್‌ನೊಂದಿಗೆ ಜೋಡಿಸಿದೆ. ಇನ್ನೂ ವಿಶೇಷವೆಂದರೆ ೧,೭೫,೬೮೩ ಫಲಾನುಭವಿಗಳ ಹೆಸರು ಮತ್ತು ವಿಳಾಸ ವ್ಯತ್ಯಾಸವಾಗಿದೆ. ಆದರೆ ಅನುಷ್ಠಾನಕ್ಕೆ ಮುನ್ನವೇ ಈ ವಾಸ್ತವಾಂಶಗಳ ಪರಿಶೀಲನೆ ಆಗಲಿಲ್ಲವೇ ಎನ್ನುವ ಸಹಜ ಪ್ರಶ್ನೆ ಉದ್ಭವಿಸುತ್ತದೆ.

೧.೮ ಕೋಟಿ ಅರ್ಹ ಫಲಾನುಭವಿಗಳಿಗೆ ೨೧೬೯ ಕೋಟಿ ರೂ. ಅನುದಾನವನ್ನು ಮೊದಲ ಕಂತಾಗಿ ಸರ್ಕಾರ ಬಿಡುಗಡೆಗೊಳಿಸಿತ್ತು. ಸೆಪ್ಟಂಬರ್ತಿ Aಗಳಲ್ಲಿ ೧.೧೪ ಲಕ್ಷ ಫಲಾನುಭವಿಗಳಿಗೆ ೨೨೮೦ ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ. ಅಕ್ಟೋಬರ್ ೪ರವರೆ ಗೆ ೯೩ ಲಕ್ಷ ಫಲಾನುಭವಿಗಳ ಬ್ಯಾಂಕ್ ಖಾತೆಗೆ ತಲಾ ೨ ಸಾವಿರ ರೂ. ವರ್ಗಾವಣೆಯಾಗಿದೆ. ೫.೫ ಲಕ್ಷ ಫಲಾನುಭವಿಗಳ ಮಾಹಿತಿ ಪರಿಶೀಲಿಸಿ ಡಿಬಿಟಿ ಮೂಲಕ ಹಣ ಪಾವತಿಸಲು ಇಲಾಖೆ ಕ್ರಮ ಕೈಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular