Thursday, March 12, 2026
Flats for sale
Homeರಾಜ್ಯಬಾಗಲಕೋಟೆ ; ಅಬ್ಬಾಬ್ಬ.. ಲೂಟಿ ‌ಕೋರಿ ಕೃಷಿ ಇಲಾಖೆ ಜಂಟಿ ನಿರ್ದೇಶಕಿಯ ಮನೆಯಲ್ಲಿ ಸಿಕ್ತು 32...

ಬಾಗಲಕೋಟೆ ; ಅಬ್ಬಾಬ್ಬ.. ಲೂಟಿ ‌ಕೋರಿ ಕೃಷಿ ಇಲಾಖೆ ಜಂಟಿ ನಿರ್ದೇಶಕಿಯ ಮನೆಯಲ್ಲಿ ಸಿಕ್ತು 32 ಲಕ್ಷ ಹಣ, ಆಸ್ತಿ ದಾಖಲೆ, ಹಾಗೂ 2 ಅದೃಷ್ಟದ ಆಮೆಗಳು ಪತ್ತೆ..!

ಬಾಗಲಕೋಟೆ : ಬಾಗಲಕೋಟೆ ಕೃಷಿ ಜಂಟಿ ನಿರ್ದೇಶಕಿ ಚೇತನಾ ಪಾಟೀಲ್​​ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಕೃಷಿ ಇಲಾಖೆ ಜಂಟಿ ನಿರ್ದೇಶಕಿಯ ಲೂಟಿ ಕೃಷಿಯಾಗಿದೆ. ಮುಂಗಾರು ಬಾರದಿದ್ರೂ ಮೂಟೆಗಟ್ಟಲೆ ಮನಿ ಬೆಳೆದ ಚೇತನಾ.

ಬಾಗಲಕೋಟೆಯ ಅಕ್ಕಿಮರಡಿ ಲೇಔಟ್​ನಲ್ಲಿರುವ ಚೇತನಾ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚೇತನಾ ಪಾಟೀಲ್ ಮನೆಯಲ್ಲಿ 32 ಲಕ್ಷ ಪತ್ತೆಯಾಗಿದ್ದು, ಲೋಕಾಯುಕ್ತ ಎಸ್​ಪಿ ಅನಿತಾ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗಿದೆ. ಪರಿಶೀಲನೆ ವೇಳೆ ಎರಡು ಲಾಕರ್ ಪತ್ತೆ , 31 ವ್ಯಾನಿಟಿ ಬ್ಯಾಗ್ ಕೂಡ​​ ಪತ್ತೆಯಾಗಿದೆ.

ಚೇತನಾ ಪಾಟೀಲ್ ಮನೆಯಲ್ಲೇ ಎರಡು ಆಮೆಗಳನ್ನು ಸಾಕಿದ್ದು ಕೂಡ ಬೆಳಕಿಗೆ ಬಂದಿದ್ದು, ಸುಮಾರು 20 ವರ್ಷ ವಯೋಮಾನದ ಎರಡು ಆಮೆಗಳು ಪತ್ತೆಯಾಗಿದೆ. ಅದೃಷ್ಟದ ಆಮೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. DySPಗಳಾದ ಶಂಕರ ರಾಗಿ, ಪುಷ್ಪಲತಾ ನೇತೃತ್ವದಲ್ಲಿ ಪರಿಶೀಲನೆ ನಡೆಸಿದ್ಧಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular