Saturday, March 14, 2026
Flats for sale
Homeರಾಜ್ಯಬೆಂಗಳೂರು : ಇನ್ನು ಮುಂದೆ ರಾತ್ರಿ 10 ಗಂಟೆಯ ನಂತರ ರೈಲಿನಲ್ಲಿ ಮೊಬೈಲ್ ಸದ್ದು ಕೇಳಿದರೆ...

ಬೆಂಗಳೂರು : ಇನ್ನು ಮುಂದೆ ರಾತ್ರಿ 10 ಗಂಟೆಯ ನಂತರ ರೈಲಿನಲ್ಲಿ ಮೊಬೈಲ್ ಸದ್ದು ಕೇಳಿದರೆ ಕ್ರಮ.

ಬೆಂಗಳೂರು : ರೈಲಿನಲ್ಲಿ ರಾತ್ರಿ ಪ್ರಯಾಣ ಮಾಡುವವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ರೈಲ್ವೆ ಇಲಾಖೆ ಹಲವಾರು ಜನಸ್ನೇಹಿ ಕ್ರಮಗಳನ್ನು ಕೈಗೊಂಡಿದೆ. ರಾತ್ರಿ 10 ಗಂಟೆಯ ನಂತರ ಪ್ರಯಾಣಿಕರ ಮೊಬೈಲ್ ಕರ್ಕಶ ಸದ್ದು ಮಾಡಿದರೆ ರೈಲ್ವೆ ಪೊಲೀಸರು ಹಾಗೂ ಅಧಿಕಾರಿಗಳು ಕ್ರಮ ಜರುಗಿಸಲಿದ್ದಾರೆ. ರಾತ್ರಿ ವೇಳೆ ರೈಲಿನಲ್ಲಿ ಪ್ರಯಾಣ ಮಾಡುವ ಸಂದರ್ಭದಲ್ಲಿ ಮೊಬೈಲ್ ರಿಂಗಣಿಸಿದಾಗ ಅದು ಶಬ್ದ ಹೆಚ್ಚಾಗಿದ್ದಲ್ಲಿ ಅಥವಾ ಪ್ರಯಾಣಿಕರು ಜೋರಾದ ದನಿಯಲ್ಲಿ ಮಾತನಾಡುತ್ತಿದ್ದರೆ, ಅನಗತ್ಯವಾಗಿ ದೀಪಗಳನ್ನು ಹೊತ್ತಿಸಿದರೆ
ಅಂತಹವರ ವಿರುದ್ಧ ರೈಲ್ವೆ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ.

ಸುರಕ್ಷಿತ ಹಾಗೂ ನೆಮ್ಮದಿಯ ಪ್ರಯಾಣಕ್ಕೆ ನೈರುತ್ಯ ರೈಲ್ವೆ ವಲಯ ಬೆಂಗಳೂರು ವಿಭಾಗವು ಹಲವು ಕ್ರಮ ಕೈಗೊಂಡಿದೆ. ಸುರಕ್ಷತೆಯ ಪ್ರಯಾಣಕ್ಕೆ ಭಂಗ ಉಂಟು ಮಾಡುವವರನ್ನು ಪತ್ತೆ ಮಾಡಲೆಂದೇ ರೈಲ್ವೆ ಅಧಿಕಾರಿಗಳು ರೈಲ್ವೆ ಪ್ರಯಾಣದುದ್ದಕ್ಕೂ ರಿಸರ್ವೇಶನ್ ಬೋಗಿಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ರೈಲ್ವೆ ಮದದ್ ಎಂಬ ಸೇವೆಯ ಮೂಲಕ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗ್ತಿದೆ. ಸುರಕ್ಷತೆಗೆ ಹಾಗೂ ಆರಾಮದಾಯಕ ಪ್ರಯಾಣಕ್ಕೆ ಹೆಚ್ಚಿನವರು ರೈಲು ಪ್ರಯಾಣ ಆಯ್ಕೆ ಮಾಡಿಕೊಳ್ತಾರೆ. ಇದೀಗಾ ನೈರುತ್ಯ ರೈಲ್ವೆ ವಲಯ ಬೆಂಗಳೂರು ವಿಭಾಗದ ಅಧಿಕಾರಿಗಳು ಮತ್ತಷ್ಟು ಜನಸ್ನೇಹಿಯಾಗಿದ್ದಾರೆ.

ಭಾರತೀಯ ರೈಲ್ವೆ ಇಲಾಖೆಯ “ರೈಲು ಮದದ್’’ ಸೇವೆಯ ಮೂಲಕ ಪ್ರಯಾಣಿಕ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಿದ್ದಾರೆ. ರಿಸರ್ವೆಶನ್ಕೋ ಚ್‌ನಲ್ಲಿ ಪ್ರಯಾಣ ಮಾಡುವ ರೋಗಿಗಳ ಮೇಲೆ, ರೈಲ್ವೆ ಅಧಿಕಾರಿಗಳು ನಿಗಾವಹಿಸಿ, ರೋಗಿಗಳಿಗೆ ಔಷಧಿ, ಪ್ರಾಥಮಿಕ ಚಿಕಿತ್ಸೆ ಹಾಗೂ ವಿಕಲಚೇತನರಿಗೆ ವ್ಹೀಲ್‌ಚೇರ್ ಸೇರಿದಂತೆ ಇತರೆ ಆರೋಗ್ಯ ಸೇವೆಯನ್ನ ನೀಡ್ತಿದ್ದಾರೆ. ರೋಗಿಗಳಿಗೆ ಆರೋಗ್ಯ ಸೇವೆಯನ್ನು ನೀಡಿ, ಅವರು ಇಳಿಯುವ ನಿಲ್ದಾಣದ ವರೆಗೂ ಫಾಲೋಆಪ್‌ನಲ್ಲಿರುತ್ತಾರೆ.

ಹೀಗೆ ರಿಸರ್ವೆಶನ್ ಕೋಚ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸುರಕ್ಷತೆ, ಭದ್ರತೆಗಾಗಿ ಪ್ರತಿ ಬೋಗಿಗಳಲ್ಲಿ ಆರ್‌ಪಿಎಫ್ ತಂಡ, ಟಿಟಿಗಳು, ಸೂಪರಿಡೆಂಟ್‌ಗಳು ಗಸ್ತು ತಿರುಗುತ್ತಿರುತ್ತಾರೆ. ಪ್ರಯಾಣಿಕರು ತಾವು ಪ್ರಯಾಣಿಸುವ ರೈಲಿನಲ್ಲಿ ಯಾವುದೇ ಸಮಸ್ಯೆಗಳಿದ್ದರೂ, ಈ ರೈಲು ಮದದ್ಎಂ ಬ ವೆಬ್ ಪೇಜ್‌ನಲ್ಲಿ ದೂರು ಸಲ್ಲಿಸಿದರೆ ತಕ್ಷಣಕ್ಕೆ ಪ್ರಯಾಣಿಕನಿರುವ ಬೋಗಿಗೆ ರೈಲ್ವೆ ಅಧಿಕಾರಿಗಳು ಬರ್ತಾರೆ. ನೈರುತ್ಯ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಂದ ಪ್ರತಿ ತಿಂಗಳು ೭ ರಿಂದ ೮ ಸಾವಿರ ದೂರುಗಳು ಬರುತ್ತಿವೆ. ಬಂದ ದೂರುಗಳನ್ನ ಖುದ್ದು ರೈಲ್ವೆ ಪೊಲೀಸರು ಹಾಗೂ ಟಿಕೆಟ್ ಕಲೆಕ್ಟರ್‌ಗಳು ಪರಿಶೀಲಿಸಿ ಸಮಸ್ಯೆ ಪರಿಹರಿಸುತ್ತಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

Most Popular