Friday, November 6, 2026
Homeರಾಜ್ಯಬೆಂಗಳೂರು : ಇಮಾಮ್, ಮೌಸಿನ್‌ಗಳಿಗೆ ಇನ್ಮುಂದೆ DBT ಮೂಲಕ ಗೌರವಧನ ಪಾವತಿ; ಸಚಿವ ಯು.ಟಿ. ಖಾದರ್...

ಬೆಂಗಳೂರು : ಇಮಾಮ್, ಮೌಸಿನ್‌ಗಳಿಗೆ ಇನ್ಮುಂದೆ DBT ಮೂಲಕ ಗೌರವಧನ ಪಾವತಿ; ಸಚಿವ ಯು.ಟಿ. ಖಾದರ್ ಘೋಷಣೆ!

ಬೆಂಗಳೂರು : ರಾಜ್ಯದ ಮಸೀದಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಇಮಾಮ್ ಮತ್ತು ಮೌಸಿನ್‌ಗಳಿಗೆ ಇನ್ಮುಂದೆ ನೇರ ನಗದು ವರ್ಗಾವಣೆ (DBT) ಮೂಲಕ ಮಾಸಿಕ ಗೌರವಧನ ಪಾವತಿಸಲು ಸರ್ಕಾರ ನಿರ್ಧರಿಸಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಒಟ್ಟು 15,936 ಇಮಾಮ್ ಮತ್ತು ಮೌಸಿನ್‌ಗಳು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಇಮಾಮ್‌ಗಳಿಗೆ ಮಾಸಿಕ ₹5,000 ಹಾಗೂ ಮೌಸಿನ್‌ಗಳಿಗೆ ₹6,000 ಗೌರವಧನ ನೀಡಲಾಗುತ್ತಿದೆ.

ಈ ಯೋಜನೆಗೆ ಪ್ರತಿ ತಿಂಗಳು ಸುಮಾರು ₹8.5 ಕೋಟಿ ವೆಚ್ಚವಾಗಲಿದೆ. ಗೌರವಧನ ಪಾವತಿಯಲ್ಲಿ ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ ಫಲಾನುಭವಿಗಳ ಕೆವೈಸಿ (KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಇದುವರೆಗೆ ಬಾಕಿ ಉಳಿದಿರುವ ಎರಡು ತಿಂಗಳ ಗೌರವಧನವನ್ನೂ ಈ ತಿಂಗಳಿನಿಂದಲೇ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ DBT ಮೂಲಕ ಜಮೆ ಮಾಡಲಾಗುವುದು.

ವಕ್ಫ್ ಮಂಡಳಿಯಲ್ಲಿ ನೋಂದಾಯಿತವಾಗಿದ್ದು, ವಾರ್ಷಿಕ ಆದಾಯ ₹1 ಲಕ್ಷಕ್ಕಿಂತ ಕಡಿಮೆ ಇರುವ ಮಸೀದಿಗಳಿಗೆ ಈ ಯೋಜನೆ ಅನ್ವಯವಾಗಲಿದೆ. ಗೌರವಧನ ಪಾವತಿಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಸರ್ಕಾರ ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular