ಬೆಂಗಳೂರು : ಯುವಕ ಯುವತೀಯರ ರೀಲ್ಸ್ ಅಂತೂ ಬಿಡಿ ಇದ್ದದ್ದೇ ಆದರೆ ಇಲ್ಲಿ KSRTC, BMTC ಚಾಲಕರ ರೀಲ್ಸ್ ಕ್ರೇಜ್ ಹುಚ್ಚಾಟಕ್ಕೆ ಪ್ರಯಾಣಿಕರು ದಂಗಾಗಿದ್ದು ಈ ಬಗ್ಗೆ ಅಧಿಕಾರಿಗಳಿಗೆ ದೂರುನೀಡಿದ ಘಟನೆ ವರದಿಯಾಗಿತ್ತು.ಇಲ್ಲಿ ಚರ್ಚಿಸುವ ವಿಷಯವೆಂದರೆ ಕೆಎಸ್ಆರ್ಟಿಸಿ , ಬಿಎಂಟಿಸಿ ಬಸ್ ಚಾಲಕರು, ನಿರ್ವಾಹಕರು ಕೂಡ ರೀಲ್ಸ್ ಮಾಡುತ್ತ ಪ್ರಯಾಣಿಕರ ಜೀವನದ ಜೊತೆ ಆಟ ಆಡ್ತಿದ್ದಾರೆ. ಹೀಗಾಗಿ ಸರ್ಕಾರ ಖಡಕ್ ಸೂಚನೆ ನೀಡಿದೆ.
ಬೈಕ್ ,ಕಾರು ,ಇನ್ನಿತರ ವಾಹನಗಳಲ್ಲಿ ಅಂತೂ ರೀಲ್ಸ್ ಮಾಡ್ತಾರೆ ಬಿಡಿ ಆದರೆ ಚಾರ್ಮಾಡಿ ಘಾಟಿ,ಶಿರಡಿ ಘಾಟಿ ಹಾಗೂ ಇನ್ನಿತರ ಅಪಾಯಕಾರಿ ತಿರುವಿನಲ್ಲಿ ಚಾಲಕರ ಹುಚ್ಚಾಟಕ್ಕೆ ಪ್ರಯಾಣಿಕರು ಭಯಬೀತರಾಗಿದ್ದರು.
ಎದುರಿಗಿನ ಬಸ್ ಚೇಸ್ ಮಾಡೋ ರೀಲ್ಸ್, ಸಿಂಹಾಂದ್ರಿಯ ಸಿಂಹ ಸಿನಿಮಾದ ಸಿಂಹ ಸಿಂಹ ಸಾಂಗಿಗೆ ಪ್ರಯಾಣಿಕರಿಗೆ ಕೈ ಬೀಸಿಕೊಂಡು ರೀಲ್ಸ್, ರಾಕಿಂಗ್ ಸ್ಟಾರ್ ಯಶ್ ಅಭಿನಯದ ರಾಮಾಚಾರಿ ಸಿನಿಮಾದ ನುಗ್ಗೋದೆ ಸಿಂಗಲ್ಲು ಸಾಂಗ್ ಗೆ ಡ್ರೈವಿಂಗ್ ಮಾಡಿಕೊಂಡು ರೀಲ್ಸ್, ಭಯಾನಕ ಶಿರಾಡಿ ಗಾಟ್ ಸೆಕ್ಷನ್ ರೋಡ್ ನಲ್ಲಿ ಡ್ರೈವಿಂಗ್ ಮಾಡ್ಕೊಂಡು ರೀಲ್ಸ್ ಗೆ ಮಾಡಿದ ಡ್ರೈವರ್ ಗಳು ಹೀಗೆ ಡ್ರೈವಿಂಗ್ ಮಾಡುತ್ತಲೇ ಪ್ರಯಾಣಿಕರ ಪ್ರಾಣವನ್ನು ಲೆಕ್ಕಿಸದೇ ರೀಲ್ಸ್ ಮಾಡುತ್ತಿರುವ ಡ್ರೈವರ್ ಗಳ ಸಂಖ್ಯೆ ಹೆಚ್ಚಾಗಿದೆ. ಇತ್ತ ಬಿಎಂಟಿಸಿಯ ಲೇಡಿ ಕಂಡಕ್ಟರ್ ನೀ ಡ್ರೈವರ್ ಆ ನನ್ನ ಲವ್ವರ್ ಸಾಂಗ್ ಗೆ ಬಿಎಂಟಿಸಿ ಬಸ್ ನಲ್ಲೇ ರೀಲ್ಸ್ ಮಾಡಿದ್ದಾರೆ.ಈ ರೀಲ್ಸ್ಗಳಿಂದಲೇ ಫೇಮಸ್ ಆಗಿ ಜೀವನವನ್ನೇ ಬದಲಾಯಿಸಿಕೊಂಡ ಕೆಲವರನ್ನು ಸ್ಫೂರ್ತಿಯಾಗಿ ಪಡೆದು ಮತ್ತಷ್ಟು ಹುಚ್ಚಾಟಕ್ಕೆ ಇಳಿಯುತ್ತಿದ್ದಾರೆ.
ಸಾರಿಗೆ ಬಸ್ ಚಾಲಕನ ರೀಲ್ಸ್ ಹುಚ್ಚಾಟಕ್ಕೆ ಎರಡು ಎತ್ತುಗಳು ಬಲಿಯಾದ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಬಳಿ ಬುಧವಾರ ನಡೆದಿತ್ತು. ಘಟನೆಯಲ್ಲಿ ಇಬ್ಬರು ರೈತರಿಗೆ ಗಂಭೀರವಾದ ಗಾಯಗಳಾಗಿತ್ತು ಈ ಗಬ್ಬೆ ಹೆಚ್ಚೆತ್ತ ಸರಕಾರ ಇದಕ್ಕೆ ಕಡಿವಾಣ ಹಾಕಲು ಖಡಕ್ ನಿರ್ಧಾರ ಮಾಡಿದ್ದಾರೆ. ಯಾರೇ ರೀಲ್ಸ್ ಮಾಡಿದ್ರೂ ಅವರನ್ನ ಕೂಡಲೇ ಸಸ್ಪೆಂಡ್ ಮಾಡಲು ಸಾರಿಗೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.