ಬೆಂಗಳೂರು : ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ರವರ ಕಾರವಾರ, ಮುಂಬೈ, ದೆಹಲಿ, ಗೋವಾದ ಮನೆ ಹಾಗೂ ವ್ಯವಹಾರಕ್ಕೆ ಸಂಭಂದಿಸಿದಂತೆ ಇ.ಡಿ. ಅಧಿಕಾರಿಗಳಿಂದ ರೇಡ್ ಮಾಡಲಾಗಿತ್ತು. ದಾಳಿ ವೇಳೆ ಅಕ್ರಮ ಆಸ್ತಿ ಪತ್ತೆ ಆರೋಪ ಹಿನ್ನೆಲೆಯಲ್ಲಿ ಸೈಲ್ ಅವರನ್ನು ಇಡಿ ಬಂಧಿಸಿದೆ.
ಕಳೆದ ಆಗಸ್ಟ್ 14 ರಂದು ಶಾಸಕರ ಮನೆ, ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಆ ಸಂದರ್ಭದಲ್ಲಿ ರೂ.1.68 ಕೋಟಿ ನಗದು, 6.75 ಕೆಜಿ ಚಿನ್ನದ ಬಿಸ್ಕತ್, ಆಭರಣಗಳು ಸೇರಿ ಬ್ಯಾಂಕ್ ಖಾತೆಗಳಲ್ಲಿ ರೂ.14.13 ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿತ್ತು.ಇದೀಗ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ED ಅಧಿಕಾರಿಗಳು ಶಾಸಕ ಸತೀಸ್ ಸೈಲ್ ರವರನ್ನು ಬಂಧಿಸಿದ್ದಾರೆ.


